ETV Bharat / international

1850ರ ನಂತರ 2024ನೇ ಇಸ್ವಿ ಅತ್ಯಧಿಕ ತಾಪಮಾನದ ವರ್ಷ: ಕೋಪರ್ನಿಕಸ್ ವರದಿ - WARMEST YEAR

2024ನೇ ವರ್ಷವು ಜಾಗತಿಕವಾಗಿ ಅತ್ಯಧಿಕ ತಾಪಮಾನದ ವರ್ಷವಾಗಿತ್ತು ಎಂದು ವರದಿ ಹೇಳಿದೆ.

1850ರ ನಂತರ 2024ನೇ ಇಸ್ವಿ ಅತ್ಯಧಿಕ ತಾಪಮಾನದ ವರ್ಷ: ಕೋಪರ್ನಿಕಸ್ ವರದಿ
1850ರ ನಂತರ 2024ನೇ ಇಸ್ವಿ ಅತ್ಯಧಿಕ ತಾಪಮಾನದ ವರ್ಷ: ಕೋಪರ್ನಿಕಸ್ ವರದಿ (ians)
author img

By ETV Bharat Karnataka Team

Published : 4 hours ago

ಬ್ರಸೆಲ್ಸ್ , ಬೆಲ್ಜಿಯಂ: 1850ರಲ್ಲಿ ಹವಾಮಾನ ಮಾಹಿತಿಯ ದಾಖಲೀಕರಣ ಆರಂಭವಾದ ನಂತರ 2024ನೇ ವರ್ಷವು ಜಾಗತಿಕವಾಗಿ ಅತ್ಯಂತ ಬಿಸಿಯಾದ ವರ್ಷವಾಗಿತ್ತು ಎಂದು ಯುರೋಪಿಯನ್ ಯೂನಿಯನ್ ಅನುದಾನದಡಿ ಕೆಲಸ ಮಾಡುವ ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವಾ ಸಂಸ್ಥೆ (ಸಿ3ಎಸ್) ಶುಕ್ರವಾರ ಹೇಳಿದೆ. ಹೀಗಾಗಿ ಹವಾಮಾನ ಬದಲಾವಣೆ ತಡೆಗೆ ತುರ್ತು ಜಾಗತಿಕ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂದು ತಜ್ಞರು ಹೇಳಿದ್ದಾರೆ.

2024ನೇ ವರ್ಷವು ಪ್ಯಾರಿಸ್ ಒಪ್ಪಂದದಲ್ಲಿ ನಿಗದಿಪಡಿಸಲಾದ ನಿರ್ಣಾಯಕ ಮಿತಿಯಾದ ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಸರಾಸರಿ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ಮೀರಿದ ಮೊದಲ ಕ್ಯಾಲೆಂಡರ್ ವರ್ಷವಾಗಿದೆ ಎಂದು ಯುರೋಪಿಯನ್ ಹವಾಮಾನ ಸಂಸ್ಥೆಯ ಪತ್ರಿಕಾ ಪ್ರಕಟಣೆಯನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

2024 ರಲ್ಲಿ ಜಾಗತಿಕ ಸರಾಸರಿ ತಾಪಮಾನವು 15.1 ಡಿಗ್ರಿ ಸೆಲ್ಸಿಯಸ್ ಆಗಿತ್ತು. ಇದು 2023 ಕ್ಕಿಂತ 0.12 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಹಾಗೂ ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.6 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ಕೋಪರ್ನಿಕಸ್ ಹೇಳಿದೆ. 2023 ಮತ್ತು 2024ರ ಎರಡು ವರ್ಷಗಳ ಸರಾಸರಿಯು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ 1.5 ಡಿಗ್ರಿ ಸೆಲ್ಸಿಯಸ್ ಮಿತಿ ಮೀರಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಾಗತಿಕ ತಾಪಮಾನವನ್ನು ಕೈಗಾರಿಕಾ ಪೂರ್ವ ಮಟ್ಟಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆ ಮಾಡುವುದು ಪ್ಯಾರಿಸ್ ಒಪ್ಪಂದದ ಗುರಿಯಾಗಿದೆ. ಈ ಶತಮಾನದ ಅಂತ್ಯದ ವೇಳೆಗೆ ಅದನ್ನು 1.5 ಡಿಗ್ರಿ ಸೆಲ್ಸಿಯಸ್ ಗೆ ಮಿತಿಗೊಳಿಸುವ ಗುರಿ ಒಪ್ಪಂದದಲ್ಲಿದೆ.

"ನಾವು ಪ್ಯಾರಿಸ್ ಒಪ್ಪಂದವು ನಿಗದಿಪಡಿಸಿದ ಮಿತಿ ಉಲ್ಲಂಘಿಸಿದ್ದೇವೆ ಎಂದು ಇದರ ಅರ್ಥವಲ್ಲವಾದರೂ - ಇದು ಕನಿಷ್ಠ 20 ವರ್ಷಗಳಲ್ಲಿನ ಸರಾಸರಿ ತಾಪಮಾನ ವೈಪರೀತ್ಯಗಳನ್ನು ಸೂಚಿಸುತ್ತದೆ. ಜಾಗತಿಕ ತಾಪಮಾನವು ಆಧುನಿಕ ಮಾನವರು ಈ ಹಿಂದೆಂದೂ ಅನುಭವಿಸಿದ್ದಕ್ಕಿಂತ ಹೆಚ್ಚಾಗುತ್ತಿದೆ ಎಂಬುದನ್ನು ಇದು ಒತ್ತಿ ಹೇಳುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಾತಾವರಣದಲ್ಲಿನ ಒಟ್ಟು ನೀರಿನ ಆವಿಯ ಪ್ರಮಾಣವು 2024 ರಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಇದು 1991 -2020 ರ ಸರಾಸರಿಗಿಂತ ಸುಮಾರು 5 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು 2023 ಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಕೋಪರ್ನಿಕಸ್ ಹವಾಮಾನ ಬದಲಾವಣೆ ಸೇವೆಯ ದತ್ತಾಂಶವು ತೋರಿಸಿದೆ.

ಇದನ್ನೂ ಓದಿ : ಪಾಕಿಸ್ತಾನ: ಟಿಟಿಪಿ ಉಗ್ರರಿಂದ ಪರಮಾಣು ಆಯೋಗದ 16 ಕಾರ್ಮಿಕರ ಅಪಹರಣ, 8 ಜನರ ರಕ್ಷಣೆ - PAKISTAN TTP

ETV Bharat Logo

Copyright © 2025 Ushodaya Enterprises Pvt. Ltd., All Rights Reserved.