2025 SUZUKI GIXXER SERIES: ದ್ವಿಚಕ್ರ ವಾಹನ ತಯಾರಕ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ 2025 ರ ಮಾಡೆಲ್ ವರ್ಷಕ್ಕೆ ತನ್ನ V -Strom SX, Gixxer, Gixxer SF, Gixxer 250 ಮತ್ತು Gixxer SF 250 ನ ಅಪ್ಡೇಟ್ಡ್ ಮಾದರಿಗಳನ್ನು ಬಿಡುಗಡೆ ಮಾಡಿದೆ. ನಾಲ್ಕು ಮೋಟಾರ್‌ಸೈಕಲ್‌ಗಳನ್ನು ಈಗ OBD-2B ಯೊಂದಿಗೆ ಅಪ್ಡೇಟ್ ಮಾಡಲಾಗಿದೆ. ಅಷ್ಟೇ ಅಲ್ಲ ಹೊಸ ಬಣ್ಣ ಆಯ್ಕೆಗಳಲ್ಲಿಯೂ ಇದು ಲಭ್ಯವಾಗಿದೆ.
ಸುಜುಕಿ ವಿ - ಸ್ಟ್ರೋಮ್ ಎಸ್‌ಎಕ್ಸ್‌ನ ವೈಶಿಷ್ಟ್ಯಗಳು: 2025 ರ ಮಾಡೆಲ್ ಬೈಕ್ ಅನ್ನು ಮೂರು ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಚಾಂಪಿಯನ್ ಯೆಲ್ಲೋ ನಂಬರ್ 2, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಅಂಡ್ ಮೆಟಾಲಿಕ್ ಸೊನೊಮಾ ರೆಡ್. ಈ ಮೋಟಾರ್‌ಸೈಕಲ್ ಅನ್ನು 2.16 ಲಕ್ಷ ರೂ.ಗಳ ಆರಂಭಿಕ ಬೆಲೆಯಲ್ಲಿ (ಎಕ್ಸ್ ಶೋ ರೂಂ) ಬಿಡುಗಡೆ ಮಾಡಲಾಗಿದೆ.
ಇದರ ಪವರ್‌ಟ್ರೇನ್ ಬಗ್ಗೆ ಹೇಳುವುದಾದರೆ, ಮೋಟಾರ್ ಸೈಕಲ್ 249cc, ಸಿಂಗಲ್ - ಸಿಲಿಂಡರ್ ಎಂಜಿನ್ ಬಳಸುತ್ತದೆ. ಅದು ಈಗ OBD-2B ಕಂಪ್ಲೈಂಟ್ ಆಗಿದೆ. ಆದರೆ, ವಿಶೇಷ ಎಂದರೆ ಈ ಅಪ್ಡೇಟ್ಡ್ ನಂತರವೂ ಅದರ ಕಾರ್ಯಕ್ಷಮತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಎಂಜಿನ್ 9300 rpm ನಲ್ಲಿ 26.1 bhp ಪವರ್ ಮತ್ತು 7,300 rpm ನಲ್ಲಿ 22.2 Nm ಗರಿಷ್ಠ ಟಾರ್ಕ್ ಅಭಿವೃದ್ಧಿಪಡಿಸುತ್ತದೆ.
ಸುಜುಕಿ ಜಿಕ್ಸರ್ 250 ಸೀರಿಸ್ನ ವೈಶಿಷ್ಟ್ಯಗಳು: ಗಿಕ್ಸರ್ 250 ಸರಣಿಯ ಬಗ್ಗೆ ಹೇಳುವುದಾದರೆ, ಕಂಪನಿ 250 ಮತ್ತು SF 250 ಗಳನ್ನು ಕ್ರಮವಾಗಿ ರೂ. 1.98 ಲಕ್ಷ ಮತ್ತು ರೂ. 2.07 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಕಂಪನಿ ಈ ಬೈಕ್ ಅನ್ನು ಮೂರು ಬಣ್ಣಗಳ ಆಯ್ಕೆಗಳಲ್ಲಿ ಪರಿಚಯಿಸಿದೆ.
ಈ ಬಣ್ಣಗಳ ಆಯ್ಕೆಗಳಲ್ಲಿ ಮೆಟಾಲಿಕ್ ಮ್ಯಾಟ್ ಬ್ಲಾಕ್ ನಂ.2, ಮೆಟಾಲಿಕ್ ಮ್ಯಾಟ್ ಬ್ಲಾಕ್ ನಂ.2/ಮೆಟಾಲಿಕ್ ಮ್ಯಾಟ್ ಬೋರ್ಡೆಕ್ಸ್ ರೆಡ್ ಮತ್ತು ಮೆಟಾಲಿಕ್ ಟ್ರೈಟಾನ್ ಬ್ಲೂ/ಪರ್ಲ್ ಗ್ಲೇಸಿಯರ್ ವೈಟ್ ಸೇರಿವೆ. ಈ ಬೈಕ್‌ಗಳ ಎಂಜಿನ್‌ಗಳನ್ನು OBD - 2B ಮಾನದಂಡಗಳನ್ನು ಪೂರೈಸಲು ಅಪ್ಡೇಟ್ ಮಾಡಲಾಗಿದೆ. ಇದು ವಿ - ಸ್ಟ್ರೋಮ್‌ನಲ್ಲಿ ಕಂಡು ಬರುವ ಅದೇ 249 ಸಿಸಿ ಎಂಜಿನ್ ಹೊಂದಿದೆ.
ಸುಜುಕಿ ಜಿಕ್ಸರ್ 150 ಸೀರಿಸ್ನ ವೈಶಿಷ್ಟ್ಯಗಳು: ಗಿಕ್ಸ್‌ಸರ್ ಸರಣಿಯ ಸಣ್ಣ ಆವೃತ್ತಿಗಳಾದ ಗಿಕ್ಸ್‌ಸರ್ 150 ಮತ್ತು ಗಿಕ್ಸ್‌ಸರ್ 150 SF, 2025 ರ ಅಪ್ಡೇಟ್ ಆಗಿದ್ದು, ಮೆಟಾಲಿಕ್ ಟ್ರೈಟಾನ್ ಬ್ಲೂ/ಪರ್ಲ್ ಗ್ಲೇಸಿಯರ್ ವೈಟ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್ ಮತ್ತು ಮೆಟಾಲಿಕ್ ಊರ್ಟ್ ಗ್ರೇ/ಮೆಟಾಲಿಕ್ ಲಶ್ ಗ್ರೀನ್ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ. 150cc ಗಿಕ್ಸರ್ ಸೀರಿಸ್ ಬೆಲೆಯ ಬಗ್ಗೆ ಹೇಳುವುದಾದರೆ, ಅವುಗಳನ್ನು ಕ್ರಮವಾಗಿ 1.38 ಲಕ್ಷ ಮತ್ತು 1.47 ಲಕ್ಷ ರೂ. (ಎಕ್ಸ್ ಶೋ ರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಎಂಜಿನ್ ಬಗ್ಗೆ ಹೇಳುವುದಾದರೆ, ಗಿಕ್ಸರ್ 150 ಮತ್ತು ಗಿಕ್ಸರ್ 150 SF ಬೈಕ್ಗಳು 155cc, ಸಿಂಗಲ್ - ಸಿಲಿಂಡರ್ ಎಂಜಿನ್ ಹೊಂದಿದ್ದು, ಅದು ಈಗ OBD-2B ಗೆ ಅನುಗುಣವಾಗಿದೆ. ಈ ಎಂಜಿನ್ 8,000 rpm ನಲ್ಲಿ 13.4 bhp ಪವರ್ ಮತ್ತು 6,000 rpm ನಲ್ಲಿ 13.8 Nm ಟಾರ್ಕ್ ಉತ್ಪಾದಿಸುತ್ತದೆ.