iPhone 16e Global Market Price: ಕೊನೆಗೂ ಆಪಲ್ ತನ್ನ ಐಫೋನ್ 16e ಅನ್ನು ಲೋಕಾರ್ಪಣೆ ಮಾಡಿದೆ. ಅದರ ಇತ್ತೀಚಿನ ಐಫೋನ್ 16 ಸೀರಿಸ್ಗೆ ಈ ಹೊಸ ಫೋನ್ ಅನ್ನು ಹೋಲುತ್ತದೆ. ಈ ಸ್ಮಾರ್ಟ್ಫೋನ್ ಅನ್ನು ಆಪಲ್ ‘ಐಫೋನ್ SE4’ ಎಂದು ಘೋಷಿಸುವ ನಿರೀಕ್ಷೆಯಿತ್ತು. ಆದರೆ ಆಪಲ್ ಇದನ್ನು ಐಫೋನ್ 16 ಸೀರಿಸ್ನಲ್ಲಿ ಆರಂಭಿಕ ಹಂತದ ಮಾದರಿಯಾಗಿ ಇರಿಸಿದೆ.
ಈಗ ಲೋಕಾರ್ಪಣೆಗೊಂಡ ಈ ಐಫೋನ್ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುವ ಅತ್ಯಂತ ಕೈಗೆಟುಕುವ ಸಾಧನವಾಗಿದೆ. ಇದಲ್ಲದೆ, ಐಫೋನ್ 16e ಹಲವಾರು ಪ್ರಮುಖ ಅಪ್‌ಗ್ರೇಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ವರ್ಧಿತ ಡಿಸೈನ್ ಲಾಂಗ್ವೇಜ್, ಪವರ್ಫುಲ್ ಚಿಪ್‌ಸೆಟ್, ಬಿಗ್ ಡಿಸ್ಪ್ಲೇ ಮತ್ತು ಸುಧಾರಿತ ಕ್ಯಾಮರಾ ಸೇರಿದೆ.
ಆಪಲ್ ಐಫೋನ್ 16e ಜಾಗತಿಕ ಬೆಲೆ : ಹೊಸ ಐಫೋನ್ ಮೂರು ಸ್ಟೋರೇಜ್ ವೆರಿಯೆಂಟ್ನಲ್ಲಿ ಬಿಡುಗಡೆಯಾಗಿದೆ. ಬ್ಲ್ಯಾಕ್ ಮತ್ತು ವೈಟ್ ಕಲರ್ ಆಪ್ಷನ್ನಲ್ಲಿ ನೀವು ಇದನ್ನು ಖರೀದಿಸಬಹುದಾಗಿದೆ. ಭಾರತದಲ್ಲಿ 128GB ರೂಪಾಂತರದ ಬೆಲೆ ರೂ. 59,999, 256GB ರೂಪಾಂತರದ ಬೆಲೆ ರೂ. 69,999 ಮತ್ತು 512GB ಬೆಲೆ ರೂ. 89,999 ಇದೆ. ಅದೇ ಅಮೆರಿಕದಲ್ಲಿ 128GB ಬೇಸ್ ರೂಪಾಂತರದ ಬೆಲೆ $599, 256GB ರೂಪಾಂತರದ ಬೆಲೆ $699 ಮತ್ತು 512GB ರೂಪಾಂತರದ ಬೆಲೆ $899 ಆಗಿದೆ.
ಯುಕೆಯಲ್ಲಿ ಐಫೋನ್ 16e 128GB ಮಾದರಿಗೆ £599, 256GB ಮಾದರಿಗೆ £699 ಮತ್ತು 512GB ಮಾದರಿಗೆ £899. ಯುಎಇಯಲ್ಲಿ 128GB, 256GB ಮತ್ತು 512GB ಮಾದರಿಗಳು ಕ್ರಮವಾಗಿ AED 2,599, AED 2,999 ಮತ್ತು AED 3,849 ಬೆಲೆಗೆ ಲಭ್ಯವಿದೆ. ಜಪಾನ್‌ನಲ್ಲಿ 128GB ರೂಪಾಂತರದ ಬೆಲೆ 99,800 YEN, 256GB ರೂಪಾಂತರದ ಬೆಲೆ 1,14,800 YEN ಮತ್ತು 512GB ರೂಪಾಂತರದ ಬೆಲೆ 1,44,800 YEN ಗೆ ಖರೀದಿಸಬಹುದಾಗಿದೆ.
ಐಫೋನ್ 16e ಭಾರತ vs ಗ್ಲೋಬಲ್ ಬೆಲೆ ಹೋಲಿಕೆ ಲಿಸ್ಟ್ | |||
ವೇರಿಯಂಟ್ಸ್ | ಭಾರತ | ಅಮೆರಿಕ | ವ್ಯತ್ಯಾಸ (ರೂ.ಗಳಲ್ಲಿ) |
128GB | 59,999 | $599 (Rs 49,526) | -10,473 |
256GB | 69,999 | $699 (Rs 57,787) | -12,212 |
512GB | 89,999 | $899 (Rs 74,408) | -15,591 |
ವೇರಿಯಂಟ್ಸ್ | ಭಾರತ | ಯುಕೆ | ವ್ಯತ್ಯಾಸ (ರೂ.ಗಳಲ್ಲಿ) |
128GB | 59,999 | £599 (Rs 59,533) | -466 |
256GB | 69,999 | £699 (Rs 69,694) | -305 |
512GB | 89,999 | £899 (Rs 89,607) | -392 |
ವೇರಿಯಂಟ್ಸ್ | ಭಾರತ | ಜಪಾನ್ | ವ್ಯತ್ಯಾಸ (ರೂ.ಗಳಲ್ಲಿ) |
128GB | 59,999 | ¥99,800 (Rs 56,393) | -3,606 |
256GB | 69,999 | ¥1,14,800 (Rs 65,000) | -4,999 |
512GB | 89,999 | ¥1,14,800 (Rs 81,885) | -8,114 |
ವೇರಿಯಂಟ್ಸ್ | ಭಾರತ | ಯುಎಇ | ವ್ಯತ್ಯಾಸ (ರೂ.ಗಳಲ್ಲಿ) |
128GB | 59,999 | AED 2,599 (58,340) | -1,659 |
256GB | 69,999 | AED 2,999 (67,345) | -2,654 |
512GB | 89,999 | AED 3,849 (86,396) | -3,603 |
ಈ ಹೊಸ ಐಫೋನ್ ಅಮೆರಿಕ, ಯುಕೆ, ಜಪಾನ್, ಯುಎಇ, ಭಾರತ, ಮಲೇಷ್ಯಾ, ಚೀನಾ, ಕೆನಡಾ, ಫ್ರಾನ್ಸ್, ಜರ್ಮನಿ ಸೇರಿದಂತೆ ಇತರ ದೇಶಗಳು ಒಳಗೊಂಡಂತೆ 59 ದೇಶಗಳಲ್ಲಿ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ ಆಪಲ್ ತನ್ನ ಈ ಹೊಸ ಐಫೋನ್ 16e ಗಾಗಿ ಸಿಲಿಕೋನ್ ಕೇಸ್‌ಗಳನ್ನು ಪರಿಚಯಿಸಿದೆ. ಇದರ ಬೆಲೆ ರೂ. 3,900 ಆಗಿದ್ದು, ಇದು ಐದು ಕಲರ್ಗಳಲ್ಲಿ ಅಂದ್ರೆ ವಿಂಟರ್ ಬ್ಲೂ, ಫ್ಯೂಷಿಯಾ, ಲೇಕ್ ಗ್ರೀನ್, ಬ್ಲ್ಯಾಕ್ ಆ್ಯಂಡ್ ವೈಟ್ನಲ್ಲಿ ಲಭ್ಯವಿದೆ. ಐಫೋನ್ 16e ಗಾಗಿ ಪ್ರಿ-ಆರ್ಡರ್ಗಳು ಶುಕ್ರವಾರದಿಂದ (ಫೆಬ್ರವರಿ 21) ಪ್ರಾರಂಭವಾಗುತ್ತವೆ. ಅಧಿಕೃತ ಮಾರಾಟ ಇನ್ನು ಕೆಲವೇ ದಿನಗಳಲ್ಲಿ ಅಂದ್ರೆ ಫೆಬ್ರವರಿ 28ರಿಂದ ಪ್ರಾರಂಭವಾಗುತ್ತದೆ.
ಆಪಲ್ ಐಫೋನ್ 16e ವಿಶೇಷತೆ ಮತ್ತು ವೈಶಿಷ್ಟ್ಯಗಳು : ಐಫೋನ್ 16e 60Hz ರಿಫ್ರೆಶ್ ರೇಟ್ದೊಂದಿಗೆ 6.1-ಇಂಚಿನ OLED ಡಿಸ್ಪ್ಲೇ ಹೊಂದಿದೆ. ಈ ಡಿವೈಸ್ A18 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು USB ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ಇದಲ್ಲದೆ, ಇದು ಒಂದೇ 48MP ರಿಯರ್ ಪ್ರೈಮರಿ ಕ್ಯಾಮರಾ ಮತ್ತು 12MP ಫ್ರಂಟ್ ಕ್ಯಾಮರಾವನ್ನು ಹೊಂದಿದೆ. ಇದು ಟಚ್‌ಐಡಿ ಬದಲಿಗೆ ಫೇಸ್‌ಐಡಿಯೊಂದಿಗೆ ಓಪನ್ ಆಗುತ್ತದೆ.
ಓದಿ: ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟ ಆ್ಯಪಲ್ ಐಫೋನ್ 16ಇ; ಬೆಲೆ, ವೈಶಿಷ್ಟ್ಯತೆಗಳು ಹೀಗಿವೆ