ETV Bharat / bharat

ರಾಜ್ಯಗಳಿಗೆ ತೆರಿಗೆ ಪಾಲು: ಕರ್ನಾಟಕಕ್ಕೆ 6,310 ಕೋಟಿ, ಯುಪಿಗೆ ಅತ್ಯಧಿಕ 31,039 ಕೋಟಿ ಹಂಚಿಕೆ - STATES TAX SHARE

ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ತೆರಿಗೆ ಹಂಚಿಕೆ ಬಿಡುಗಡೆ ಮಾಡಿದೆ.

ರಾಜ್ಯಗಳಿಗೆ ತೆರಿಗೆ ಪಾಲು: ಕರ್ನಾಟಕಕ್ಕೆ 6,310 ಕೋಟಿ, ಯುಪಿಗೆ ಅತ್ಯಧಿಕ 31,039 ಕೋಟಿ ಹಂಚಿಕೆ
ರಾಜ್ಯಗಳಿಗೆ ತೆರಿಗೆ ಪಾಲು: ಕರ್ನಾಟಕಕ್ಕೆ 6,310 ಕೋಟಿ, ಯುಪಿಗೆ ಅತ್ಯಧಿಕ 31,039 ಕೋಟಿ ಹಂಚಿಕೆ (ians)
author img

By ETV Bharat Karnataka Team

Published : 4 hours ago

ನವದೆಹಲಿ: ಕೇಂದ್ರ ಸರ್ಕಾರವು ಶುಕ್ರವಾರ ರಾಜ್ಯ ಸರ್ಕಾರಗಳ ಪಾಲಿನ 1,73,030 ಕೋಟಿ ರೂ.ಗಳ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಿದೆ. ರಾಜ್ಯಗಳು ತಮ್ಮ ಬಂಡವಾಳ ವೆಚ್ಚ ಹೆಚ್ಚಿಸಲು, ತಮ್ಮ ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಸಾಧ್ಯವಾಗುವಂತೆ ಈ ತಿಂಗಳು ಹೆಚ್ಚಿನ ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಶುಕ್ರವಾರ ಒಟ್ಟು 26 ರಾಜ್ಯಗಳಿಗೆ ತೆರಿಗೆ ಹಂಚಿಕೆಯನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ಪಶ್ಚಿಮ ಬಂಗಾಳಕ್ಕೆ 13,017.06 ಕೋಟಿ ರೂ., ಆಂಧ್ರಪ್ರದೇಶಕ್ಕೆ 7,002.52 ಕೋಟಿ ರೂ., ಕರ್ನಾಟಕಕ್ಕೆ 6,310.40 ಕೋಟಿ ರೂ., ಅಸ್ಸಾಂಗೆ 5,412.38 ಕೋಟಿ ರೂ., ಛತ್ತೀಸ್ ಗಢಕ್ಕೆ 5,895.13 ಕೋಟಿ ರೂ., ಕೇರಳಕ್ಕೆ 1,436.16 ಕೋಟಿ ರೂ., ಪಂಜಾಬ್​ಗೆ 3,126.65 ಕೋಟಿ ರೂ. ಮತ್ತು ತಮಿಳುನಾಡಿಗೆ 7,057.89 ಕೋಟಿ ರೂ. ಬಿಡುಗಡೆಯಾಗಿದೆ.

ಪಶ್ಚಿಮ ಬಂಗಾಳ - ಮಧ್ಯಪ್ರದೇಶಕ್ಕೂ ಸಿಂಹ ಪಾಲು: ಇತರ ರಾಜ್ಯಗಳ ಪೈಕಿ ಉತ್ತರ ಪ್ರದೇಶಕ್ಕೆ 31,039.84 ಕೋಟಿ ರೂ., ಮಹಾರಾಷ್ಟ್ರಕ್ಕೆ 10,930.31 ಕೋಟಿ ರೂ., ಗುಜರಾತ್ ಗೆ 6,017.99 ಕೋಟಿ ರೂ., ಮಧ್ಯ ಪ್ರದೇಶಕ್ಕೆ 13,582.86 ಕೋಟಿ ರೂ., ಮಣಿಪುರಕ್ಕೆ 1,238.9 ಕೋಟಿ ರೂ. ಮತ್ತು ಮೇಘಾಲಯಕ್ಕೆ 1,327.13 ಕೋಟಿ ರೂ. ಬಿಡುಗಡೆಯಾಗಿದೆ.

ತೆರಿಗೆಗಳ ನಿವ್ವಳ ಆದಾಯದಲ್ಲಿ ಈ ಹಂಚಿಕೆ: ತೆರಿಗೆ ವಿಕೇಂದ್ರೀಕರಣವು ಕೇಂದ್ರ ಸರ್ಕಾರವು ತಾನು ಸಂಗ್ರಹಿಸುವ ತೆರಿಗೆಗಳ ನಿವ್ವಳ ಆದಾಯವನ್ನು ರಾಜ್ಯಗಳಿಗೆ ವಿತರಿಸುವ ಪ್ರಕ್ರಿಯೆಯಾಗಿದೆ. ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನಿಯಮಿತ ಕಂತುಗಳಲ್ಲಿ ತೆರಿಗೆ ಮೊತ್ತವನ್ನು ಹಂಚಿಕೆ ಮಾಡುತ್ತದೆ. ಕಾರ್ಪೊರೇಟ್ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ ಮತ್ತು ಕೇಂದ್ರ ಜಿಎಸ್​ಟಿ ಸೇರಿದಂತೆ ಎಲ್ಲಾ ತೆರಿಗೆಗಳ ಒಟ್ಟು ನಿವ್ವಳ ಆದಾಯದಲ್ಲಿ ರಾಜ್ಯಗಳಿಗೆ ನೀಡಬೇಕಾದ ಪಾಲಿನ ಬಗ್ಗೆ ಹಣಕಾಸು ಆಯೋಗ ಶಿಫಾರಸು ಮಾಡುತ್ತದೆ.

ಏನಿದು ಲಂಬ ವಿಕೇಂದ್ರೀಕರಣ: 2021-26ರ ಅವಧಿಗೆ ಕೇಂದ್ರ ಸರ್ಕಾರದ ವಿಭಜಿತ ತೆರಿಗೆ ಸಂಗ್ರಹದ ಶೇಕಡಾ 41 ರಷ್ಟು ರಾಜ್ಯಗಳಿಗೆ ಹಂಚಿಕೆ ಮಾಡಬೇಕು ಎಂದು 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ. ಇದನ್ನು ಲಂಬ ವಿಕೇಂದ್ರೀಕರಣ (vertical devolution) ಎಂದು ಕರೆಯಲಾಗುತ್ತದೆ.

ಸಮತಲ ವಿಕೇಂದ್ರೀಕರಣ (horizontal devolution) ಎಂದು ಕರೆಯಲ್ಪಡುವ ರಾಜ್ಯಗಳ ನಡುವೆ ನಿಧಿಗಳನ್ನು ವಿತರಿಸುವ ಮಾನದಂಡಗಳನ್ನು ಸಹ ಆಯೋಗವು ಶಿಫಾರಸು ಮಾಡಿದೆ. ಈ ಮಾನದಂಡಗಳಲ್ಲಿ ಆದಾಯದ ಅಂತರ ಮಾನದಂಡವೂ ಸೇರಿದ್ದು, ಇದು ಅತಿ ಹೆಚ್ಚು ತಲಾ ಆದಾಯವನ್ನು ಹೊಂದಿರುವ ರಾಜ್ಯದಿಂದ ರಾಜ್ಯದ ಆದಾಯದಲ್ಲಿನ ವ್ಯತ್ಯಾಸ ಪ್ರತಿ ಬಿಂಬಿಸುತ್ತದೆ.

ಇದನ್ನೂ ಓದಿ : ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಭಾರತ: ಯುಎನ್ - ECONOMY

ETV Bharat Logo

Copyright © 2025 Ushodaya Enterprises Pvt. Ltd., All Rights Reserved.