ಇಂಡಿಯಾನಾ (ಅಮೆರಿಕ):ಯುನೈಟೆಡ್ ಸ್ಟೇಟ್ಸ್‌ನ ಇಂಡಿಯಾನಾದ ವಾರೆನ್ ಕೌಂಟಿಯಲ್ಲಿಭಾರತ ಮೂಲದ 23 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಮೀರ್ ಕಾಮತ್ ಎಂಬಾತ ತಲೆಗೆ ಗುಂಡು ಹಾರಿಸಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಫೆ. 5 ರಂದು ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ.
ಇಂಡಿಯಾನಾದ ವಿಲಿಯಮ್ಸ್‌ಪೋರ್ಟ್‌ನಲ್ಲಿರುವ ನೆಕ್ಸ್ ಲ್ಯಾಂಡ್ ಟ್ರಸ್ಟ್ - ಕ್ರೌಸ್ ಗ್ರೋವ್‌ನ ಅರಣ್ಯ ಪ್ರದೇಶದಲ್ಲಿ ಸಮೀರ್ ಕಾಮತ್ ಶವ ಪತ್ತೆಯಾಗಿದೆ. ಫೆ. 6 ರಂದು ಇಂಡಿಯಾನಾದ ಕ್ರಾಫೋರ್ಡ್ಸ್ ವಿಲ್ಲೆಯಲ್ಲಿ ಶವಪರೀಕ್ಷೆ ಮಾಡಲಾಗಿದೆ ಎಂದು ವಾರೆನ್ ಕೌಂಟಿ ಕರೋನರ್ ಕಚೇರಿಯ ಕರೋನರ್ ಜಸ್ಟಿನ್ ಬ್ರಮ್ಮೆಟ್ ಬುಧವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರ್ಡ್ಯೂ ವಿಶ್ವವಿದ್ಯಾಲಯದ ಪತ್ರಿಕೆ 'ದಿ ಪರ್ಡ್ಯೂ ಎಕ್ಸ್‌ಪೋನೆಂಟ್‌ನಲ್ಲಿನ ವರದಿಯ ಪ್ರಕಾರ, ಕಾಮತ್ ಅವರು ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಅಭ್ಯರ್ಥಿಯಾಗಿದ್ದರು. ಕಾಮತ್ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಖ್ಯಸ್ಥ ಎಕಾರ್ಡ್ ಗ್ರೋಲ್ ಅವರು ಮಂಗಳವಾರ ಮಧ್ಯಾಹ್ನ ಧೃಡಪಡಿಸಿದ್ದಾರೆ. 2021 ರಲ್ಲಿ ಮೆಸ್ಯಾಚುಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಮೀರ್ ಕಾಮತ್ ಪರ್ಡ್ಯೂಗೆ ಬಂದಿದ್ದರು. ಮುಂಬರುವ 2025 ರಲ್ಲಿ ಡಾಕ್ಟರೇಟ್ ಪದವಿ ಪಡೆಯಬೇಕಿತ್ತು ಎಂದು ತಿಳಿಸಿದೆ.