ETV Bharat / state

ದೈನಿಕ, ಮಾಸಿಕ ಬಸ್​ ಪಾಸ್ ದರ ಹೆಚ್ಚಿಸಿ ಬಿಎಂಟಿಸಿ ಆದೇಶ - BMTC REVISING PASS FARE

ಇತ್ತೀಚಿಗೆ ಬಸ್​ ಟಿಕೆಟ್​ ದರವನ್ನು ಶೇ.15 ರಷ್ಟು ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ ಬಿಎಂಟಿಸಿ ಎಲ್ಲಾ ಪಾಸ್​ಗಳ ದರವನ್ನು ಪರಿಷ್ಕೃರಿಸಿ ಆದೇಶ ಹೊರಡಿಸಿದೆ.

BMTC REVISING PASS FARE
ದೈನಿಕ ಹಾಗೂ ಮಾಸಿಕ ಪಾಸ್ ದರ ಹೆಚ್ಚಿಸಿ ಬಿಎಂಟಿಸಿ ಆದೇಶ (ETV Bharat)
author img

By ETV Bharat Karnataka Team

Published : 13 hours ago

ಬೆಂಗಳೂರು: ಬಿಎಂಟಿಸಿಯ ಪ್ರತಿದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸುಗಳ ದರವನ್ನು ಪರಿಷ್ಕರಿಸಿದ್ದು, ಜ.9 ರಿಂದ ಜಾರಿಗೆ ಬರುವಂತೆ ದರ ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ.

ದೈನಿಕ, ಮಾಸಿಕ, ಸಾಪ್ತಾಹಿಕ ಪಾಸುಗಳ ದರಗಳ ಪರಿಷ್ಕರಣೆ ಕುರಿತಂತೆ ಆದೇಶ ಹೊರಬಿದ್ದಿದ್ದು, ಅದರಲ್ಲಿ ಪ್ರಯಾಣಿಕರ ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನೆಲೆಯಲ್ಲಿ ಸಂಸ್ಥೆಯ ಆರ್ಥಿಕ ದೃಷ್ಟಿಯಿಂದ ಪಾಸುಗಳ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ದರ ಏರಿಕೆ ಜನವರಿ 9 (ಗುರುವಾರ) 2025ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

BMTC REVISING PASS FARE
ದೈನಿಕ ಹಾಗೂ ಮಾಸಿಕ ಪಾಸ್ ದರ ಹೆಚ್ಚಿಸಿ ಬಿಎಂಟಿಸಿ ಆದೇಶ (BMTC)

140 ರೂಪಾಯಿ ವಜ್ರ ದೈನಿಕ ಪಾಸು ಮತ್ತು 2000 ರೂಪಾಯಿ ಮಾಸಿಕ ಪಾಸು ಹೊಂದಿರುವ ಪ್ರಯಾಣಿಕರು ಈ ಸೇವೆಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣದ ಮಾರ್ಗದ ಇತರೆ ಬಸ್ ನಿಲ್ದಾಣದಿಂದ ದೇವನಹಳ್ಳಿ ಹಾಗೂ ದೇವನಹಳ್ಳಿಯಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೂ ಪ್ರಯಾಣಿಸಬಹುದಾಗಿದ್ದು, ಟೋಲ್ ಪ್ಲಾಜಾ ಮಾರ್ಗವಾಗಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ಪ್ರಯಾಣಕ್ಕೆ ಅನ್ವಯವಾಗುವ ಟೋಲ್ ಶುಲ್ಕ (ಜಿಎಸ್‌ಟಿ ಒಳಗೊಂಡು) ಪಾವತಿಸುವುದು ಕಡ್ಡಾಯವಾಗಿದೆ. ಕೆಂಪೇಗೌಡ ಬಸ್​ ನಿಲ್ದಾಣದಿಂದ ಚಿಕ್ಕಬಳ್ಳಾಪುರದವರೆಗೂ ಹಾಗೂ ಚಿಕ್ಕಬಳ್ಳಾಪುರದಿಂದ ಕೆಂ.ಬ.ನಿಲ್ದಾಣದವರೆಗೂ ಪ್ರಯಾಣಿಸಲು ಹೆಚ್ಚುವರಿಯಾಗಿ ಪ್ರತಿ ಸುತ್ತುವಳಿಗೆ 40 ರೂ. (ಜಿಎಸ್‌ಟಿ ಒಳಗೊಂಡು) ಹಾಗೂ ಅನ್ವಯವಾಗುವ ಟೋಲ್ ಶುಲ್ಕ ಪಾವತಿಸುವುದು ಕಡ್ಡಾಯವಾಗಿದೆ. ಈ ಪಾಸುದಾರರು ಪಾಸಿನೊಂದಿಗೆ ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಹಾಗೂ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿಗೆ ಪ್ರಯಾಣಿಸಬೇಕಾದಲ್ಲಿ ಪ್ರತಿ ಸುತ್ತುವಳಿಗೆ 40 ರೂ. (ಜಿಎಸ್‌ಟಿ ಒಳಗೊಂಡು) ಹೆಚ್ಚುವರಿಯಾಗಿ ಪಾವತಿಸಬೇಕು ಎಂದು ಹೇಳಿದೆ.ಸಾಮಾನ್ಯ ಮಾಸಿಕ ಪಾಸುದಾರರು ಈ ಸೇವೆಗಳಲ್ಲಿ ಪಾಸಿನೊಂದಿಗೆ ಪ್ರಯಾಣಿಸಲು ಅವಕಾಶವಿರುವುದಿಲ್ಲ. ಎಲ್ಲಾ ಪಾಸುದಾರರು ಟೋಲ್ ಮಾರ್ಗಗಳಲ್ಲಿ ಅನ್ವಯವಾಗುವ ಟೋಲ್ ಶುಲ್ಕಗಳನ್ನು ಪಾವತಿಸುವುದು ಕಡ್ಡಾಯವಾಗಿದೆ. ಸಂಸ್ಥೆಯು ವಿತರಿಸುವ ಯಾವುದೇ ಪಾಸುಗಳನ್ನು, ಸಂಸ್ಥೆಯ ವಿಶೇಷ (ಉದಾ: ಬೆಂಗಳೂರು ದರ್ಶಿನಿ, ಈಶ ಪೌಂಡೇಶನ್, ವಂಡರ್ಲಾ) ಸೇವೆಗಳಲ್ಲಿ ಮಾನ್ಯ ಮಾಡಲಾಗುವುದಿಲ್ಲ ಎಂದು ತಿಳಿಸಿದೆ.

ಪಾಸುಗಳ ದರಪಟ್ಟಿ :

  • ಸಾಮಾನ್ಯ ದೈನಿಕ ಪಾಸು - ಪ್ರಸ್ತುತ ದರ 70 ರೂ., ಪರಿಷ್ಕೃತ ದರ 80 ರೂ., ಗಳು
  • ಸಾಮಾನ್ಯ ಸಾಪ್ತಾಹಿಕ (ವಾರದ) ಪಾಸು ಪ್ರಸ್ತುತ ದರ 300 ರೂ. ಪರಿಷ್ಕೃತ ದರ 350 ರೂ.ಗಳು
  • ಹಿರಿಯ ನಾಗರಿಕ ಸಾಮಾನ್ಯ ಮಾಸಿಕ ಪಾಸು - ಪ್ರಸ್ತುತ ದರ 945 ರೂ., ಪರಿಷ್ಕೃತ ದರ 1080 ರೂ.
  • ಸಾಮಾನ್ಯ ಮಾಸಿಕ ಪಾಸುಗಳು - ಪ್ರಸ್ತುತ ದರ 1050 ರೂ.,ಗಳು., ಪರಿಷ್ಕೃತ ದರ 1200 ರೂ.,ಗಳು
  • ನೈಸ್ ರಸ್ತೆ ಸಾಮಾನ್ಯ ಮಾಸಿಕ ಪಾಸು (ಟೋಲ್ ಶುಲ್ಕ ಒಳಗೊಂಡು) - ಪ್ರಸ್ತುತ ದರ 2,200 ರೂ., ಪರಿಷ್ಕೃತ ದರ 2,350 ರೂ.,ಗಳು
  • ವಾಯು ವಜ್ರ ಪಾಸುಗಳ ದರ:
  • ವಜ್ರ ದೈನಿಕ ಪಾಸು- ಪಾಸು ದರ 114.29 ರೂ., ಜಿಎಸ್‌ಟಿ 5.71 ಒಟ್ಟು 120 ರೂ.,ಗಳು. ಪರಿಷ್ಕೃತ ದರ ಪಾಸಿನ ದರ 133.33 ರೂ., ಜಿಎಸ್‌ಟಿ 6.67ರೂ., ಒಟ್ಟು 140 ರೂ.,ಗಳು.
  • ವಜ್ರ ಮಾಸಿಕ ಪಾಸು - ಪಾಸು ದರ 1714.29 ರೂ., ಜಿಎಸ್‌ಟಿ 85.71 ರೂ., ಒಟ್ಟು 1800 ರೂ.,ಗಳು. ಪರಿಷ್ಕೃತ ದರ ಪಾಸುಗಳು 1904.76 ರೂ., ಜಿಎಸ್‌ಟಿ 95.24 ರೂ., ಒಟ್ಟು 2000 ರೂ.,ಗಳು.
  • ವಾಯು ವಜ್ರ ಮಾಸಿಕ ಪಾಸು - ದರ 3000 ರೂ., ಟೋಲ್ ಶುಲ್ಕ 576 ರೂ., ಜಿಎಸ್‌ಟಿ 179 ರೂ., ಒಟ್ಟು 3755 ರೂ.,ಗಳು. ಪರಿಷ್ಕೃತ ದರ ಪಾಸುಗಳು 3233.52 ರೂ., ಟೋಲ್ ಶುಲ್ಕ 576 ರೂ., ಜಿಎಸ್‌ಟಿ 190.48 ರೂ., ಒಟ್ಟು 4000 ರೂ.,ಗಳು.
  • ವಿದ್ಯಾರ್ಥಿ ವಜ್ರ ಮಾಸಿಕ ಪಾಸು- ಪಾಸು ದರ 1142 ರೂ., ಜಿಎಸ್‌ಟಿ 58 ರೂ., ಒಟ್ಟು 1200 ರೂ.,ಗಳು. ಪರಿಷ್ಕೃತ ದರ ಪಾಸಿನ ದರ 1333.33 ರೂ., ಜಿಎಸ್‌ಟಿ 66.67 ರೂ., ಒಟ್ಟು 1400 ರೂ.

ಇದನ್ನೂ ಓದಿ: ರಾಜ್ಯ ಸಾರಿಗೆ ಬಸ್ ಪ್ರಯಾಣ​ ದರದಲ್ಲಿ ಏರಿಕೆ: ಎಷ್ಟು, ಯಾವಾಗಿನಿಂದ ಎಂಬುದನ್ನು ತಿಳಿಯಿರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.