ETV Bharat / international

2024ರಲ್ಲಿ ಥೈಲ್ಯಾಂಡ್​ಗೆ 35 ಮಿಲಿಯನ್ ಪ್ರವಾಸಿಗರ ಭೇಟಿ: 48 ಬಿಲಿಯನ್ ಡಾಲರ್ ಆದಾಯ - THAILAND TOURISM

ಕಳೆದ ವರ್ಷ ಥೈಲ್ಯಾಂಡ್​​ಗೆ 35 ಮಿಲಿಯನ್ ಪ್ರವಾಸಿಗರು ಭೇಟಿ ನೀಡಿದ್ದಾರೆ.

2024ರಲ್ಲಿ ಥೈಲ್ಯಾಂಡ್​ಗೆ 35 ಮಿಲಿಯನ್ ಪ್ರವಾಸಿಗರ ಭೇಟಿ
2024ರಲ್ಲಿ ಥೈಲ್ಯಾಂಡ್​ಗೆ 35 ಮಿಲಿಯನ್ ಪ್ರವಾಸಿಗರ ಭೇಟಿ (ians)
author img

By ETV Bharat Karnataka Team

Published : 17 hours ago

ಕೈವ್: 2024 ರಲ್ಲಿ ಥೈಲ್ಯಾಂಡ್​ಗೆ 35.54 ಮಿಲಿಯನ್ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 26.27 ರಷ್ಟು ಹೆಚ್ಚಳವಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. ಕಳೆದ ವರ್ಷ ಚೀನಾದಿಂದ ಅತ್ಯಧಿಕ 6.73 ಮಿಲಿಯನ್ ಪ್ರವಾಸಿಗರು ಥೈಲ್ಯಾಂಡ್​ಗೆ ಭೇಟಿ ನೀಡಿದ್ದಾರೆ. 4.95 ಮಿಲಿಯನ್ ಮತ್ತು 2.12 ಮಿಲಿಯನ್ ಪ್ರವಾಸಿಗರೊಂದಿಗೆ ಕ್ರಮವಾಗಿ ಮಲೇಷ್ಯಾ ಮತ್ತು ಭಾರತ ನಂತರದ ಸ್ಥಾನಗಳಲ್ಲಿವೆ ಎಂದು ಥಾಯ್ ಪ್ರವಾಸೋದ್ಯಮ ಮತ್ತು ಕ್ರೀಡಾ ಸಚಿವಾಲಯ ಮಂಗಳವಾರ ತಿಳಿಸಿದೆ.

ಥೈಲ್ಯಾಂಡ್ 2024 ರಲ್ಲಿ ಅಂತರರಾಷ್ಟ್ರೀಯ ಪ್ರವಾಸಿಗರಿಂದ ಸರಿಸುಮಾರು 1.67 ಟ್ರಿಲಿಯನ್ ಬಾಟ್ (ಸುಮಾರು 48.45 ಬಿಲಿಯನ್ ಡಾಲರ್) ಆದಾಯ ಗಳಿಸಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 34 ರಷ್ಟು ಹೆಚ್ಚಳವಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಜನವರಿಯಿಂದ, ಥೈಲ್ಯಾಂಡ್​ಗೆ ಭೇಟಿ ನೀಡುವ ಸಂದರ್ಶಕರು ವಿಶ್ವದಾದ್ಯಂತದ ಎಲ್ಲಾ ಥಾಯ್ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್​ಗಳಲ್ಲಿ ಲಭ್ಯವಿರುವ ಆನ್ ಲೈನ್ ವ್ಯವಸ್ಥೆಯ ಮೂಲಕ ಎಲೆಕ್ಟ್ರಾನಿಕ್ ವೀಸಾಗೆ ಅರ್ಜಿ ಸಲ್ಲಿಸಬಹುದು. ಇದು ಸುವ್ಯವಸ್ಥಿತ ಅರ್ಜಿ ಪ್ರಕ್ರಿಯೆ ಮತ್ತು ಅನುಕೂಲಕರ ಆನ್ ಲೈನ್ ಪಾವತಿ ಆಯ್ಕೆಗಳನ್ನು ಖಚಿತಪಡಿಸುತ್ತದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪ್ರಸ್ತುತ, ಚೀನಾ, ಭಾರತ, ದಕ್ಷಿಣ ಕೊರಿಯಾ ಮತ್ತು ರಷ್ಯಾದಂತಹ ಪ್ರಮುಖ ವಲಯಗಳು ಸೇರಿದಂತೆ 93 ದೇಶಗಳು ಮತ್ತು ಪ್ರದೇಶಗಳ ಪ್ರವಾಸಿಗರು ವೀಸಾ ಇಲ್ಲದೆ 60 ದಿನಗಳವರೆಗೆ ಥೈಲ್ಯಾಂಡ್​ನಲ್ಲಿ ಉಳಿಯಲು ಅವಕಾಶವಿದೆ. ಥೈಲ್ಯಾಂಡ್ ಪ್ರವಾಸೋದ್ಯಮ ಪ್ರಾಧಿಕಾರದ ಪ್ರಕಾರ, ಈ ವರ್ಷ 39 ಮಿಲಿಯನ್ ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.

ಕೊರೊನಾ ಸಾಂಕ್ರಾಮಿಕಕ್ಕೂ ಮೊದಲು 2019 ರಲ್ಲಿ ಥೈಲ್ಯಾಂಡ್​ಗೆ ದಾಖಲೆಯ 39.9 ಮಿಲಿಯನ್ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಆ ವರ್ಷ ಪ್ರವಾಸೋದ್ಯಮದಿಂದ ಥೈಲ್ಯಾಂಡ್​ 1.91 ಟ್ರಿಲಿಯನ್ ಬಾಟ್ (ಸುಮಾರು 55.42 ಬಿಲಿಯನ್ ಡಾಲರ್) ಆದಾಯ ಗಳಿಸಿತ್ತು. ದೇಶದ ಆರ್ಥಿಕ ಬೆಳವಣಿಗೆಯ ಪ್ರಮುಖ ಮೂಲವಾದ ಪ್ರವಾಸೋದ್ಯಮವು 2024 ರ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನದ ಶೇಕಡಾ 14.16 ಮತ್ತು ಉದ್ಯೋಗದ ಶೇಕಡಾ 11.33 ರಷ್ಟನ್ನು ಹೊಂದಿದೆ.

ಇದನ್ನೂ ಓದಿ : ಪಕ್ಷದೊಳಗೆ ಭಿನ್ನಾಭಿಪ್ರಾಯ: ಕೆನಡಾ ಪ್ರಧಾನಿ ಹುದ್ದೆಗೆ ಜಸ್ಟಿನ್‌ ಟ್ರುಡೊ ರಾಜೀನಾಮೆ - CANADA PM RESIGNATION

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.