ETV Bharat / bharat

ಸಾವಿಗೂ ಮುನ್ನ ವಿಡಿಯೋ ಮಾಡಿಟ್ಟು, ಮದುವೆ ಉಡುಪಿನಲ್ಲೇ ದಂಪತಿ ಆತ್ಮಹತ್ಯೆ! - COUPLE DIED IN WEDDING DRESS

ಆರ್ಥಿಕ ಸಮಸ್ಯೆಯಿಂದಾಗಿ ವಿವಾಹ ಉಡುಗೆಯಲ್ಲೇ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮದುವೆ ಉಡುಪಿನಲ್ಲಿ ದಂಪತಿ ಆತ್ಮಹತ್ಯೆ
ಮದುವೆ ಉಡುಪಿನಲ್ಲಿ ದಂಪತಿ ಆತ್ಮಹತ್ಯೆ (ETV Bharat)
author img

By ETV Bharat Karnataka Team

Published : 14 hours ago

ನಾಗ್ಪುರ (ಮಹಾರಾಷ್ಟ್ರ) : ಆತ್ಮಹತ್ಯೆ ಮಹಾಪಾಪವಾದರೂ, ಸಮಸ್ಯೆಗಳು ನಮ್ಮನ್ನು ಹಿಂಡಿಹಿಪ್ಪೆ ಮಾಡಿರುತ್ತವೆ. ಹೀಗಾಗಿ, ಕೊನೆಯ ಅಸ್ತ್ರ ಎಂಬಂತೆ ನೊಂದ ಜೀವಗಳು ಆತ್ಮಹತ್ಯೆಗೆ ಶರಣಾಗುತ್ತಾರೆ. ಇಂಥದ್ದೇ ಒಂದು ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ನಾಗ್ಪುರದ ಜಾರಿಪಟ್ಕಾ ಪೊಲೀಸ್ ಠಾಣೆಯ ಮಾರ್ಟಿನ್​ನಗರದಲ್ಲಿ ದಂಪತಿ ತಮ್ಮ ಮನೆಯಲ್ಲಿ ತಮ್ಮ ವಿವಾಹ ಉಡುಗೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಡೆತ್​ನೋಟ್​​ ಪತ್ತೆ : ಜೆರಿಲ್ ಮ್ಯಾನ್‌ಕ್ರೀಪ್ ಮತ್ತು ಆನ್ನೆ ಮ್ಯಾನ್‌ಕ್ರೀಪ್ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮನೆಯಲ್ಲಿ ಡೆತ್​ನೋಟ್​ ಪತ್ತೆಯಾಗಿದೆ. ಅದರಲ್ಲಿ ಉಲ್ಲೇಖಿಸಿದಂತೆ, ನಮ್ಮ ಮೇಲೆ ಯಾರೂ ಒತ್ತಡ ಹಾಕಿಲ್ಲ. ಸಾವಿಗೆ ಯಾರೂ ಕಾರಣರಲ್ಲ. ಕೌಟುಂಬಿಕ ಪರಿಸ್ಥಿತಿ ಮತ್ತು ಹಣಕಾಸಿನ ಸಮಸ್ಯೆಯಿಂದಾಗಿ ನಾವು ಪ್ರಾಣ ಕಳೆದುಕೊಳ್ಳುತ್ತಿದ್ದೇವೆ ಎಂದು ಅದರಲ್ಲಿ ಬರೆಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಕಂಡು ಪೊಲೀಸರು ಘಟನಾ ಸ್ಥಳ ಪರಿಶೀಲನೆ ನಡೆಸಿದಾಗ, ದಂಪತಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹ ವಸ್ತ್ರದಲ್ಲಿ ಕೊನೆಯುಸಿರು : ಪತಿ ಜೆರಿಲ್ ಮ್ಯಾನ್‌ಕ್ರೀಪ್ ಬಾಣಸಿಗ ವೃತ್ತಿ ಮಾಡುತ್ತಿದ್ದರೆ, ಪತ್ನಿ ಆನ್ನೆ ಮ್ಯಾನ್‌ಕ್ರೀಪ್ ಗೃಹಿಣಿಯಾಗಿದ್ದರು. ದಂಪತಿ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಕೆಲ ಕೌಟುಂಬಿಕ ಸಂಕಷ್ಟಗಳನ್ನೂ ಎದುರಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೋಮವಾರ (ಜನವರಿ 6 ರಂದು) ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಮದುವೆಯ ದಿನ ಧರಿಸಿದ್ದ ಉಡುಪಿನಲ್ಲೇ ಸಂಭ್ರಮ ಆಚರಿಸಿದ್ದಾರೆ. ಬಳಿಕ ಇಬ್ಬರೂ ಅದೇ ಉಡುಗೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮೇಯೊ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: ಬೆಂಗಳೂರು : ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.