ಒಟ್ಟಾವಾ(ಕೆನಡಾ):ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಮೇಲೆ ಖಾಲಿಸ್ತಾನಿ ಉಗ್ರರು ದಾಳಿ ನಡೆಸಿದ್ದು, ಘಟನೆಯನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತೀವ್ರವಾಗಿ ಖಂಡಿಸಿದ್ದಾರೆ.
"ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದಲ್ಲಿ ನಡೆದ ಹಿಂಸಾಚಾರ ಸ್ವೀಕಾರಾರ್ಹವಲ್ಲ. ಪ್ರತಿಯೊಬ್ಬ ಕೆನಡಿಗನಿಗೂ ತಮ್ಮ ನಂಬಿಕೆಯನ್ನು ಮುಕ್ತ ಮತ್ತು ಸುರಕ್ಷಿತವಾಗಿ ಆಚರಿಸುವ ಹಕ್ಕಿದೆ. ಸಮುದಾಯವನ್ನು ರಕ್ಷಿಸಲು ಮತ್ತು ಈ ಘಟನೆಯ ತನಿಖೆಗೆ ತ್ವರಿತವಾಗಿ ಸ್ಪಂದಿಸಿದ್ದ ಪೊಲೀಸರಿಗೆ ಧನ್ಯವಾದ" ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕೂ ಮೊದಲು, ಕೆನಡಾದ ಪ್ರತಿಪಕ್ಷದ ನಾಯಕ ಪಿಯರೆ ಪೊಯಿಲಿವ್ರೆ ದಾಳಿ ಖಂಡಿಸಿ, "ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ಆರಾಧಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿ ಯಾರೂ ಇಷ್ಟಪಡುವಂಥದ್ದಲ್ಲ. ಎಲ್ಲಾ ಕೆನಡಿಯನ್ನರು ಶಾಂತಿ ಮತ್ತು ನಂಬಿಕೆ ಉಳಿಸಿಕೊಳ್ಳಲು ಮುಕ್ತರು" ಎಂದಿದ್ದಾರೆ.
ಟೊರೊಂಟೊ ಸಂಸದ ಕೆವಿನ್ ವುಂಗ್ ಕೂಡ ದಾಳಿಯನ್ನು ಖಂಡಿಸಿ, "ಕೆನಡಾ ಮೂಲಭೂತವಾದಿಗಳಿಗೆ ಸುರಕ್ಷಿತ ಬಂದರು. ದೇಶ ಆಳುವ ನಾಯಕರು ಕ್ರಿಶ್ಚಿಯನ್ನರು ಮತ್ತು ಯಹೂದಿ ಕೆನಡಿಯನ್ನರನ್ನು ರಕ್ಷಿಸಲು ವಿಫಲರಾದಂತೆಯೇ ಹಿಂದೂಗಳನ್ನೂ ರಕ್ಷಿಸಲು ವಿಫಲರಾಗಿದ್ದಾರೆ" ಎಂದುಲ ಆಕ್ರೋಶ ಹೊರಹಾಕಿದ್ದಾರೆ.