ಕರ್ನಾಟಕ

karnataka

ETV Bharat / international

ಹಿಜ್ಬುಲ್ಲಾದ ರಹಸ್ಯ ಯುನಿಟ್​ 910: ಇದು ನಡೆಸಿದ ದಾಳಿಗಳೆಷ್ಟು? - Hezbollah Unit 910

ಹಿಜ್ಬುಲ್ಲಾದ 910 ರಹಸ್ಯ ಯುನಿಟ್​ನ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Sep 30, 2024, 8:05 PM IST

ಹಿಜ್ಬುಲ್ಲಾ ತನ್ನ ಮೇಲೆ ಪ್ರತೀಕಾರದ ದಾಳಿ ನಡೆಸಬಹುದು ಎಂಬ ನಿರೀಕ್ಷೆಯಿಂದ ಇಸ್ರೇಲ್ ಈ ಕುರಿತು ಭಾರಿ ಕಟ್ಟೆಚ್ಚರ ವಹಿಸಿದೆ. ಇಸ್ರೇಲ್ ಮತ್ತು ಪ್ರಪಂಚದಾದ್ಯಂತದ ಯಹೂದಿ ಜನರ ಮೇಲೆ ಇಂಥದೊಂದು ನಿರ್ಣಾಯಕ ದಾಳಿಯನ್ನು ನಡೆಸಲು ಹಿಜ್ಬುಲ್ಲಾ ತನ್ನ ರಹಸ್ಯ ಪಡೆಯನ್ನು ಬಳಸಬಹುದು ಎನ್ನಲಾಗಿದೆ. ಹಿಜ್ಬುಲ್ಲಾದ ಈ ರಹಸ್ಯ ಪಡೆ ಯಾವುದು ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಹಿಜ್ಬುಲ್ಲಾದ 910 ಘಟಕ?: 910 ಯುನಿಟ್ ಲೆಬನಾನ್ ಹೊರಗೆ ಜಾಗತಿಕ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದೆ. ಇದು ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್​ಜಿಸಿ) ಯೊಂದಿಗೆ ನಿಕಟ ಸಂಬಂಧ ಹೊಂದಿದೆ. ಯುನಿಟ್ 910 ಇದು ಅಂತಾರಾಷ್ಟ್ರೀಯ ದಾಳಿಗಳನ್ನು ನಡೆಸಲು ಹಿಜ್ಬುಲ್ಲಾದ ಪ್ರಮುಖ ಅಂಗವಾಗಿದೆ ಎಂದು ಸಂಶೋಧಕ ತಾಲ್ ಬ್ಯಾರಿ ಬಣ್ಣಿಸಿದ್ದಾರೆ. "ಈ ಯುನಿಟ್​ ವ್ಯಾಪಕ ಶ್ರೇಣಿಯ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಇದರ ಬಳಿಯಿರುವ ಮೊದಲೇ ಸಿದ್ಧಪಡಿಸಲಾದ ಭಯೋತ್ಪಾದಕ ಮೂಲಸೌಕರ್ಯಗಳು ತಕ್ಷಣದ ಕ್ರಮಕ್ಕೆ ಅನುಕೂಲವಾಗಿವೆ" ಎಂದು ಅವರು ಹೇಳುತ್ತಾರೆ.

ಯುನಿಟ್ 910 ಇದು ಹಿಜ್ಬುಲ್ಲಾ ಸಂಘಟನೆಯ ಅತ್ಯಂತ ರಹಸ್ಯ ಮತ್ತು ಅಪಾಯಕಾರಿ ಯುನಿಟ್​ಗಳಲ್ಲಿ ಒಂದಾಗಿದೆ. ಇದು "ಅಬು ಜಾಫರ್" ಎಂದೂ ಕರೆಯಲ್ಪಡುವ ತಲಾಲ್ ಹಮಿಯಾ ಎಂಬುವನ ನಿಯಂತ್ರಣದಲ್ಲಿದೆ.

ಕಾರ್ಯಾಚರಣೆಯ ಕಾರ್ಯವಿಧಾನ ಮತ್ತು ಯೋಜನೆ:ಈ ಯುನಿಟ್​ ತನ್ನ ಕಾರ್ಯಾಚರಣೆಗಳಲ್ಲಿ ಕಟ್ಟುನಿಟ್ಟಾದ ಗೌಪ್ಯತೆ ಕಾಯ್ದುಕೊಂಡಿದೆ. ಇದು ಸ್ಥಳೀಯ ಶಿಯಾ ನೆಟ್​ವರ್ಕ್​ ಮತ್ತು ವಿಶ್ವಾದ್ಯಂತ ಕ್ರಿಮಿನಲ್ ಸಂಘಟನೆಗಳನ್ನು ಅವಲಂಬಿಸಿದೆ. ಕಠಿಣ ತರಬೇತಿ ಪಡೆದಿರುವ ಮತ್ತು ವಿದೇಶಿ ಪೌರತ್ವ ಹೊಂದಿರುವ ಇದರಲ್ಲಿನ ಕೆಲ ಭಯೋತ್ಪಾದಕರು ಸಾಮಾನ್ಯ ನಾಗರಿಕರಂತೆ ಇರುತ್ತಾರೆ ಮತ್ತು ಕಾರ್ಯಾಚರಣೆಯ ಉದ್ದೇಶಗಳಿಗಾಗಿ ಹಿಜ್ಬುಲ್ಲಾ ಬೆಂಬಲಿಗರು ಮತ್ತು ವಿದೇಶಿ ಸರ್ಕಾರಗಳೊಂದಿಗಿನ ಸಂಪರ್ಕವನ್ನು ಬಳಸಿಕೊಳ್ಳುತ್ತಾರೆ.

910 ಯುನಿಟ್​ ನಡೆಸಿದ ಪ್ರಮುಖ ದಾಳಿಗಳು: 1992 ರಲ್ಲಿ ಬ್ಯೂನಸ್ ಐರಿಸ್​ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಮತ್ತು 1994 ರಲ್ಲಿ ಅರ್ಜೆಂಟೀನಾದ ಯಹೂದಿ ಸಮುದಾಯ ಕೇಂದ್ರದ ಮೇಲಿನ ಬಾಂಬ್ ದಾಳಿ ಸೇರಿದಂತೆ ಹಲವಾರು ಉನ್ನತ ಮಟ್ಟದ ದಾಳಿಗಳಲ್ಲಿ ಈ ಘಟಕವು ಭಾಗಿಯಾಗಿದೆ. ಇದು 2012ರಲ್ಲಿ ಬಲ್ಗೇರಿಯಾದ ಬರ್ಗಾಸ್ ನಲ್ಲಿ ಇಸ್ರೇಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿತ್ತು.

ಯುನಿಟ್ 910 ಜಾಗತಿಕವಾಗಿ ಇಸ್ರೇಲಿ ಮತ್ತು ಯಹೂದಿ ಸಂಸ್ಥೆಗಳ ಮೇಲೆ ಮೂರು ಪ್ರಮುಖ ದಾಳಿಗಳನ್ನು ನಡೆಸಿದೆ. ಮಾಜಿ ಹಿಜ್ಬುಲ್ಲಾ ನಾಯಕ ಮುಸಾವಿ ಹತ್ಯೆಗೆ ಮೊದಲ ಪ್ರತೀಕಾರದ ದಾಳಿಯನ್ನು ಆತನ ಮರಣದ ಒಂದು ತಿಂಗಳ ನಂತರ ನಡೆಸಲಾಯಿತು

17.03.1992: ಬ್ಯೂನಸ್ ಐರಿಸ್ ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಮೇಲೆ ನಡೆದ ಹಿಜ್ಬುಲ್ಲಾ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಇಬ್ಬರು ಇಸ್ರೇಲಿಗಳು ಸೇರಿದಂತೆ 29 ನಾಗರಿಕರು ಸಾವನ್ನಪ್ಪಿದ್ದರು ಮತ್ತು 242 ನಾಗರಿಕರು ಗಾಯಗೊಂಡಿದ್ದರು. ದಾಳಿಯಲ್ಲಿ ರಾಯಭಾರ ಕಚೇರಿ ಕಟ್ಟಡ ಕುಸಿದು ಬಿದ್ದಿತ್ತು. ಅಲ್ಲದೇ ಹತ್ತಿರದ ಕ್ಯಾಥೊಲಿಕ್ ಚರ್ಚ್, ಶಾಲೆ ಮತ್ತು ಅಪಾರ್ಟ್ಮೆಂಟ್ ಕಟ್ಟಡಗಳು ಕೂಡ ಕುಸಿದಿದ್ದವು. ಮೃತಪಟ್ಟವರಲ್ಲಿ ಹೆಚ್ಚಿನವರು ಅರ್ಜೆಂಟೀನಾದ ನಾಗರಿಕರು, ಮುಖ್ಯವಾಗಿ ಶಾಲಾ ಮಕ್ಕಳು ಸೇರಿದ್ದಾರೆ.

18.07.1994:ಆತ್ಮಾಹುತಿ ಬಾಂಬರ್ ಸ್ಫೋಟಕ ತುಂಬಿದ ವ್ಯಾನ್ ಅನ್ನು ಯಹೂದಿ ಸಮುದಾಯ ಕೇಂದ್ರದ ಕಟ್ಟಡಕ್ಕೆ ನುಗ್ಗಿಸಿದ್ದ. ಈ ದಾಳಿ ನಡೆಸಿದ ಹಿಜ್ಬುಲ್ಲಾ ಉಗ್ರ ಇಬ್ರಾಹಿಂ ಹುಸೇನ್ ಬೆರೊ ಇವನಿಗೆ ದಕ್ಷಿಣ ಲೆಬನಾನ್ ನಲ್ಲಿ ಹುತಾತ್ಮ ಪಟ್ಟ ನೀಡಿ ಗೌರವಿಸಲಾಯಿತು. ಈ ದಾಳಿಯಲ್ಲಿ 85 ಜನರು ಸಾವನ್ನಪ್ಪಿ, 300 ಜನರು ಗಾಯಗೊಂಡಿದ್ದರು.

18.07.2012:ಯುನಿಟ್ 910 ಬಲ್ಗೇರಿಯಾದ ಬರ್ಗಾಸ್ ನಲ್ಲಿ ಮೂರನೇ ಮಹತ್ವದ ದಾಳಿಯನ್ನು ನಡೆಸಿತು. ಬರ್ಗಾಸ್​ನ ಸರಫೋವೊ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಆರು ಇಸ್ರೇಲಿ ಪ್ರವಾಸಿಗರು ಮತ್ತು ಬಲ್ಗೇರಿಯನ್ ಬಸ್ ಚಾಲಕ ಸಾವನ್ನಪ್ಪಿದ್ದರು. ಈ ದಾಳಿಗೆ ಹಿಜ್ಬುಲ್ಲಾ ಕಾರಣವೆಂದು ಇಸ್ರೇಲ್ ಮತ್ತು ಯುರೋಪಿಯನ್ ಯೂನಿಯನ್ ಆರೋಪಿಸಿದ್ದವು.

ಇದನ್ನೂ ಓದಿ : ಯೆಮೆನ್​ನ ಹೌತಿ ನೆಲೆಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ: 4 ಸಾವು, 49 ಜನರಿಗೆ ಗಾಯ - Israel Strikes Yemen

ABOUT THE AUTHOR

...view details