ETV Bharat / entertainment

ರಣ್​ಬೀರ್​​, ಅಲ್ಲು ಅರ್ಜುನ್ -​ ಪತ್ನಿ ಪಾತ್ರದಲ್ಲಿ ರಶ್ಮಿಕಾ: ಮಂದಣ್ಣ ಎದುರು ತಲೆಬಾಗಿದ ಆ್ಯಕ್ಷನ್​​​​ ಸ್ಟಾರ್ಸ್ - PUSHPA 2 TRAILER

'ಪುಷ್ಪ 2: ದಿ ರೂಲ್​' ಟ್ರೇಲರ್​​ ಅನಾವರಣಗೊಂಡ ಬೆನ್ನಲ್ಲೇ ಆನ್​​ಸ್ಕ್ರೀನ್​ನಲ್ಲಿ ಪತ್ನಿಯಾಗಿ ರಶ್ಮಿಕಾ ಮಂದಣ್ಣ ಅವರ ಪಾತ್ರದ ಕುರಿತು ಸಾಮಾಜಿಕ ಜಾಲತಾಣ ಬಳಕೆದಾರರು ಚರ್ಚಿಸುತ್ತಿದ್ದಾರೆ.

Pushpa, Animal Poster
ಪುಷ್ಪ, ಅನಿಮಲ್​ ಹೋಲಿಕೆ (Photo: Trailer Screengrab)
author img

By ETV Bharat Entertainment Team

Published : Nov 18, 2024, 7:21 PM IST

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ 'ಪುಷ್ಪ 2: ದಿ ರೂಲ್​' ಅಭಿಮಾನಿ ಬಳಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ನಿನ್ನೆಯಷ್ಟೇ ಟ್ರೇಲರ್​​ ಅನಾವರಣಗೊಂಡಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲ, ನಿರೀಕ್ಷೆಗಳನ್ನು ದುಪ್ಪಟ್ಟುಗೊಳಿಸಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್, ಕನ್ನಡತಿ ರಶ್ಮಿಕಾ ಮಂದಣ್ಣ ಮತ್ತು ದಕ್ಷಿಣದ ಬಹುಬೇಡಿಕೆ ನಟ ಫಹಾದ್​ ಫಾಸಿಲ್ ಅವರ ಅಮೋಘ ಅಭಿನಯವನ್ನು ಸವಿಯಲು ಸಿನಿಪ್ರಿಯರು ಸಜ್ಜಾಗಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರ 'ಪತ್ನಿ ಪಾತ್ರ'ದ ಕುರಿತು ಚರ್ಚೆಯಾಗುತ್ತಿದೆ.

ಪುಷ್ಪ: ದಿ ರೈಸ್​​ ಚಿತ್ರ 2021ರ ಡಿಸೆಂಬರ್​ 17ರಂದು ತೆರೆಕಂಡು ಅಭೂತಪೂರ್ವ ಯಶ ಕಂಡಿತ್ತು. ಸೂಪರ್​ ಹಿಟ್​ ಸಿನಿಮಾದಲ್ಲಿನ ಅಲ್ಲು ಅರ್ಜುನ್ ಅವರ ಅಮೋಘ ಅಭಿನಯಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡಾ ದಕ್ಕಿತ್ತು. ಅಲ್ಲು ಅರ್ಜುನ್​ ಜೋಡಿಯಾಗಿ ಕಿರಿಕ್​ ಪಾರ್ಟಿ ಮೂಲಕ ಸಿನಿವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಯ ಬಹುಬೇಡಿಕೆ ನಟಿಯಾಗಿರುವ ರಶ್ಮಿಕಾ ಮಂದಣ್ಣ ಅವರು ನಟಿಸಿದ್ದರು. ಸದ್ಯ ಬಿಡುಗಡೆ ಹೊಸ್ತಿಲಿನಲ್ಲಿರುವ ಪುಷ್ಪ: ದಿ ರೂಲ್​ನಲ್ಲಿಯೂ ಶ್ರೀವಲ್ಲಿಯಾಗಿ ಮುಂದುವರಿಯಲಿದ್ದಾರೆ. ಅಲ್ಲು ಅರ್ಜುನ್​ ಪತ್ನಿ ಪಾತ್ರವನ್ನು ಹೇಗೆ ನಿಭಾಯಿಸಬಹುದೆಂಬ ಕುತೂಹಲ ಪ್ರೇಕ್ಷಕರಲ್ಲಿದೆ.

ಕೆಲ ಪೋಸ್ಟ್​, ಮೀಮ್ಸ್​​ ಸಿಕ್ಕಾಪಟ್ಟೆ ವೈರಲ್: ಅದರಲ್ಲೂ ನಿನ್ನೆಯಷ್ಟೇ ಬಿಡುಗಡೆ ಆಗಿರುವ ಟ್ರೇಲರ್​​ನ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಕೆಲ ಪೋಸ್ಟ್​, ಮೀಮ್ಸ್​​ ಸಿಕ್ಕಾಪಟ್ಟೆ ವೈರಲ್​ ಆಗಿವೆ. ಪತ್ನಿ ಪಾತ್ರದಲ್ಲಿ ರಶ್ಮಿಕಾ ಅವರ ಅಭಿನಯ ಕುರಿತು ಸೋಷಿಯಲ್​ ಮೀಡಿಯಾ ಬಳಕೆದಾರರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾ ಪ್ಲ್ಯಾಟ್​ಫಾರ್ಮ್​​ ರೆಡ್ಡಿಟ್​ನಲ್ಲಿ ಆನ್​ಸ್ಕ್ರೀನ್​​ನಲ್ಲಿ ಪತ್ನಿಯಾಗಿ ರಶ್ಮಿಕಾರ ಬದುಕು ಹೇಗಿದೆ ಎಂದು ಬಳಕೆದಾರರು ಚರ್ಚಿಸುತ್ತಿದ್ದಾರೆ. ಒಂದೆಡೆ ಪುಷ್ಪ ಸಿನಿಮಾ ಸೀನ್​ ಇದ್ದರೆ, ಮತ್ತೊಂದೆಡೆ ಅನಿಮಲ್​ ಚಿತ್ರದ ಕ್ಷಣಗಳಿವೆ. ಸಮಾಜದಲ್ಲಿ ಡೇರ್​ ಪಾತ್ರ ನಿರ್ವಹಿಸುವ ಮಾಸ್​, ಆ್ಯಕ್ಷನ್​ ಸ್ಟಾರ್​ಗಳಾದ ರಣ್​ಬೀರ್​ ಕಪೂರ್​, ಅಲ್ಲು ಅರ್ಜುನ್​​ ಪತ್ನಿಯೆದುರು ತಲೆಬಾಗುವ ಸೀನ್​ ಅನ್ನು ಹೈಲೆಟ್​ ಮಾಡಿದ್ದಾರೆ. ಎರಡರಲ್ಲೂ, ರಶ್ಮಿಕಾ ಅವರ ಕಾಲನ್ನು ಈ ಸೂಪರ್​​ ಸ್ಟಾರ್ಸ್ ಹಿಡಿದಿದ್ದಾರೆ. "ರಶ್ಮಿಕಾ ಇಬ್ಬರು ಶ್ರೇಷ್ಠ ನಟರನ್ನು ತಲೆಬಾಗುವಂತೆ ಮಾಡಿ, ತಮ್ಮ ಪಾದ ಹಿಡಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ತಿಳಿಸಿದ್ದಾರೆ.

Pushpa, Animal Poster
ಪುಷ್ಪ, ಅನಿಮಲ್​ ಪೋಸ್ಟರ್ (Photo: Film posters, ANI)

ಇದನ್ನೂ ಓದಿ: ಪುತ್ರನಿಗೆ 'ಬೇಬಿ ರೆಬೆಲ್​​' ಎಂದ ಅಭಿಷೇಕ್​: ಅಂಬರೀಶ್​ ಫೋಟೋವುಳ್ಳ ಪೋಸ್ಟ್​​​ ಕಂಡು ಫ್ಯಾನ್ಸ್ ಖುಷ್​

ರಶ್ಮಿಕಾ ಬಹಳ ಅದೃಷ್ಟವಂತರು. ಅತಿ ಕಡಿಮೆ ಅವಧಿಯಲ್ಲಿ ಸೂಪರ್​ ಸ್ಟಾರ್​ಗಳೊಂದಿಗೆ ನಟಿಸುವ ಅವಕಾಶ ಪಡೆದಿದ್ದಾರೆ ಎಂದು ಓರ್ವರು ತಿಳಿಸಿದ್ದಾರೆ. ಉಳಿದಂತೆ ಸೆಲ್ಫ್​ ಮೇಡ್​ ಸ್ಟಾರ್, ಉತ್ತಮ ಅವಕಾಶ ಪಡೆಯುತ್ತಿದ್ದಾರೆ, ಅವರ ಸಿನಿ ಕರಿಯರ್​ ಉತ್ತಮವಾಗಿ ಸಾಗಿದೆ, ಉತ್ತಮ ಪ್ರಾಜೆಕ್ಟ್​ಗಳನ್ನು ಹೊಂದಿದ್ದು, ಅವರ ಅಭಿನಯವೂ ಅತ್ಯುತ್ತಮ ಎಂಬರ್ಥದಲ್ಲಿ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 'ಟೈಗರ್ ಶ್ರಾಫ್ ಕಾಣುವುದಕ್ಕಿಂತಲೂ ಹೆಚ್ಚು ಅದ್ಭುತ': 'ಬಾಘಿ 4' ನಿರ್ದೇಶಕ ಹರ್ಷ ಹೇಳಿದ್ದಿಷ್ಟು

ಕಳೆದ ವರ್ಷ ತೆರೆಕಂಡ ಅನಿಮಲ್​ ಸಿನಿಮಾದಲ್ಲಿ ಬಾಲಿವುಡ್​ ಸೂಪರ್ ಸ್ಟಾರ್​​ ರಣ್​ಬೀರ್​ ಕಪೂರ್​ ಜೊತೆ ತೆರೆಹಂಚಿಕೊಂಡಿದ್ದರು. ಕಂಪ್ಲೀಟ್​​ ಆ್ಯಕ್ಷನ್​​ ಸಿನಿಮಾಗೆ ರಶ್ಮಿಕಾ ರೊಮ್ಯಾನ್ಸ್ ಅಂಶಗಳನ್ನು ಪೂರೈಸಿದ್ದರು. ರಶ್ಮಿಕಾ ರಣ್​​​ಬೀರ್​ ಜೋಡಿಯ ಹಲವು ಬೋಲ್ಡ್ ಸೀನ್​ಗಳು ಸಾಕಷ್ಟು ಸದ್ದು ಮಾಡಿದ್ದವು. ರಣ್​​ಬೀರ್​ ನಟಿಯ ಕಾಲು ಹಿಡಿದಿದ್ದ ದೃಶ್ಯವಂತೂ ಸಿಕ್ಕಾಪಟ್ಟೆ ಸೌಂಡ್​ ಮಾಡಿತ್ತು. ಸದ್ಯ ಬಿಡುಗಡೆಯಾಗಿರುವ ಪುಷ್ಪ ಸೀಕ್ವೆಲ್​ನ ಟ್ರೇಲರ್​​ನಲ್ಲೂ ಅಲ್ಲು ಅರ್ಜುನ್​​ ರಶ್ಮಿಕಾ ಅವರ ಕಾಲು ಹಿಡಿದು ರೊಮ್ಯಾನ್ಸ್ ಮಾಡಿದಂತೆ ತೋರಿದೆ. ತಗ್ಗೆದೆಲೇ​​ ಡೈಲಾಗ್​ ಅನ್ನು ಇಲ್ಲಿ ವಿಭಿನ್ನವಾಗಿ ಹೊಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.