ETV Bharat / bharat

ರಿಯಲ್ ಎಸ್ಟೇಟ್ ಪ್ರಕರಣ: ಕ್ರಿಕೆಟಿಗ ಗೌತಮ್ ಗಂಭೀರ್​ಗೆ ದೆಹಲಿ ಹೈಕೋರ್ಟ್​ನಿಂದ ರಿಲೀಫ್ - GAUTAM GAMBHIR

ರಿಯಲ್ ಎಸ್ಟೇಟ್ ಪ್ರಕರಣದಲ್ಲಿ ನ್ಯಾಯಾಲಯವು ಗೌತಮ್ ಗಂಭೀರ್ ಅವರಿಗೆ ರಿಲೀಫ್ ನೀಡಿದೆ.

ಕ್ರಿಕೆಟಿಗ ಗೌತಮ್ ಗಂಭೀರ್​
ಕ್ರಿಕೆಟಿಗ ಗೌತಮ್ ಗಂಭೀರ್​ (IANS)
author img

By ETV Bharat Karnataka Team

Published : Nov 18, 2024, 7:19 PM IST

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಮಾಜಿ ಸಂಸದ ಗೌತಮ್ ಗಂಭೀರ್ ಅವರಿಗೆ ದೆಹಲಿ ಹೈಕೋರ್ಟ್​ ದೊಡ್ಡ ರಿಲೀಫ್ ನೀಡಿದೆ. ರಿಯಲ್ ಎಸ್ಟೇಟ್ ಕಂಪನಿ ರುದ್ರ ಬಿಲ್ಡ್ ವೆಲ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್​ನ ಫ್ಲ್ಯಾಟ್ ಖರೀದಿದಾರರಿಗೆ ಮೋಸ ಆರೋಪದ ಪ್ರಕರಣದಲ್ಲಿ ಗೌತಮ್ ಗಂಭೀರ್ ಅವರನ್ನು ಖುಲಾಸೆಗೊಳಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ರದ್ದುಗೊಳಿಸಿದ ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ರಿ ಅವರ ಪೀಠವು ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.

ಗೌತಮ್ ಗಂಭೀರ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಅರ್ಜಿದಾರರು ಕಳಂಕ ರಹಿತ ವ್ಯಕ್ತಿತ್ವ ಹೊಂದಿದ್ದು, ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ಎಂದು ಹೇಳಿದರು. ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಇಡಿಯಿಂದ ಕಿರುಕುಳ ನೀಡುವುದು ಸೂಕ್ತವಲ್ಲ ಎಂದು ಅವರು ವಾದಿಸಿದರು.

ಗಂಭೀರ್ ಪರ ವಕೀಲರ ಮನವಿ ವಿರೋಧಿಸಿದ ಇಡಿ ಪರ ವಕೀಲರು, ಕಂಪನಿಗೆ ರಾಜೀನಾಮೆ ನೀಡಿದ ನಂತರವೂ ಗಂಭೀರ್ ಹಣ ಪಡೆದಿದ್ದಾರೆ ಎಂದು ಹೇಳಿದರು.

ಅಕ್ಟೋಬರ್ 29 ರಂದು, ರೂಸ್ ಅವೆನ್ಯೂ ನ್ಯಾಯಾಲಯದ ಸೆಷನ್ಸ್ ನ್ಯಾಯಾಲಯವು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶ ತಡೆಹಿಡಿದಿತ್ತು. ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಅವರು ಪ್ರಕರಣದ ವಿಚಾರಣೆಯನ್ನು ಮತ್ತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಿದ್ದರು ಮತ್ತು ಗೌತಮ್ ಗಂಭೀರ್ ವಿರುದ್ಧ ಆರೋಪಗಳನ್ನು ಹೊರಿಸುವ ಬಗ್ಗೆ ಹೊಸ ಆದೇಶವನ್ನು ಹೊರಡಿಸುವಂತೆ ನಿರ್ದೇಶನ ನೀಡಿದ್ದರು.

ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆ: ಡಿಸೆಂಬರ್ 10, 2020 ರಂದು ರೂಸ್ ಅವೆನ್ಯೂ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಿಯಲ್ ಎಸ್ಟೇಟ್ ಕಂಪನಿ ರುದ್ರ ಬಿಲ್ಡ್ ವೆಲ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್​ನ ಫ್ಲ್ಯಾಟ್ ಖರೀದಿದಾರರಿಗೆ ಮೋಸ ಮಾಡಿದ ಆರೋಪದಿಂದ ಗೌತಮ್ ಗಂಭೀರ್ ಅವರನ್ನು ಖುಲಾಸೆಗೊಳಿಸಿತ್ತು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಪ್ರಕರಣ ನಡೆಯುತ್ತಿದ್ದಾಗ, ಗೌತಮ್ ಗಂಭೀರ್ ಸಂಸದರಾಗಿದ್ದರು, ಈ ಕಾರಣದಿಂದಾಗಿ ಈ ವಿಷಯವು ರೂಸ್ ಅವೆನ್ಯೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು.

ಈ ಪ್ರಕರಣದಲ್ಲಿ ದೆಹಲಿ ಪೊಲೀಸರು ಗೌತಮ್ ಗಂಭೀರ್ ವಿರುದ್ಧ 2019 ರ ಸೆಪ್ಟೆಂಬರ್ ನಲ್ಲಿ ಸಾಕೇತ್ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಗೌತಮ್ ಗಂಭೀರ್ ರಿಯಲ್ ಎಸ್ಟೇಟ್ ಕಂಪನಿ ರುದ್ರ ಬಿಲ್ಡ್ ವೆಲ್ ರಿಯಾಲಿಟಿ ಪ್ರೈವೇಟ್ ಲಿಮಿಟೆಡ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಮತ್ತು ಕಂಪನಿಯ ವಿರುದ್ಧ ಫ್ಲ್ಯಾಟ್ ಮಾಲೀಕರಿಗೆ ಮೋಸ ಮಾಡಿದ ಆರೋಪ ಅವರ ಮೇಲಿತ್ತು. ಗಂಭೀರ್ ಅವರಲ್ಲದೇ, ಕಂಪನಿಯ ಪ್ರವರ್ತಕರಾದ ಮುಖೇಶ್ ಖುರಾನಾ, ಗೌತಮ್ ಮೆಹ್ರಾ ಮತ್ತು ಬಬಿತಾ ಖುರಾನಾ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಗೌತಮ್ ಗಂಭೀರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 406 ಮತ್ತು 420 ರ ಅಡಿ ಪ್ರಕರಣ ದಾಖಲಿಸಲಾಗಿದೆ.

ಆರ್ಥಿಕ ಅಪರಾಧಗಳ ವಿಭಾಗದಿಂದ ಪ್ರಕರಣ: ಕಂಪನಿಯು ಫ್ಲ್ಯಾಟ್ ಮಾಲೀಕರಿಂದ ಮೋಸದಿಂದ ಹಣ ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ. ಫ್ಲ್ಯಾಟ್ ಮಾಲೀಕರ ದೂರಿನ ಮೇರೆಗೆ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಪ್ರಕರಣ ದಾಖಲಿಸಿದೆ. ಗೌತಮ್ ಗಂಭೀರ್ ಹೆಸರನ್ನು ಮುಂದೆ ಮಾಡಿ ಕಂಪನಿಯು ಹೂಡಿಕೆದಾರರಿಂದ ಹಣ ತೆಗೆದುಕೊಂಡಿದೆ. ಆದರೆ, ಫ್ಲ್ಯಾಟ್​​​ಗಳನ್ನು ನೀಡಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಫ್ಲ್ಯಾಟ್ ಖರೀದಿದಾರರು 2011 ರಲ್ಲಿ ಗಾಜಿಯಾಬಾದ್ ನ ಇಂದಿರಾಪುರಂನಲ್ಲಿರುವ ಕಂಪನಿಯ ರಿಯಲ್ ಎಸ್ಟೇಟ್ ಯೋಜನೆಯಲ್ಲಿ ಫ್ಲ್ಯಾಟ್ ಗಳನ್ನು ಕಾಯ್ದಿರಿಸಿದ್ದರು. ಆದರೆ, ಅವರಿಗೆ ಫ್ಲ್ಯಾಟ್ ಗಳು ಸಿಗಲಿಲ್ಲ ಎಂದು ಆರೋಪಿಸಲಾಗಿದೆ. ಜೂನ್ 6, 2013 ರಂದು ಖರೀದಿದಾರರಿಗೆ ಫ್ಲ್ಯಾಟ್ ಗಳನ್ನು ನೀಡುವುದಾಗಿ ಭರವಸೆ ನೀಡಿದ ನಂತರವೂ ಕಂಪನಿಯು 2014 ರವರೆಗೆ ಫ್ಲ್ಯಾಟ್ ನೀಡಿಲ್ಲ ಎಂದು ದೆಹಲಿ ಪೊಲೀಸರ ಚಾರ್ಜ್ ಶೀಟ್​ನಲ್ಲಿ ತಿಳಿಸಲಾಗಿದೆ. ಏಪ್ರಿಲ್ 15, 2015 ರಂದು, ಅಧಿಕಾರಿಗಳು ಯೋಜನೆಯ ಅನುಮೋದನೆ ರದ್ದುಗೊಳಿಸಿದ್ದರು.

ಇದನ್ನೂ ಓದಿ : ಎಐಎಡಿಎಂಕೆ ಜೊತೆ ನಟ ದಳಪತಿ ವಿಜಯ್​​ರ ಟಿವಿಕೆ ಮೈತ್ರಿ?: ಪಕ್ಷದ ಸ್ಪಷ್ಟನೆ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.