ನವದೆಹಲಿ:ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ರತನ್ ಟಾಟಾ ಅವರ ಅಗಲಿಕೆಗೆ ಫ್ರಾನ್ಸ್ ಅಧ್ಯಕ್ಷ ಇಮಾನ್ಯೂಯಲ್ ಮ್ಯಾಕ್ರನ್ ಸಂತಾಪ ಸೂಚಿಸಿದ್ದಾರೆ. ಭಾರತದ ಆತ್ಮೀಯ ಸ್ನೇಹಿತನನ್ನು ಫ್ರಾನ್ಸ್ ಕಳೆದುಕೊಂಡಿದೆ ಎಂದು ಅವರು ಕಂಬನಿ ಮಿಡಿದಿದ್ದಾರೆ.
ಭಾರತ ಮತ್ತು ಫ್ರಾನ್ಸ್ನ ಹೊಸ ಅವಿಷ್ಕಾರ ಮತ್ತು ಉತ್ಪಾದನೆ ವೃದ್ಧಿಯಲ್ಲಿ ರತನ್ ಟಾಟಾ ಅವರ ಕೊಡಗೆ ಇದೆ. ಅವರ ಅಗಾಧ ಪರಂಪರೆ ಹೊರತಾಗಿ ಅವರು ಮಾನವೀಯ ದೃಷ್ಟಿ ಹೊಂದಿರುವ ಅದ್ಬುತ ನಾಯಕ ಎಂದು ಹೊಗಳಿದ ಅವರು, ಸಮಾಜಸೇವೆ ಮತ್ತು ಮಾನವೀಯತೆಯ ವ್ಯಕ್ತಿ ಎಂದು ಸ್ಮರಿಸಿದ್ದಾರೆ. ಅವರ ಈ ಸಾವಿಗೆ ಸಂತಾಪ ಸೂಚಿಸುತ್ತಿದ್ದು, ಸಮಾಜದ ಒಳಿತಿಗಾಗಿ ನಿಮ್ಮ ಜೀವಮಾನದುದ್ದಕ್ಕೂ ತೋರಿದ ಬದ್ಧತೆಯನ್ನು ನಾವು ಸದಾ ಗೌರವದಿಂದ ಸ್ಮರಿಸುತ್ತೇವೆ ಎಂದಿದ್ದಾರೆ.
ವಯೋ ಸಂಬಂಧಿತ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರತನ್ ಟಾಟಾ ಅವರು ಬುಧವಾರ ಮಧ್ಯರಾತ್ರಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ಸಾವಿಗೆ ಉದ್ಯಮ ಮತ್ತು ಕಾರ್ಪೋರೇಟ್ ವಲಯ ಸೇರಿದಂತೆ ದೇಶದ ಮೂಲೆ ಮೂಲೆಗಳ ಜನರು ಕಂಬನಿ ಮಿಡಿದಿತ್ತು. ಉದ್ಯಮ ಲೋಕದ ಸಾಮ್ರಾಟನನ್ನು ಕಳೆದುಕೊಂಡ ದುಃಖದಲ್ಲಿತ್ತು.