ದುಬೈ:ಯುನೈಟೆಡ್ ಅರಬ್ ಎಮಿರೇಟ್ಸ್ ಭಾರೀ ಮಳೆಗೆ ತತ್ತರಿಸಿದೆ. ದುಬೈ ಎಲ್ಲೆಡೆ ಪ್ರಮುಖ ಹೆದ್ದಾರಿಗಳು, ರಸ್ತೆಗಳು ಜಲಾವೃತವಾಗಿದ್ದು, ವಾಹನಗಳು ನಡು ನೀರಿನಲ್ಲಿ ಸಿಲುಕಿವೆ. ಈ ನಡುವೆ ನೆರೆಯ ಒಮನ್ನಲ್ಲಿನ ಭಾರೀ ಪ್ರವಾಹಕ್ಕೆ ಸಾವನ್ನಪ್ಪಿದವರ ಸಂಖ್ಯೆ 18 ಏರಿದೆ.
ದುಬೈನಲ್ಲಿ ಒಂದೇ ದಿನದಲ್ಲಿ ದಾಖಲೆ ಮಳೆ:ಕಳೆದ ರಾತ್ರಿ ಆರಂಭವಾದ ಭಾರೀ ಮಳೆಯಿಂದಾಗಿ ನಗರಗಳು ಜಲಾವೃತ್ತವಾಗಿದ್ದು, ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ನೀರು ನಿಂತ ಪರಿಣಾಮ ಅನೇಕ ವಿಮಾನಗಳ ಸಂಚಾರ ಅಸ್ತವ್ಯಸ್ತವಾಗಿದೆ. ಇಲ್ಲಿನ ಚಿತ್ರಣಗಳು ವೈರಲ್ ಆಗಿವೆ.
ದುಬೈನಲ್ಲಿ ಒಂದೇ ದಿನದಲ್ಲಿ ಸುರಿದ ಈ ಮಳೆ ಒಂದೂವರೆ ವರ್ಷದಲ್ಲಿ ಬೀಳಬಹುದಾದ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿನ ಇಲ್ಲಿ 120 ಎಂಎಂ ಅಂದರೆ ಅಂದಾಜು 4.75 ಇಂಚು ಮಳೆಯಾಗಿದೆ. ಮರುಭೂಮಿ ನಾಡಿನಲ್ಲಿ ಮುಂದಿನ ಗಂಟೆಗಳಲ್ಲಿ ಮತ್ತಷ್ಟು ಮಳೆಯಾಗುವ ನಿರೀಕ್ಷೆಯಿದೆ.
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವಾಹದಿಂದ ಸೀಮಿತ ಸಾರಿಗೆ ಆಯ್ಕೆಯನ್ನು ನೀಡಲಾಗಿದೆ. ನೀರಿನಿಂದ ಆವೃತವಾಗಿರುವ ರಸ್ತೆಗಳಲ್ಲಿ ನಿಧಾನವಾಗಿ ಚಲಿಸಿದ್ದು, ಕತ್ತಲೆಯಲ್ಲಿ ಫ್ಲಾಷಿಂಗ್ ದೀಪಗಳನ್ನು ಹಾಕಲಾಗಿದೆ. ಆಕಾಶದ ಎತ್ತರಕ್ಕೆ ದೀಪಗಳನ್ನು ಬೆಳಗುವ ಮೂಲಕ ಈ ಕುರಿತು ಎಚ್ಚರಿಕೆಯನ್ನು ನೀಡಲಾಯಿತು. ನಗರದ ಚಾಲಕರಹಿತ ಮೆಟ್ರೋ ನೆಟ್ವರ್ಕ್ ಕೂಡ ಪ್ರವಾಹದಿಂದ ಅಡಚಣೆ ಎದುರಿಸಿದೆ.