ವಾಷಿಂಗ್ಟನ್, ಅಮೆರಿಕ: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಗೆದ್ದು ಬೀಗಿದ ಡೊನಾಲ್ಡ್ ಟ್ರಂಪ್ ಹಾಗೂ ವಿಶ್ವದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಇದೀಗ ಕುಚಿಕು ಗೆಳೆಯರಾಗಿದ್ದಾರೆ. ಚುನಾವಣೆ ಬಳಿಕ ಕಳೆದ ವಾರ ಫ್ಲೋರಿಡಾದ ಮರ್ - ಅ - ಲಾಗೊ ರೆಸಾರ್ಟ್ನಲ್ಲಿ ಟ್ರಂಪ್ ವಿಶ್ರಾಂತಿ ಪಡೆಯುವಾಗಲೂ ಮಸ್ಕ್ ಜೊತೆಗಿದ್ದರು. ಈ ವೇಳೆ ಮಸ್ಕ್ ಅನ್ನು ನಾನು ಹೊರಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಕೂಡ ಟ್ರಂಪ್ ತಮಾಷೆ ಮಾಡಿದರು. ನಾನು ಅವನ್ನು ಇಲ್ಲಿ ಇರಲು ಬಯಸುತ್ತೇನೆ. ಆತ ಉತ್ತಮ ಕೆಲಸ ಮಾಡಿದ್ದಾನೆ. ಆತ ಅದ್ಬುತ ವ್ಯಕ್ತಿ ಎಂದು ಬಣ್ಣಿಸಿದ್ದರು.
ಆದರೆ, ವಿಶ್ವದ ಶ್ರೀಮಂತ ವ್ಯಕ್ತಿ ಮತ್ತು ಅಮೆರಿಕದ ಅಧ್ಯಕ್ಷರಾಗುತ್ತಿರುವ ಟ್ರಂಪ್ ನಡುವಿನ ಸಂಬಂಧ ಗಟ್ಟಿಯಾಗುತ್ತಿರುವ ನಡುವೆಯೂ ಅವರಲ್ಲಿ ಕೆಲವು ನೀತಿಗಳ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಇದರಿಂದ ಭವಿಷ್ಯದಲ್ಲಿ ಅವರ ಈ ಸಂಬಂಧದಲ್ಲಿ ಘರ್ಷಣೆಯಾಗುವ ಸಾಧ್ಯತೆಗಳಿರುವುದು ಅಲ್ಲಗಳೆಯಲು ಸಾಧ್ಯವಿಲ್ಲ. ಅವರ ನಡುವಿನ ಪ್ರಮುಖ ಆರು ಭಿನ್ನಾಭಿಪ್ರಾಯ ಕುರಿತು ಎಎಫ್ಪಿ ತಿಳಿಸಿದೆ.
ಯಾರು ಬಾಸ್?:ತಮ್ಮ ಅಮೋಘ ಕೆಲಸ ಮತ್ತು ಹಾರ್ಡ್ಕೋರ್ ಶೈಲಿಯಿಂದಾಗಿ ಮಸ್ಕ್ ಹೆಸರಾಗಿದ್ದು, ಇದರಿಂದಾಗಿ ಅವರು ತಮ್ಮ ಸಂಸ್ಥೆಗಳಲ್ಲಿ ತಮ್ಮ ವೈಯಕ್ತಿಕ ನಿರ್ಧಾರದ ಮೇಲೆ ನಡೆಸುತ್ತಾರೆ. ಸಂಸ್ಥೆಗಳಲ್ಲಿ ಮಸ್ಕ್ ಪ್ರಶ್ನಿಸುವ ಅಧಿಕಾರಿಗಳು ವಿರಳ. ಫ್ಯಾಕ್ಟರಿ ಉತ್ಪಾದನೆಯಿಂದಾಗಿ ಬೆಡ್ರೂಂವರೆಗೆ ಅವರದ್ದೇ ನೀತಿಗಳು. ಆತ ವಿರುದ್ಧ ಬಾಯಿ ತೆಗೆದವರು ಅದೇ ಕ್ಷಣದಲ್ಲಿ ಉದ್ಯೋಗದಿಂದ ಕಿತ್ತೊಗೆಯಲಾಗುವುದು. ಅಲ್ಲದೇ ಕೆಲವು ಸಾರ್ವಜನಿಕವಾಗಿ ಅವರ ಬುದ್ಧಿವಂತಿಕೆ ಅವಮಾನಗೊಳಿಸಲಾಗುವುದು.
ಇನ್ನು ಟ್ರಂಪ್ ಕೂಡ ಸಾರ್ಜನಿಕವಾಗಿ ಜನರನ್ನು ಮಜುಗರಕ್ಕೆ ಒಳಗಾಗಿಸುವ ಮತ್ತು ಸ್ಥಾನದಿಂದ ಕಿತ್ತೊಗೆಯುವಲ್ಲಿ ಹಿಂದೆ ಮುಂದೆ ಯೋಚಿಸುವುದಿಲ್ಲ. ಇವರಿಗೆ ಬೇಕಿರುವುದು ನಿಯತ್ತು. ಸಲಹೆಗಾರರು ಮತ್ತು ಕ್ಯಾಬಿನೆಟ್ ಸಚಿವರ ವಿರುದ್ದ ಪರಸ್ಪರ ಆಟಕ್ಕೆ ಬಿಟ್ಟು ಮಜಾ ಮಾಡುವುದು ಇವರಿಗೆ ಇಷ್ಟ ಎಂದು ಮಾಜಿ ಆಪ್ತರು ಕೂಡ ತಿಳಿಸಿದ್ದಾರೆ
ಮಸ್ಕ್ ಮೊದಲ ಬಾರಿ ಸಾರ್ವಜನಿಕವಾಗಿ ಟ್ರಂಪ್ ವಿರುದ್ಧ ಕಳೆದ ವಾರ ಬೋರಿಸ್ ಎಪ್ಶ್ಟೇನ್ ಅಧಿಕಾರ ವರ್ಗಾವಣೆ ವೇಳೆ ಬುಸುಗುಟ್ಟಿದ್ದಾರೆ ಎಂದು ಆಕ್ಸಿಯೊಸ್ ನ್ಯೂಸ್ ತಾಣ ತಿಳಿಸಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿಗಾಗಿ ಬ್ರೋಕರೇಜ್ ಬಿಲಿಯನೇರ್ ಹೊವಾರ್ಡ್ ಲುಟ್ನಿಕ್ ಅನ್ನು ಬಹಿರಂಗವಾಗಿ ಅನುಮೋದಿಸಿದರು. ಇದು ಆರಂಭಿಕ ಪರೀಕ್ಷೆ ಎಂದೇ ಹೇಳಲಾಗುತ್ತಿದೆ.
ಹವಾಮಾನ ಬದಲಾವಣೆ: ಜಾಗತಿಕ ತಾಪಮಾನದ ಕಾಳಜಿ ಹೊರತಾಗಿ 2004 ರಲ್ಲಿ ಮಸ್ಕ್ ಟೆಸ್ಲಾಗೆ ಹೂಡಿಕೆ ಮಾಡಿದರು. 2017ರಲ್ಲಿ ಟ್ರಂಪ್ ಬ್ಯುಸಿನೆಸ್ ಸಲಹೆಗಾರ ಮಂಡಳಿಗೆ ರಾಜೀನಾಮೆ ನೀಡಿದರು. ಇದಕ್ಕೆ ಕಾರಣ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ನಿರ್ಧಾರವನ್ನು ಖಂಡಿಸಿದರು.
ಹವಾಮಾನ ಬದಲಾವಣೆ ನಿಜ. ಆದರೆ, ವಿಶ್ವ ಅಥವಾ ಅಮೆರಿಕಕ್ಕಾಗಿ ಪ್ಯಾರಿಸ್ ತೊರೆಯುವುದು ಉತ್ತಮವಲ್ಲ ಎಂದು ಮಸ್ಕ್ ಅಂದು ಟ್ವೀಟ್ ಮಾಡಿದ್ದರು. ಆದರೆ, ಟ್ರಂಪ್ ಮಾತ್ರ ಹವಾಮಾನ ಬದಲಾವಣೆ ಸುಳ್ಳು ಎಂದು ಕರೆದು ದೂರವಾದರು. 2020ರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತೆ ಪ್ಯಾರಿಸ್ ಒಪ್ಪಂದಕ್ಕೆ ಮರು ಸೇರ್ಪಡೆಯಾದರು.