ಕರ್ನಾಟಕ

karnataka

ETV Bharat / international

ಸಿರಿಯಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಅಲ್ - ಖೈದಾ - ಸಂಯೋಜಿತ ಗುಂಪಿನ ಸಹ - ಸಂಸ್ಥಾಪಕ ಸಾವು - suicide bombing - SUICIDE BOMBING

ವಾಯುವ್ಯ ಸಿರಿಯಾದಲ್ಲಿ ಆತ್ಮಾಹುತಿ ಬಾಂಬ್​​​ ದಾಳಿ ನಡೆದಿದ್ದು ಪ್ರಮುಖ ಅಲ್ - ಖೈದಾ - ಸಂಯೋಜಿತ ಗುಂಪಿನ ಸಹ - ಸಂಸ್ಥಾಪಕ ಮೃತಪಟ್ಟಿದ್ದಾನೆ.

ಆತ್ಮಾಹುತಿ ಬಾಂಬ್ ದಾಳಿ
ಆತ್ಮಾಹುತಿ ಬಾಂಬ್ ದಾಳಿ

By PTI

Published : Apr 5, 2024, 7:59 AM IST

ಇಡ್ಲಿಬ್ (ಸಿರಿಯಾ): ವಾಯುವ್ಯ ಸಿರಿಯಾದಲ್ಲಿ ಗುರುವಾರ ತಡರಾತ್ರಿ ಆತ್ಮಾಹುತಿ ಬಾಂಬ್​​​ ಸ್ಫೋಟಗೊಂಡು ಪ್ರಮುಖ ಅಲ್ - ಖೈದಾ - ಸಂಯೋಜಿತ ಗುಂಪಿನ ಸಹ - ಸಂಸ್ಥಾಪಕ ಸಾವನ್ನಪ್ಪಿದ್ದಾನೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಅಬು ಮರಿಯಾ ಅಲ್ - ಕಹ್ತಾನಿ ಅಲಿಯಾಸ್​ ಮಯ್ಸರಾ ಅಲ್ - ಜುಬೌರಿ ಸಾವನ್ನಪ್ಪಿರುವ ಉಗ್ರ. ಈತ ಸಿರಿಯಾದಲ್ಲಿ ನುಸ್ರಾ ಫ್ರಂಟ್​ನ್ನು ಸಹ - ಸ್ಥಾಪಿಸಿದ್ದ. ಬಳಿಕ ಅದಕ್ಕೆ ಹಯಾತ್ ತಹ್ರೀರ್ ಅಲ್ - ಶಾಮ್ ಎಂದು ಮರು ನಾಮಕರಣ ಮಾಡಲಾಗಿತ್ತು. ಅದಾದ ಬಳಿಕ ಅಲ್ - ಖೈದಾದೊಂದಿಗೆ ಸಂಬಂಧ ಕಡಿದುಕೊಳ್ಳಲಾಗಿದೆ ಎಂದು ಈ ಸಂಘಟನೆ ಹೇಳಿಕೊಂಡಿತು.

ಗುರುವಾರ ತಡರಾತ್ರಿ ಆತ್ಮಾಹುತಿ ಬಾಂಬರ್ ಇಡ್ಲಿಬ್ ಪ್ರದೇಶದ ಸರ್ಮದ ಪಟ್ಟಣದಲ್ಲಿರುವ ಅಲ್ - ಕಹ್ತಾನಿಯಯ ಗೆಸ್ಟ್​ ಹೌಸ್​ ಪ್ರವೇಶಿಸಿ ತನ್ನಲ್ಲಿದ್ದ ಸ್ಫೋಟಕಗಳನ್ನು ಸ್ಫೋಟಿಸಿದನು. ಸ್ಫೋಟ ಸಂಭವಿಸಿ ಸ್ವಲ್ಪ ಸಮಯದ ನಂತರ ಅಲ್ - ಕಹ್ತಾನಿಯನ್ನು ಇಡ್ಲಿಬ್‌ನ ಬಾಬ್ ಅಲ್-ಹವಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಗಂಭೀರ ಗಾಯಗಳಿಂದ ಆತ ಸಾವನ್ನಪ್ಪಿದ್ದಾನೆ. ಹಾಗೇ ಸೇನಾ ಅಧಿಕಾರಿಗಳ ಪ್ರಕಾರ ಘಟನೆ ವೇಳೆ ಅಲ್-ಕಹ್ತಾನಿಯ ಮನೆಯಲ್ಲಿದ್ದ ಒಟ್ಟು 9 ಜನ ಗಾಯಗೊಂಡಿದ್ದಾರೆ.

ಇನ್ನು ವಾಯುವ್ಯ ಸಿರಿಯಾ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶವಾಗಿದೆ. ಹಯಾತ್ ತಹ್ರೀರ್ ಅಲ್-ಶಾಮ್ ಸಂಘಟನೆ ವಾಯುವ್ಯ ಇಡ್ಲಿಬ್ ಪ್ರಾಂತ್ಯವನ್ನು ನಿಯಂತ್ರಿಸಿದರೆ, ಟರ್ಕಿ ಬೆಂಬಲಿತ ವಿರೋಧ ಗುಂಪುಗಳು ಉತ್ತರ ಅಲೆಪ್ಪೊ ಪ್ರಾಂತ್ಯವನ್ನು ನಿಯಂತ್ರಿಸುತ್ತವೆ. ಇಡ್ಲಿಬ್ ಮತ್ತು ಅಲೆಪ್ಪೊ ಪ್ರಾಂತ್ಯಗಳಲ್ಲಿ ವಾಸಿಸುವ 4.5 ಮಿಲಿಯನ್ ಜನರಲ್ಲಿ ಹೆಚ್ಚಿನವರು ಸ್ಥಳಾಂತರ ಶಿಬಿರಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಇದನ್ನೂ ಓದಿ:ಇರಾನ್​ನಿಂದ ದಾಳಿ ಸಾಧ್ಯತೆ: ವೈಮಾನಿಕ ಸುರಕ್ಷತೆ ಹೆಚ್ಚಿಸಿದ ಇಸ್ರೇಲ್ - ISRAEL

ABOUT THE AUTHOR

...view details