ETV Bharat / bharat

ಶ್ವಾಸಕೋಶ ಸಂಬಂಧಿ ಸಮಸ್ಯೆಗಳ ಕುರಿತು ನಿಗಾ ಹೆಚ್ಚಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚನೆ - RESPIRATORY DISEASES IN INDIA

ದೇಶದಲ್ಲಿ ಇನ್ಫುಲೆಯೆಂಜಾ, ಎಸ್​ಎಆರ್​ಐ ರೀತಿಯ ಅನಾರೋಗ್ಯ ಪರಿಸ್ಥಿತಿಗಳಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿಲ್ಲ. ಐಸಿಎಂಆರ್​ ದತ್ತಾಂಶಗಳಿಂದ ಇದು ತಿಳಿಯುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

hmpv-centre-asks-states-to-increase-surveillance-for-respiratory-diseases
ಸಾಂದರ್ಭಿಕ ಚಿತ್ರ (IANS)
author img

By ETV Bharat Karnataka Team

Published : Jan 7, 2025, 1:03 PM IST

Updated : Jan 7, 2025, 1:16 PM IST

ನವದೆಹಲಿ: ಐಎಲ್​ಐ ಮತ್ತು ಎಸ್​ಎಆರ್​ಐ ಸೇರಿದಂತೆ ವಿವಿಧ ಉಸಿರಾಟ ಅಸ್ವಸ್ಥತೆಗಳ ಕುರಿತು ಕಣ್ಗಾವಲು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಹಾಗೆಯೇ ಹ್ಯೂಮನ್​ ಮೆಟಾನ್ಯೋಮೊವೈರಸ್​ (ಎಚ್​ಎಂಪಿವಿ) ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಹರಡದಂತೆ ಜಾಗೃತಿ ಮೂಡಿಸುವಂತೆಯೂ ತಿಳಿಸಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾತ್ಸವ ಅವರ ನೇತೃತ್ವದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ಸೋಮವಾರ ವರ್ಚುಯಲ್​ ಸಭೆ ನಡೆಯಿತು. ಈ ವೇಳೆ ಶ್ವಾಸಕೋಶದ ಅಸ್ವಸ್ಥತೆ ಮತ್ತು ಎಚ್​ಎಂಪಿವಿ ಕುರಿತು ಎಲ್ಲಾ ಸಾರ್ವಜನಿಕ ಆರೋಗ್ಯ ಕ್ರಮಗಳ ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆರೋಗ್ಯ ಸಂಶೋಧನಾ ವಿಭಾಗದ ಡಾ.ರಾಜೀವ್​ ಬಹಲ್​, ಆರೋಗ್ಯ ಸೇವೆ ನಿರ್ದೇಶಕ ಡಾ.ಅತುಲ್​ ಗೋಯೆಲ್​, ಎನ್​ಸಿಡಿಸಿ ತಜ್ಞರು ಮತ್ತು ಐಡಿಎಸ್​ಪಿ ಹಾಗೂ ಐಸಿಎಂಆರ್​​, ಎನ್​ಐವಿ ಹಾಗೂ ಐಡಿಎಸ್‌ಪಿಯ ರಾಜ್ಯ ಮೇಲ್ವಿಚಾರಣಾ ಘಟಕದ ಸಿಬ್ಬಂದಿ ಈ ಸಭೆಯಲ್ಲಿ ಭಾಗಿಯಾಗಿದ್ದರು.

ಚೀನಾದಲ್ಲಿ ಹರಡುತ್ತಿರುವ ಎಚ್​ಎಂಪಿವಿ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, ಕರ್ನಾಟಕದಲ್ಲಿ ಎರಡು, ತಮಿಳುಮಾಡು ಮತ್ತು ಗುಜರಾತ್​ನಲ್ಲೂ ವರದಿಯಾಗಿದೆ. ಎಚ್​ಎಂಪಿವಿ ಜಾಗತಿಕವಾಗಿ ಗುರುತಿಸಿರುವ ಶ್ವಾಸಕೋಶದ ವೈರಸ್​ ಆಗಿದ್ದು, ಇದರಲ್ಲಿನ ಪ್ಯಾಥೋಜೆನ್​ ಎಲ್ಲಾ ವಯಸ್ಸಿನ ಗುಂಪಿನಲ್ಲಿ ಶ್ವಾಸಕೋಶದ ಸೋಂಕಿಗೆ ಕಾರಣವಾಗುತ್ತದೆ.

2001ರಿಂದಲೂ ಜಾಗತಿಕವಾಗಿ ಈ ಸೋಂಕು ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀವಾತ್ಸವ ಪ್ರಕಟಣೆಯಲ್ಲಿ ಒತ್ತಿ ಹೇಳಿದ್ದಾರೆ. ಇದೇ ವೇಳೆ, ಐಎಲ್​ಲ್​/ಎಸ್​ಎಆರ್​ಐ ಕಣ್ಗಾವಲನ್ನು ರಾಜ್ಯಗಳು ಹೆಚ್ಚಿಸುವಂತೆ ಸಲಹೆ ನೀಡಿದ್ದಾರೆ.

ಇವುಗಳನ್ನು ತಪ್ಪದೇ ಮಾಡಿ: ಸೋಪಿನಿಂದ ಕೈ ತೊಳೆಯುವುದು, ಕಣ್ಣು ಅಥವಾ ಮೂಗು, ಬಾಯಿಯನ್ನು ಕೈಯಿಂದ ಪದೇ ಪದೇ ಮುಟ್ಟದಂತೆ, ಅನಾರೋಗ್ಯಕರ ಲಕ್ಷಣ ಹೊಂದಿರುವ ಜನರ ಸಂಪರ್ಕಕ್ಕೆ ಒಳಗಾಗದಂತೆ, ಕೆಮ್ಮುವಾಗ ಸೀನುವಾಗ ಬಾಯಿ ಮತ್ತು ಮೂಗು ಮುಚ್ಚುವಂತಹ ಆರೋಗ್ಯಕರ ನಡವಳಿಕೆ ಪಾಲಿಸುವಂತೆ ಕೇಂದ್ರ ಸಲಹೆ ನೀಡಿದೆ.

ಚಳಿಗಾಲದಲ್ಲಿ ಶ್ವಾಸಕೋಶದ ಅನಾರೋಗ್ಯಕ್ಕೆ ಒಳಗಾಗುವುದು ಸಾಮಾನ್ಯ. ಈ ರೀತಿಯ ಸೋಂಕು ಪ್ರಕರಣದಲ್ಲಿ ಏರಿಕೆ ಕಂಡುಬಂದರೆ, ಅದನ್ನು ಎದುರಿಸಲು ದೇಶ ಸಜ್ಜಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಶ್ವಾಸಕೋಶದ ವೈರಸ್​ಗಳಲ್ಲಿ ಎಚ್​ಎಂಪಿವಿ ಕೂಡ ಒಂದು. ಇದು ಎಲ್ಲ ವಯೋಮಾನದವರನ್ನು ಕಾಡುತ್ತದೆ. ವಿಶೇಷವಾಗಿ, ಚಳಿಗಾಲ ಮತ್ತು ವಸಂತಕಾಲದಲ್ಲಿ ಹೆಚ್ಚು. ಈ ಸೋಂಕು ಸೌಮ್ಯ ಮತ್ತು ಸ್ವಯಂಮಿತಿ ಪರಿಸ್ಥಿತಿಯನ್ನು ಹೊಂದಿದ್ದು, ಅನೇಕ ರೋಗಿಗಳು ಸ್ವಯಂ ಚೇತರಿಕೆ ಕಂಡಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ 5ಕ್ಕೆ ಏರಿಕೆ ಕಂಡ ಎಚ್​ಎಂಪಿವಿ ಸೋಂಕಿತ ಪ್ರಕರಣಗಳ ಸಂಖ್ಯೆ: ಇದನ್ನು ತಡೆಗಟ್ಟೋದು ಹೇಗೆ?

Last Updated : Jan 7, 2025, 1:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.