ETV Bharat / entertainment

ಸಂಧ್ಯಾ ಥಿಯೇಟರ್​ ಕಾಲ್ತುಳಿತ: ಆಸ್ಪತ್ರೆಗೆ ತೆರಳಿ ಗಾಯಾಳು ಬಾಲಕನ ಆರೋಗ್ಯ ವಿಚಾರಿಸಿದ ಅಲ್ಲು ಅರ್ಜುನ್​​ - ALLU ARJUN

ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಾದ ಕಾಲ್ತುಳಿತ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶ್ರೀ ತೇಜನನ್ನು ಇಂದು ನಟ ಅಲ್ಲು ಅರ್ಜುನ್ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ​​ ಭೇಟಿಯಾದರು.

Allu Arjun
ಅಲ್ಲು ಅರ್ಜುನ್​​ (Photo: ANI)
author img

By ETV Bharat Entertainment Team

Published : Jan 7, 2025, 12:52 PM IST

ಹೈದರಾಬಾದ್(ತೆಲಂಗಾಣ): ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರು ಡಿಸೆಂಬರ್ 4, 2024ರಂದು ಸಂಧ್ಯಾ ಥಿಯೇಟರ್‌ನಲ್ಲಾದ ಕಾಲ್ತುಳಿತ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 8 ವರ್ಷದ ಶ್ರೀ ತೇಜನನ್ನು ಇಂದು ಭೇಟಿಯಾಗಿದ್ದಾರೆ. ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಗೆ ಆಗಮಿಸಿ ಗಾಯಾಳುವಿನ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ.

ಅಲ್ಲು ಅರ್ಜುನ್​ ಮುಖ್ಯಭೂಮಿಕೆಯ ಪುಷ್ಪ 2: ದಿ ರೂಲ್ ಪ್ರೀಮಿಯರ್​ನಲ್ಲಿ ಕಾಲ್ತುಳಿತ ಸಂಭವಿಸಿತ್ತು. ದುರಂತದಲ್ಲಿ ರೇವತಿ ಎಂಬ ಮಹಿಳೆ ಮೃತಪಟ್ಟರೆ, ಅವರ ಮಗ ಶ್ರೀ ತೇಜ ತೀವ್ರವಾಗಿ ಗಾಯಗೊಂಡಿದ್ದರು. ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ.

ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಅವರೊಂದಿಗೆ ಅಲ್ಲು ಅರ್ಜುನ್ ಸುಮಾರು 30 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿದ್ದರು. ಸುದೀರ್ಘ ಹೋರಾಟದ ನಂತರ ಚೇತರಿಸಿಕೊಳ್ಳುತ್ತಿರುವ ಬಾಲಕನ ಸ್ಥಿತಿಯನ್ನು ನಟ ವಿಚಾರಿಸಿದರು. ಶ್ರೀ ತೇಜ ಸುಮಾರು 3 ವಾರಗಳ ಕಾಲ ವೆಂಟಿಲೇಟರ್‌ನಲ್ಲಿದ್ದರು. 20 ದಿನಗಳ ನಂತರ ಡಿಸೆಂಬರ್ 24ರಂದು ಚಿಕಿತ್ಸೆಗೆ ಸ್ಪಂದಿಸಿದ್ದಾರೆ ಎಂದು ವರದಿಯಾಗಿದೆ.

ಈ ಹಿಂದೆ ಬಾಲಕನ ಭೇಟಿಗೆ ಅಲ್ಲು ಅರ್ಜುನ್​​ ಇಚ್ಛಿಸಿದ್ದರೂ ಕೂಡಾ ಪೊಲೀಸರ ನಿರ್ದೇಶನದಿಂದಾಗಿ ವಿಳಂಬವಾಗಿತ್ತು. ಆರಂಭದಲ್ಲಿ, ಜಾಮೀನು ಷರತ್ತುಗಳ ಭಾಗವಾಗಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ನ್ಯಾಯಾಲಯದ ಆದೇಶವನ್ನು ಪಾಲಿಸಿದ ನಂತರ ಜನವರಿ 5ರಂದು ಆಸ್ಪತ್ರೆಗೆ ಭೇಟಿ ನೀಡಲು ಮುಂದಾಗಿದ್ದರು. ಆದರೆ, ಮಾಧ್ಯಮಗಳು ಮತ್ತು ಸಾರ್ವಜನಿಕರಿಂದಾಗಿ ಆಸ್ಪತ್ರೆಯ ಕೆಲಸಗಳಿಗೆ ಅಡ್ಡಿಯಾಗಬಹುದು, ಹಾಗಾಗಿ ಈ ಭೇಟಿಯನ್ನು ಮರುಪರಿಶೀಲಿಸುವಂತೆ ಸೂಚಿಸಿ ರಾಮಗೋಪಾಲಪೇಟೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಗೌಪ್ಯತೆಯ ಅಗತ್ಯತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವರ ಭೇಟಿಯ ವ್ಯವಸ್ಥೆಗೆ ಜನವರಿ 6ರಂದು ಎರಡನೇ ನೋಟಿಸ್​ ಜಾರಿ ಮಾಡಲಾಗಿತ್ತು.

ಇದನ್ನೂ ಓದಿ: ಜನ್ಮದಿನಕ್ಕೂ ಮುನ್ನ ಕುತೂಹಲಕಾರಿ ಪೋಸ್ಟರ್ ಅನಾವರಣಗೊಳಿಸಿದ ಯಶ್: ಎರಡು ದಿನದಲ್ಲಿ ಸಿಗಲಿದೆ 'ಟಾಕ್ಸಿಕ್'​ ಅಪ್ಡೇಟ್

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ನಡುವೆಯೇ ಅಲ್ಲು ಅರ್ಜುನ್​​ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 13ರಂದು ಅಲ್ಲು ಅವರನ್ನು ಬಂಧಿಸಲಾಗಿತ್ತು. ಮಧ್ಯಂತರ ಜಾಮೀನಿನ ಮೇರೆಗೆ ಮರುದಿನ ಬೆಳಗ್ಗೆ ಜೈಲಿನಿಂದ ಹೊರಬಂದರು. ನಂತರ ನ್ಯಾಯಾಲಯವು ಜನವರಿ 4, 2025ರಂದು ಸಾಮಾನ್ಯ ಜಮೀನು​ ನೀಡಿತು. ಜೊತೆಗೆ, ಪೊಲೀಸ್ ಠಾಣೆಗೆ ವಾರಕ್ಕೊಮ್ಮೆ ಭೇಟಿ ನೀಡುವುದೂ ಸೇರಿದಂತೆ ಸಂಪೂರ್ಣ ತನಿಖೆಗೆ ಸಹಕರಿಸುವಂತೆ ನಟನಿಗೆ ನಿರ್ದೇಶನ ನೀಡಿದೆ. ಇದಲ್ಲದೇ ತೆಲಂಗಾಣ ಹೈಕೋರ್ಟ್‌ ಮುಂದಿನ ವಿಚಾರಣೆಯನ್ನು ಜನವರಿ 21ಕ್ಕೆ ನಿಗದಿಪಡಿಸಿದೆ.

ಇದನ್ನೂ ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್​: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ

ಸಂತ್ರಸ್ತೆಯ ಕುಟುಂಬಕ್ಕೆ ಈಗಾಗಲೇ ನಟ ಆರ್ಥಿಕ ನೆರವು ನೀಡಿದ್ದಾರೆ. ನಟನ ತಂದೆ, ಚಲನಚಿತ್ರ ನಿರ್ಮಾಪಕ ಅಲ್ಲು ಅರವಿಂದ್ ಅವರು ರೇವತಿ ಅವರ ಕುಟುಂಬಕ್ಕೆ 2 ಕೋಟಿ ರೂಪಾಯಿ ನೀಡಿದ್ದಾರೆ. ನಟ 1 ಕೋಟಿ ರೂಪಾಯಿಗಳನ್ನು ನೀಡಿದ್ದಾರೆ. ಪುಷ್ಪ 2ರ ನಿರ್ಮಾಪಕರಾದ ಮೈತ್ರಿ ಮೂವೀಸ್ 50 ಲಕ್ಷ ರೂಪಾಯಿ, ನಿರ್ದೇಶಕ ಸುಕುಮಾರ್ 50 ಲಕ್ಷ ರೂಪಾಯಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.