ಕರ್ನಾಟಕ

karnataka

ETV Bharat / international

ರಿಷಿ ನನಗಿಂತಲೂ ಚೆನ್ನಾಗಿ ಅಡುಗೆ ಮಾಡಬಲ್ಲರು: ಅಕ್ಷತಾ ಮೂರ್ತಿ - Akshata Murty

ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಮತ್ತು ಅಕ್ಷತಾ ಮೂರ್ತಿ ತಮ್ಮ ದೈನಂದಿನ ದಿನಚರಿಯ ಕೆಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡರು.

Akshata Murty prises Rishi Sunak cooking skill
Akshata Murty prises Rishi Sunak cooking skill

By ETV Bharat Karnataka Team

Published : Mar 6, 2024, 11:36 AM IST

ಹೈದರಾಬಾದ್​: ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಅವರ ಅಡುಗೆ ಕೌಶಲ್ಯವನ್ನು ಪತ್ನಿ ಅಕ್ಷತಾ ಮೂರ್ತಿ ಮನಸಾರೆ ಹೊಗಳಿದ್ದಾರೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಮುನ್ನ ನಿಯತಕಾಲಿಕೆಯೊಂದರ ಸಂದರ್ಶನದಲ್ಲಿ ತಮ್ಮ ದೈನಂದಿನ ದಿನಚರಿಯ ಕುರಿತು ಮನಬಿಚ್ಚಿ ಮಾತನಾಡಿದರು.

"ಅಡುಗೆಯಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದೆ. ಆದರೆ ರಿಷಿ ನನಗಿಂತಲೂ ಚೆನ್ನಾಗಿ ಅಡುಗೆ ಮಾಡಬಲ್ಲರು. ಈ ವಿಭಾಗದಲ್ಲಿ ಅವರಿಗೆ ಹೆಚ್ಚು ಪ್ರತಿಭೆ ಇದೆ. ಪ್ರಧಾನಿಯಾಗಿರುವ ಕಾರಣ ಹೆಚ್ಚು ಸಮಯಾವಕಾಶ ಸಿಗುತ್ತಿಲ್ಲ" ಎಂದು ಅಕ್ಷತಾ ಮೂರ್ತಿ ಹೇಳಿದರು.

"ರಿಷಿ ಎಲ್ಲವೂ ಸರಿಯಾದ ಕ್ರಮದಲ್ಲಿರಬೇಕು ಎಂದು ಬಯಸುವ ವಕ್ತಿ. ಕೆಲವೊಮ್ಮೆ ಬೆಡ್​ರೂಂನಲ್ಲಿ ಅವರು ಬೆಡ್​ ಅನ್ನು ಸರಿ ಮಾಡುವ ಕೆಲಸ ಮಾಡುತ್ತಿರುತ್ತಾರೆ. ನಾವಿಬ್ಬರೂ ಒಟ್ಟಿಗೆ ಸ್ಟ್ಯಾನ್‌ಫರ್ಡ್‌ ಯುನಿವರ್ಸಿಟಿಯಲ್ಲಿ ಓದುತ್ತಿದ್ದೆವು. ನಾನು ಹಾಸಿಗೆ ಮೇಲೆ ತಿಂದು ಅಲ್ಲಿಯೇ ತಟ್ಟೆ ಬಿಡುತ್ತಿದ್ದೆ. ನನ್ನ ರೂಮಿಗೆ ಬರುತ್ತಿದ್ದ ರಿಷಿ, ಈ ಅಭ್ಯಾಸದಿಂದ ತುಂಬಾ ಸಿಟ್ಟಾಗುತ್ತಿದ್ದರು. ಬಳಿಕ ಅವರೇ ಅದನ್ನು ತೆಗೆಯುತ್ತಿದ್ದರು" ಎಂದು ಘಟನೆಯೊಂದನ್ನು ಮೆಲುಕು ಹಾಕಿದರು.

"ರಿಷಿಗೆ ಹೋಲಿಸಿದರೆ ನಾನು ಬೆಳಗ್ಗೆ ಬೇಗ ಏಳುವ ವ್ಯಕ್ತಿಯಲ್ಲ. ಎಲ್ಲವೂ ವ್ಯವಸ್ಥಿತವಾಗಿ, ಸರಿಯಾದ ಕ್ರಮದಲ್ಲಿರಬೇಕು ಎಂದು ಬಯಸುವ ವ್ಯಕ್ತಿಯೂ ಅಲ್ಲ. ಆದರೆ ನಮ್ಮಿಬ್ಬರಿಗೂ ಫ್ರೆಂಡ್ಸ್‌​ ಟಿವಿ ಶೋ ಅಚ್ಚುಮೆಚ್ಚಾಗುತ್ತಿತ್ತು. ಪ್ರತಿ ಎಪಿಸೋಡ್‌ಗಳನ್ನೂ ರಾತ್ರಿ ಒಟ್ಟಿಗೆ ನೋಡುತ್ತಿದ್ದೆವು" ಎಂದರು.

"ಮಕ್ಕಳ ಜವಾಬ್ದಾರಿಯನ್ನು ಇಬ್ಬರೂ ಹಂಚಿಕೊಳ್ಳುತ್ತೇವೆ. ಮಗಳು ಕೃಷ್ಣ ಮತ್ತು ಅನುಷ್ಕಾಳ ಹೋಂ ವರ್ಕ್​ ಕರ್ತವ್ಯವನ್ನು ನಾನು ನಿರ್ವಹಿಸುತ್ತೇನೆ. ಉಳಿದ ಜವಾಬ್ದಾರಿ ರಿಷಿಯದು. ಶಾಲೆಯ ವಿಚಾರದಲ್ಲಿ ನಾನು ತುಂಬಾ ಕಟ್ಟುನಿಟ್ಟು. ಅವರ ಹೋಂ ವರ್ಕ್​ ಮಾಡಿದ್ದಾರಾ, ಸರಿಯಾಗಿ ಓದುತ್ತಿದ್ದಾರಾ ಎಂಬೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತೇನೆ. ಶಾಲೆಯ ಕುರಿತಾದ ಎಲ್ಲಾ ವಿಚಾರಗಳನ್ನೂ ನಾನೇ ನಿರ್ವಹಣೆ ಮಾಡುತ್ತೇನೆ" ಎಂದು ಅಕ್ಷತಾ ವಿವರಿಸಿದರು.

"ಅಕ್ಷತಾ ಫಿಟ್ನೆಸ್​ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಆಕೆ ಹೆಚ್ಚು ಪುಸ್ತಕ ಓದುತ್ತಾರೆ. ಆದರೆ, ನಾನು ವಾರದಲ್ಲಿ ಒಂದೋ ಅಥವಾ ಎರಡೋ ಬಾರಿ ರನ್ನಿಂಗ್​ ಮಾಡುತ್ತೇನೆ" ಎಂದು ಸದಾ ನಗುಮೊಗದ ಪ್ರಧಾನಿ ರಿಷಿ ಸುನಕ್ ತಿಳಿಸಿದರು.

ಇದನ್ನೂ ಓದಿ: ಅಕ್ರಮ ವಲಸಿಗರಿಂದ ಯುರೋಪಿಯನ್ ದೇಶಗಳ ವಿನಾಶ; ಯುಕೆ ಪ್ರಧಾನಿ ಸುನಕ್ ಎಚ್ಚರಿಕೆ

ABOUT THE AUTHOR

...view details