ವಾಷಿಂಗ್ಟನ್(ಅಮೆರಿಕ):ಅಮೆರಿಕದಲ್ಲಿ ನಿನ್ನೆಯಷ್ಟೇ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದೃಷ್ಟವಶಾತ್ ಟ್ರಂಪ್ ಪ್ರಾಣಾಪಾಯದಿಂದ ಪಾರಾಗಿದ್ರು. ಈ ಘಟನೆ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆ ಇನ್ನೂ ಹಸಿರಾಗಿರುವಾಗಲೇಬರ್ಮಿಂಗ್ಹ್ಯಾಮ್ ನೈಟ್‌ಕ್ಲಬ್‌ನಲ್ಲಿ ಶನಿವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದರೆ, ನಗರದ ಮನೆಯೊಂದರ ಹೊರಗೆ ನಡೆದ ಗುಂಡಿನ ದಾಳಿಯಲ್ಲಿ ಪುಟ್ಟ ಮಗು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಅಲಬಾಮಾ ಅಧಿಕಾರಿಗಳು ತಿಳಿಸಿದ್ದಾರೆ.
ಬರ್ಮಿಂಗ್ಹ್ಯಾಮ್ ಪೊಲೀಸ್ ಅಧಿಕಾರಿ ಟ್ರೂಮನ್ ಫಿಟ್ಜ್‌ಗೆರಾಲ್ಡ್ ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ನೈಟ್‌ಕ್ಲಬ್ ಬಳಿಯ ಪಾದಚಾರಿ ರಸ್ತೆ ಬಳಿ ಒಬ್ಬ ವ್ಯಕ್ತಿ ಹಾಗೇ ಇಬ್ಬರು ಮಹಿಳೆಯರು ಕ್ಲಬ್ ಒಳಗೆ ಹತ್ಯೆಗೊಳಗಾಗಿದ್ದಾರೆ. ಬರ್ಮಿಂಗ್ಹ್ಯಾಮ್ ಆಸ್ಪತ್ರೆಯಲ್ಲಿ ಗುಂಡಿನ ದಾಳಿಗೆ ಒಳಗಾಗಿದ್ದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯಲ್ಲಿ ಕನಿಷ್ಠ ಒಂಬತ್ತು ಜನ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ತನಿಖಾಧಿಕಾರಿಗಳ ಶಂಕೆ ಪ್ರಕಾರ ಓರ್ವ ಬಂಧೂಕುದಾರಿಯು ಬೀದಿಯಿಂದ ನೈಟ್‌ಕ್ಲಬ್‌ಗೆ ಶೂಟ್ ಮಾಡಿದ್ದಾನೆ ಎಂದು ಟ್ರೂಮನ್ ಫಿಟ್ಜ್‌ಗೆರಾಲ್ಡ್ ತಿಳಿಸಿದ್ದಾರೆ.