ಶ್ರೀನಗರ:ಇಂದು ವಿಶ್ವ ಯುನಾನಿ ವೈದ್ಯಕೀಯ ದಿನ ಆಚರಿಸಲಾಗುತ್ತಿದೆ. 'ಸಮಗ್ರ ಆರೋಗ್ಯ ಪರಿಹಾರಗಳಿಗಾಗಿ ಯುನಾನಿ ಔಷಧದಲ್ಲಿ ನಾವೀನ್ಯತೆ' ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ವಿಶ್ವ ಯುನಾನಿ ದಿನದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಯುನಾನಿ ಔಷಧದ ಮಹತ್ವ ಮತ್ತು ಪರಿಣಾಮಕಾರಿತ್ವದ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.
ಕಳೆದ ಕೆಲವು ವರ್ಷಗಳನ್ನು ನಾವು ಗಮನಿಸಿದರೆ ಜನರು ಮತ್ತೆ ಪ್ರಾಚೀನ ಚಿಕಿತ್ಸಾ ವಿಧಾನದತ್ತ ಆಕರ್ಷಿತರಾಗುತ್ತಿದ್ದಾರೆ. ಮೂಳೆ, ಕೀಲು ನೋವು, ಹೊಟ್ಟೆ, ಚರ್ಮ ರೋಗಗಳು ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಯುನಾನಿ ಔಷಧವನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರವು ಅಸಾಧಾರಣ ಪ್ರಗತಿಯನ್ನು ಸಾಧಿಸಿದೆ ಹಾಗೂ ಹೆಚ್ಚಿನ ರೋಗಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿಸಿರುವ ಪ್ರಸ್ತುತ ಆಧುನಿಕ ಯುಗದಲ್ಲಿ ಪ್ರಾಚೀನ ಚಿಕಿತ್ಸಾ ವಿಧಾನವು ಇನ್ನೂ ಅದರ ಪ್ರಾಮುಖ್ಯತೆ ಉಳಿಸಿಕೊಂಡಿದೆ.
ಆಯುಷ್ ಘಟಕಗಳ ಸ್ಥಾಪನೆ :ಶಾಲಾ ಟೆಂಗ್‌ನ ಸರ್ಕಾರಿ ಯುನಾನಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಫಾರೂಕ್ ಮುಹಮ್ಮದ್ ಅಹ್ಮದ್ ನಕ್ಷ್ಬಂದಿ ಪ್ರತಿಕ್ರಿಯಿಸಿ, ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ನಂತರ, ಜನರು ಪ್ರಾಚೀನ ಚಿಕಿತ್ಸಾ ವಿಧಾನಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಾಚೀನ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ವಿಶ್ವದ ಇತರ ದೇಶಗಳಿಗಿಂತ ಮುಂದಿದೆ. ಹೊಸ ತಂತ್ರಗಳನ್ನು ಪರಿಚಯಿಸುವ ಮೂಲಕ ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಆಸ್ಪತ್ರೆಗಳಲ್ಲಿ ಆಯುಷ್ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ನಾವು ಮತ್ತೊಂದು ಬದಿಯನ್ನು ಯೋಚಿಸುವುದಾದರೆ, ಔಷಧಿಗಳನ್ನು ತಯಾರಿಸಲು ಬಳಸುವ ಸಸ್ಯಗಳು ಹಾಗೂ ಗಿಡಮೂಲಿಕೆಗಳು ಅಪರೂಪವಾಗುತ್ತಿವೆ ಮತ್ತು ಅಳಿವಿನಂಚಿನಲ್ಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಔಷಧಿಗಳಿಗಾಗಿ ಬಳಸುವ ಸಸ್ಯಗಳಲ್ಲಿ ಶೇ. 90ರಷ್ಟು ಅಳಿವಿನಂಚಿನಲ್ಲಿವೆ ಎಂದು ತಜ್ಞರು ತಿಳಿಸುತ್ತಾರೆ. ಅರಣ್ಯ ಪ್ರದೇಶಗಳಲ್ಲಿ 5,000 ಸಸ್ಯ ಪ್ರಭೇದಗಳು ಕಂಡುಬರುತ್ತವೆ. ಅವುಗಳಲ್ಲಿ 500 ಔಷಧಿಗಳಿಗಾಗಿ ಬಳಸಲ್ಪಡುತ್ತವೆ ಹಾಗೂ ಈ 500ರಲ್ಲಿ 300 ಸಸ್ಯಗಳು ಅತ್ಯಂತ ಮಹತ್ವದ್ದಾಗಿವೆ. ಏಕೆಂದರೆ ಅವುಗಳಿಂದ ಕ್ಯಾನ್ಸರ್ ಸೇರಿದಂತೆ ರೋಗಗಳಿಗೆ ಔಷಧಿಗಳನ್ನು ತಯಾರಿಸಲಾಗುತ್ತದೆ ಎಂದು ವಿವರಿಸಿದರು.