How to prevent hepatitis?:ವಿಶ್ವ ಹೆಪಟೈಟಿಸ್ ದಿನವನ್ನು ಪ್ರತಿವರ್ಷ ಜುಲೈ 28 ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಸಾಂಕ್ರಾಮಿಕ ರೋಗವಾಗಿರುವ ಹೆಪಟೈಟಿಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ವಿಶೇಷ ದಿನ ಆಚರಿಸಲಾಗುತ್ತದೆ. ಹೆಪಟೈಟಿಸ್ ಸೋಂಕಿನಿಂದ ಯಕೃತ್ತಿಗೆ ಸಂಬಂಧಿಸಿದ ತೊಂದರೆ ಉಂಟಾಗುತ್ತದೆ. ಇದರಿಂದ ಪ್ರತಿವರ್ಷ ಸುಮಾರು 1.3 ಮಿಲಿಯನ್ ಜನರು ಅಸುನೀಗುತ್ತಿದ್ದಾರೆ.
ಹೆಪಟೈಟಿಸ್ ಕಾಯಿಲೆ ದೇಹದ ಅಗತ್ಯ ಅಂಗವಾದ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದು ಯಕೃತ್ತಿನ ಜೀವಕೋಶಗಳಿಗೆ ಹೆಪಟೈಟಿಸ್ ವೈರಸ್ ಹಾನಿ ಉಂಟು ಮಾಡುತ್ತದೆ. ಯಕೃತ್ತು ದೇಹದಲ್ಲಿ ಹಲವು ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಉದಾಹರಣೆಗೆ ದೇಹದಲ್ಲಿರುವ ವಿಷವನ್ನು ತೆಗೆದುಹಾಕುವುದು, ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವುದು ಮತ್ತು ಶಕ್ತಿಯನ್ನು ಉತ್ಪಾದಿಸುವುದು. ಆದರೆ, ಹೆಪಟೈಟಿಸ್ ಕಾರಣದಿಂದ ಯಕೃತ್ತು ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರಿಂದ ಹಲವಾರು ಸಮಸ್ಯೆಗಳಿಗೆ ಕಾಡುತ್ತವೆ.
ಹೆಪಟೈಟಿಸ್ ಕಾಯಿಲೆಯಲ್ಲಿರುವ ವಿಧಗಳು: ಹೆಪಟೈಟಿಸ್ನಲ್ಲಿ 5 ವಿಧಗಳು ಕಂಡು ಬರುತ್ತದೆ. ಹೆಪಟೈಟಿಸ್ ಎ, ಬಿ, ಸಿ, ಡಿ ಮತ್ತು ಇ A ಮತ್ತು E ಕಾಯಿಲೆಗಳು ಇವೆ. ಇದರಲ್ಲಿ ಹೆಪಟೈಟಿಸ್ ಎ, ಇ A ಮತ್ತು E ಸಾಮಾನ್ಯವಾಗಿ ದೀರ್ಘಕಾಲದವರೆಗೆ ದೇಹದ ಮೇಲೆ ಪರಿಣಾಮ ಬೀರುವುದಿಲ್ಲ. ಇವುಗಳಿಗೆ ಸೂಕ್ತ ಚಿಕಿತ್ಸೆ ಪಡೆದರೆ, ಸ್ವಲ್ಪ ಸಮಯದ ನಂತರ ಗುಣವಾಗುತ್ತವೆ. ಆದರೆ, ಹೆಪಟೈಟಿಸ್ ಬಿ, ಸಿ ಮತ್ತು ಡಿ ವಿಧಗಳು ಹೆಚ್ಚು ಕಾಲ ಉಳಿಯಬಹುದು ಮತ್ತು ಯಕೃತ್ತಿನ ಕಾಯಿಲೆ ಅಥವಾ ಕ್ಯಾನ್ಸರ್ಗೆ ಕಾರಣವಾಗಬಹುದು
- ಹೆಪಟೈಟಿಸ್ ಎ: ಸಾಮಾನ್ಯವಾಗಿ ಕಲುಷಿತ ಆಹಾರ ಅಥವಾ ನೀರಿನಿಂದ ಹರಡುತ್ತದೆ.
- ಹೆಪಟೈಟಿಸ್ ಬಿ: ಇದು ಸೋಂಕಿತ ವ್ಯಕ್ತಿಯ ರಕ್ತ, ಲಾಲಾರಸ ಅಥವಾ ಇತರ ದೇಹದ ದ್ರವಗಳ ಸಂಪರ್ಕದಿಂದ ಹರಡುತ್ತದೆ.
- ಹೆಪಟೈಟಿಸ್ ಸಿ:ಸಾಮಾನ್ಯವಾಗಿ ಸೋಂಕಿತ ರಕ್ತದ ಸಂಪರ್ಕದಿಂದ ಹರಡುತ್ತದೆ.
- ಹೆಪಟೈಟಿಸ್ ಡಿ: ಈ ರೋಗವು ಹೆಪಟೈಟಿಸ್ ಬಿ ಕಾಯಿಲೆಯಿಂದ ಉಂಟಾಗುತ್ತದೆ.
- ಹೆಪಟೈಟಿಸ್ ಇ: ಈ ರೋಗವು ಕಲುಷಿತ ಆಹಾರ ಅಥವಾ ನೀರಿನ ಮೂಲಕವೂ ಹರಡುತ್ತದೆ.
ಹೆಪಟೈಟಿಸ್ನ ಲಕ್ಷಣಗಳು:
- ಆಯಾಸ
- ಹಳದಿ ಕಣ್ಣುಗಳು ಮತ್ತು ಚರ್ಮ (ಕಾಮಾಲೆ)
- ಹೊಟ್ಟೆ ನೋವು
- ಜ್ವರ
- ವಾಂತಿ ಅಥವಾ ವಾಕರಿಕೆ
- ಹಸಿವು ಕಡಿಮೆಯಾಗುವುದು
- ಕಪ್ಪು ಮೂತ್ರ
- ತಿಳಿ ಬಣ್ಣದ ಮಲ
- ಕೀಲುಗಳಲ್ಲಿ ನೋವು
ಹೆಪಟೈಟಿಸ್ಗೆ ಕಾರಣಗಳೇನು?:
ವೈರಸ್ಗಳು: ವಿವಿಧ ರೀತಿಯ ಹೆಪಟೈಟಿಸ್ ವೈರಸ್ ಯಕೃತ್ತಿನಲ್ಲಿ ಸೋಂಕು ಉಂಟು ಮಾಡುತ್ತದೆ.