ETV Bharat / health

ಸಮತೋಲಿತ ಆಹಾರದಿಂದ ಮಾತ್ರವೇ ಸರಿಯಾದ ಶಕ್ತಿ ಲಭ್ಯ: ನಿಮ್ಮ ಆಹಾರ ಕ್ರಮ ಹೇಗಿದೆ? ಚೆಕ್​ ಮಾಡಿಕೊಳ್ಳಿ - healthy Eating habbit

author img

By ETV Bharat Karnataka Team

Published : Sep 17, 2024, 4:49 PM IST

ಸಮತೋಲಿತ ಆಹಾರಗಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಬೆಳವಣಿಗೆ ಜೊತೆಗೆ ವಯಸ್ಕ ಹಂತದಲ್ಲಿ ಕಾಣುವ ಜೀವನಶೈಲಿ ರೋಗಗಳಿಂದ ನಮಗೆ ರಕ್ಷಣೆ ನೀಡುತ್ತದೆ.

health-eating-right-food-brings-strength-but-is-it-enough
ಸಮತೋಲಿತ ಆಹಾರ (ಈಟಿವಿ ಭಾರತ್​)

ಹೈದರಾಬಾದ್​: ಆರೋಗ್ಯಯುತ ಜೀವನಕ್ಕೆ ಸರಳ ಆಹಾರ ಸೇವನೆಯೊಂದೇ ಅಗತ್ಯವಾಗುವುದಿಲ್ಲ. ಸರಿಯಾದ ಸಮತೋಲಿತ ಆಹಾರ ಮತ್ತು ಎಷ್ಟು ತಿನ್ನಬೇಕು ಎಂದು ತಿಳಿಯುವುದು ಕೂಡಾ ಅಷ್ಟೇ ಅಗತ್ಯ ಎನ್ನುತ್ತಾರೆ ತಜ್ಞರು. ಆಹಾರ ಸಮತೋಲನ ಕಾಯ್ದುಕೊಳ್ಳದಿರುವುದು ಅನೇಕ ಬಾರಿ ಅಪಾಯಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸೇವಿಸುವ ಆಹಾರದ ಹಿಂದೆಯೂ ಲೆಕ್ಕಾಚಾರ ಮಾಡುವುದು ಅಗತ್ಯವಾಗಿದೆ.

ದಿನಕ್ಕೆ ಎಷ್ಟು ಆಹಾರ ಸೇವಿಸಬೇಕು: ವಯಸ್ಸಿಗೆ ಅನುಗುಣವಾಗಿ ಇದರ ಲೆಕ್ಕಾಚಾರ ಇರುತ್ತದೆ. ಹುಟ್ಟಿದ ಮಗುವಿನಿಂದ ವಯೋವೃದ್ದವರೆಗೂ ಸರಿಯಾದ ಸಮತೋಲಿತ ಆಹಾರ ಅಗತ್ಯವಾಗಿದೆ. ಸಮತೋಲಿತ ಆಹಾರಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಬೆಳವಣಿಗೆ ಜೊತೆಗೆ ವಯಸ್ಕ ಹಂತದಲ್ಲಿ ಕಾಣುವ ಜೀವನಶೈಲಿ ರೋಗದಿಂದ ರಕ್ಷಣೆಯನ್ನು ಕೊಡುತ್ತದೆ. ವಯಸ್ಕರು ಸುಧಾರಿತ ದೈಹಿಕ ಚಟುವಟಿಕೆ ಜೊತೆಗೆ ದಿನಕ್ಕೆ 2,000 ಕ್ಯಾಲೋರಿಸ್​​ ಆಹಾರ ಸೇವನೆಗೆ ಶಿಫಾರಸು ಮಾಡಲಾಗುತ್ತದೆ.

ಏನು ತಿನ್ನಬೇಕು?: ಸಮತೋಲಿತ ಆಹಾರವೂ ಒಂದೇ ಆಹಾರ ಮೂಲದಿಂದ ಸಿಗುವುದಿಲ್ಲ. ಇದು ಈ ಹಿನ್ನಲೆ ಆಹಾರ ಸಾಮಗ್ರಿಗಳ ಆಯ್ಕೆಯಲ್ಲಿ ಎಚ್ಚರವಹಿಸುವುದು ಅಗತ್ಯ. ನಿಮ್ಮ ಅರ್ಧದಷ್ಟು ತಟ್ಟೆ, ತರಕಾರಿ ಮತ್ತು ಹಣ್ಣಿನಿಂದ ಕೂಡಿರಬೇಕು. ಮತ್ತಿನ್ನರ್ಧ ಆಹಾರ ಅಕ್ಕಿ, ಗೋಧಿಯಂತಹ ಧಾನ್ಯ, ಸಿರಿಧಾನ್ಯ, ಮಾಂಸ, ಮೊಟ್ಟೆ, ಎಣ್ಣೆ ಬೀಜ, ಹಾಲುಗಳನ್ನು ಒಳಗೊಂಡಿರಬೇಕು. ಈ ರೀತಿಯ ವೈವಿಧ್ಯಮಯ, ಪೌಷ್ಠಿಕಾಂಶ ಸಮೃದ್ಧ ಆಹಾರ ಸೇವನೆಯಿಂದ ದೇಹ ಕೇವಲ ಮ್ಯಾಕ್ರೋನ್ಯೂಟ್ರಿಯಂಟ್​ ಅಂದರೆ ಕಾರ್ಬೋಹೈಡ್ರೇಟ್ಸ್​, ಪ್ರೋಟಿನ್​, ಕೊಬ್ಬಿನ ಜೊತೆಗೆ ವಿಟಮಿನ್​ ಮತ್ತು ಮಿನರಲ್ಸ್​ನಂತಹ ಅಂಶಗಳನ್ನು ಪಡೆಯುತ್ತದೆ.

ಸರಿಯಾಗಿ ತಿನ್ನುತ್ತಿದ್ದೀರಾ?: ಭಾರತದಲ್ಲಿ ಅನೇಕ ಮಂದಿ ಮೈಕ್ರೋನ್ಯೂಟಿಯಟ್ ಕೊರತೆಯಿಂದ ಬಳಲುತ್ತಿದ್ದಾರೆ. ಕಾರಣ ಕಚ್ಛಾ ಧಾನ್ಯದ ಬದಲಾಗಿ ಅವರು, ಸಂಸ್ಕರಿಸಿದ ಧಾನ್ಯ- ಕಾಳು ಸೇವಿಸುತ್ತಿದ್ದಾರೆ. ತಾಜಾ ಸಿದ್ದಪಡಿಸಿದ ಆಹಾರಗಳಿಂದ ಅಗತ್ಯ ಪೌಷ್ಠಿಕಾಂಶ ಲಭ್ಯವಾಗುತ್ತದೆ. ದೇಹಕ್ಕೆ ಶೇ 50ರಷ್ಟು ಶಕ್ತಿಯು ಧಾನ್ಯಗಳಿಂದಲೇ ಬರುತ್ತದೆ. ಉಳಿದವು ಪ್ರೋಟಿನ್​ ಮತ್ತು ಇತರ ಪೌಷ್ಟಿಕಾಂಶಗಳಿಂದ ಸಿಗಲಿದೆ. ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್​ಐಎನ್​) ಪತ್ತೆ ಮಾಡಿದಂತೆ ಭಾರತದಲ್ಲಿ ಜನರು ಶಕ್ತಿಯನ್ನು ಶೇ 50- 70ರಷ್ಟುನ್ನು ಧಾನ್ಯಗಳಿಂದ ಪಡೆದರೆ, ಕೇವಲ 6 ರಿಂದ 9ರಷ್ಟು ಪ್ರೋಟಿನ್​ ಆಹಾರಗಳಿಂದ ಪಡೆಯುತ್ತಿದ್ದಾರೆ.

ಪೌಷ್ಟಿಕಾಂಶ ಕೊರತೆಗೆ ಕಾರಣವೇನು?:

ಹೆಚ್ಚುತ್ತಿರುವ ಆಹಾರದ ಬೆಲೆ: ಪೌಷ್ಟಿಕಾಂಶ ಕೊರತೆಯ ಅಂತರಕ್ಕೆ ಪ್ರಮುಖ ಕಾರಣವೇ ಆಹಾರ ಬೆಲೆ ಹೆಚ್ಚಳ. ಕಳೆದ ಐದು ವರ್ಷಗಳಿಂದ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದ ಸಮತೋಲಿತ ಆಹಾರಗಳು ಐಷಾರಾಮಿ ಆಗುತ್ತಿವೆ. ಕೆಲವು ರಾಜ್ಯಗಳಲ್ಲಿ ಆಹಾರ ಬೆಲೆ 2019 ರಿಂದ ಶೇ 30ರಷ್ಟು ಹೆಚ್ಚಾಗಿದೆ. ಇದರಿಂದ ಪೌಷ್ಟಿಕಾಂಶ ಸಮೃದ್ಧ ಆಹಾರ ಕೈಗೆಟುಕದಂತೆ ಆಗಿದೆ.

ಜಾಗೃತಿ ಕೊರತೆ: ಪೌಷ್ಟಿಕಾಂಶ ಸಂಬಂಧಿಸಿದಂತೆ ಅನೇಕ ಜನರಲ್ಲಿ ಅರಿವಿನ ಕೊರತೆ ಇದೆ. ಜೊತೆಗೆ ಅನಾರೋಗ್ಯಕರ, ಸಕ್ಕರೆ, ಉಪ್ಪು ಮತ್ತು ಕೊಬ್ಬಿನಂತಹ ಅಲ್ಟ್ರಾ ಸಂಸ್ಕರಿತ ಆಹಾರಗಳು ಅಧಿಕ ಮಾರುಕಟ್ಟೆ ಕೂಡ ಕಾರಣವಾಗಿದೆ. ತಮಿಳುನಾಡು ಮತ್ತು ಗುಜರಾತ್​ನಂತಹ ಶ್ರೀಮಂತ ರಾಜ್ಯದಲ್ಲೂ ಪೌಷ್ಟಿಕಾಂಶದ ಅರವಿನ ಕೊರತೆ ಇದ್ದು, ಕಳಪೆ ಆಹಾರದ ಆಯ್ಕೆಗೆ ಕಾರಣವಾಗುತ್ತಿದೆ.

ಕಡಿಮೆ ವೆಚ್ಚದ, ಅಲ್ಟ್ರಾ ಪ್ರೊಸೆಸ್ಡ್​​ ಆಹಾರ ಮತ್ತು ಪಾನೀಯಗಳ ಸೇವನೆ ಹೆಚ್ಚಳವು ಮೈಕ್ರೋನೂಟ್ರಿಯೆಂಟ್​​ ಕೊರತೆ ಮತ್ತು ಸ್ಥೂಲಕಾಯಕ್ಕೆ ಕಾರಣವಾಗುತ್ತಿದೆ. ಹೌಸ್​​ ಹೋಲ್ಡ್​ ಎಕ್ಸ್​ಚೇಂಜ್​​​ ಸರ್ವೆ (2022-23) ಪ್ರಕಾರ, ಗ್ರಾಮೀಣ ಭಾರತೀಯರು ಸಂಸ್ಕರಿತ ಆಹಾರದ ಮೇಲೆ ಮಾಸಿಕವಾಗಿ 9.6ರಷ್ಟು ವ್ಯಯ ಮಾಡಿದರೆ, ನಗರದಲ್ಲಿ ಶೇ 10.6ರಷ್ಟಿದೆ.

ಎನ್​ಐಎ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳು ಹೀಗಿದೆ.

ಉಪ್ಪು, ಸಕ್ಕರೆ ಮತ್ತು ಅಧಿಕ ಸಂಸ್ಕರಿತ ಆಹಾರ ಸೇವನೆ ಕಡಿತ ಮಾಡಬೇಕು.

ಎಣ್ಣೆ ಮತ್ತು ಕೊಬ್ಬಿನ ಅಂಶ ಸೇವನೆ ಬಗ್ಗೆ ನಿಯಂತ್ರಣ

ನಿಯಮಿತ ವ್ಯಾಯಾಮ ಅಗತ್ಯ: ಆಹಾರ ಉತ್ಪನ್ನಗಳನ್ನು ಆಯ್ಕೆ, ಸೇವನೆ ಮಾಡುವಾಗ ಪ್ಯಾಕೆಟ್​ನಲ್ಲಿರುವ ಲೇಬಲ್​ಗಳನ್ನು ಎಚ್ಚರಿಕೆಯಿಂದ ಓದುವುದು ಅಗತ್ಯವಾಗಿದೆ. ಇದರಿಂದ ಅಧಿಕ ಕ್ಯಾಲೋರಿ ಬದಲಾಗಿ ಹೆಚ್ಚು ಪೌಷ್ಟಿಕಾಂಶವನ್ನು ಆಯ್ಕೆ ಮಾಡಬಹುದಾಗಿದೆ.

ಹೀಗಿರಲಿ ಡಯಟ್​: ಸಮತೋಲಿತ ಆಹಾರದಲ್ಲಿ 2,000 ಕಿಲೋಕ್ಯಾಲರಿ ಇರಬೇಕು

  • ಧಾನ್ಯಗಳು, ಕಾಳುಗಳು ಶೇ 50ರಷ್ಟು ಮೀರಬಾರದು.
  • ಕಾಳುಗಳು, ಮಾಂಸ, ನಟ್ಸ್​ಗಳು ಮೌಲ್ಯ ಶೇ 15ರಷ್ಟು ಮೀರಿರಬಾರದು.
  • ಉಳಿದ ಕ್ಯಾಲೋರಿಯನ್ನು ತರಕಾರಿ, ಹಣ್ಣು, ಹಾಲು, ಯೋಗರ್ಟ್​, ಒಣ ಧಾನ್ಯಗಳಿಂದ ಪಡೆಯಬೇಕು.

ಸಮತೋಲಿತ ಡಯಟ್​ನ ಪ್ರಯೋಜನ

  • ಪ್ರತಿರಕ್ಷಣಾ ವ್ಯವಸ್ಥೆ ಬಲಗೊಳ್ಳುತ್ತದೆ.
  • ಸರಾಗ ಜೀರ್ಣಕ್ರಿಯೆಗಾಗಿ ಉತ್ತಮ ಬ್ಯಾಕ್ಟೀರಿಯಾ ಉತ್ತೇಜನ
  • ಮಧುಮೇಹ, ಹೃದಯ ರೋಗ ಮತ್ತು ರಕ್ತನಾಳದ ಸಮಸ್ಯೆ ತಡೆಗೆ ಸಹಾಯಕ.
  • ರಕ್ತದ ಸಕ್ಕರೆ ಮಟ್ಟ ಮತ್ತು ಇನ್ಸುಲಿನ್​ ಮಟ್ಟ ನಿಯಂತ್ರಿಸಬೇಕು.

ಕಳಪೆ ಪೌಷ್ಟಿಕಾಂಶದ ಅಪಾಯ: ದೇಹದಲ್ಲಿ ಮೈಕ್ರೋನೂಟ್ರಿಯೆಂಟ್ಸ್​ ಕೊರತೆ ಉಂಟಾದಲ್ಲಿ ಚಯಾಪಚಯ ಕ್ರಿಯೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಇನ್ಸುಲಿನ್​ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಅನೇಕ ರೋಗಗಳಿಗೂ ಕಾರಣವಾಗುತ್ತದೆ. ಭಾರತದಲ್ಲಿ ರೋಗಗಳ ಅಭಿವೃದ್ಧಿಯಲ್ಲಿ ಕಳಪೆ ಮಧುಮೇಹ ಅಭ್ಯಾಸವೂ ಶೇ 56ರಷ್ಟಕ್ಕೆ ಕಾರಣವಾಗಿದೆ. ಜೊತೆಗೆ 5 ರಿಂದ 9 ವರ್ಷದ ಶೇ 34ರಷ್ಟು ಮಕ್ಕಳು ಅಪೌಷ್ಟಿಕಾಂಶತೆಯಿಂದ ಬಳುತ್ತಿದ್ದಾರೆ.

ಅಧಿಕ ಮಟ್ಟದ ಕಾರ್ಬೋಹೈಡ್ರೇಟ್​​: ಎನ್​ಐಎನ್​ ವಿಜ್ಞಾನಿಗಳ ಎಚ್ಚರಿಕೆ: ಹೆಚ್ಚಿನ ಆಹಾರಗಳಲ್ಲಿ ಶೇ 70-75ರಷ್ಟು ಕ್ಯಾಲೋರಿಗಳು ಕಾರ್ಬೋಹೈಡ್ರೇಟ್‌ಗಳಿಂದ ಬರುತ್ತವೆ, ಮುಖ್ಯವಾಗಿ ಅಕ್ಕಿ, ಗೋಧಿ ಮತ್ತು ಧಾನ್ಯಗಳಿಂದ ಬರುತ್ತವೆ ಎಂದು ಎಚ್ಚರಿಸಿದ್ದಾರೆ. ಈ ಕಾರ್ಬೋ ಹೈಡ್ರೇಟ್​​ ಶೇ 50ಕ್ಕಿಂತ ಹೆಚ್ಚಾದಲ್ಲಿ ಮಧುಮೇಹ ಮತ್ತು ಸ್ಥೂಲಕಾಯತೆ ಸಮಸ್ಯೆಗೆ ಕಾರಣವಾಗುತ್ತದೆ. ಬದಲಿಗೆ ಬೇಳೆಕಾಳುಗಳು, ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಬೀಜಗಳು, ಕಾಳುಗಳು, ಹಾಲು ಮತ್ತು ಮೊಸರುಗಳಿಂದ ಹೆಚ್ಚಿನ ಪ್ರೋಟೀನ್ ಅನ್ನು ಸೇರಿಸಬೇಕು. ತೈಲಗಳ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಎನ್ಐಎನ್ ವಿಜ್ಞಾನಿ ಅವುಲಾ ಲಕ್ಷ್ಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಮಧುಮೇಹ ನಿಯಂತ್ರಣ, ಮೂಳೆ, ಹಲ್ಲಿಗೆ ಬಲ ; ಜೋಳದ ರೊಟ್ಟಿ ಮ್ಯಾಜಿಕ್​ ಬಗ್ಗೆ ತಜ್ಞರ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.