ETV Bharat / health

ಊಟ ಮಾಡಿದ ತಕ್ಷಣವೇ ನಿಮಗೆ ಎದೆಯುರಿ ಕಾಣಿಸಿಕೊಳ್ಳುತ್ತಾ? ತಜ್ಞರ ಈ ಮುನ್ನೆಚ್ಚರಿಕೆ ಪಾಲಿಸಿದ್ರೆ ಎಲ್ಲಾ ಮಾಯ! - Heartburn Relief Tips - HEARTBURN RELIEF TIPS

Chest Burning Reduce Tips: ಕೆಲವರಿಗೆ ಊಟದ ನಂತರ ಅಥವಾ ಏನಾದರೂ ತಿಂದ ತಕ್ಷಣವೇ ಹೊಟ್ಟೆ ಮತ್ತು ಎದೆಯಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಇದರಿಂದ ಅವರು ತುಂಬಾ ತೊಂದರೆಗೀಡಾಗುತ್ತಾರೆ. ಹಾಗಾದರೆ, ನೀವೂ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಇದಕ್ಕೆ ಕಾರಣಗಳೇನು? ಈ ಸಮಸ್ಯೆಯಿಂದ ಮುಕ್ತಿ ಪಡೆಯುವುದು ಹೇಗೆ ಅನ್ನೋದನ್ನು ತಿಳಿಯಿರಿ..

PRECAUTIONS FOR REDUCE CHEST BURN  HEARTBURN CAUSES  PRECAUTIONS FOR HEARTBURN RELIEF  HOW TO REDUCE HEARTBURN
ಎದೆಯುರಿ (ETV Bharat)
author img

By ETV Bharat Health Team

Published : Sep 16, 2024, 7:59 PM IST

Precautions for Reduce Chest Burning: ಸಾಮಾನ್ಯವಾಗಿ ನಾವು ಆಹಾರವನ್ನು ಸೇವಿಸಿದಾಗ ಅದು ಅನ್ನನಾಳದ ಮೂಲಕ ಜೀರ್ಣಾಂಗವನ್ನು ತಲುಪುತ್ತದೆ. ಅನ್ನನಾಳದಲ್ಲಿ ಆಹಾರದ ಜೊತೆಗೆ ಹೊಟ್ಟೆಯಲ್ಲಿ ರೂಪುಗೊಂಡ ಆಮ್ಲವು ಮತ್ತೆ ಮೇಲಕ್ಕೆ ಬರದಂತೆ ತಡೆಯಲು ಕವಾಟವಿದೆ. ಯಾವುದೇ ಕಾರಣಕ್ಕಾಗಿ, ಈ ಕವಾಟವು ಹಾನಿಗೊಳಗಾದಾಗ ಅಥವಾ ಸಡಿಲವಾದಾಗ, ಹೊಟ್ಟೆಯ ಆಮ್ಲವು ಗಂಟಲಿಗೆ ಹಿಂತಿರುಗಲು ಪ್ರಾರಂಭಿಸುತ್ತದೆ. ಇದರಿಂದ ಎದೆಯುರಿ, ಎದೆನೋವಿನಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಕೆ.ರಾಕೇಶ್.

ಈ ಸಮಸ್ಯೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ 'ಗ್ಯಾಸ್ಟ್ರೋ ಈಸೋಫೇಜಿಲ್ ರಿಫ್ಲೆಕ್ಸ್ ಕಾಯಿಲೆ' ಎಂದು ಕರೆಯಲಾಗುತ್ತದೆ. ಇದನ್ನು ಆಡುಮಾತಿನಲ್ಲಿ 'GERD' ಎಂದು ಹೇಳಲಾಗುತ್ತದೆ. ಡಾ.ರಾಕೇಶ್ ಪ್ರಕಾರ, ಎದೆಯುರಿ, ಗ್ಯಾಸ್, ಅಸಿಡಿಟಿ ಮತ್ತು ಅಲ್ಸರ್​ಗೆ ಮುಖ್ಯ ಕಾರಣಗಳು ಕೆಟ್ಟ ಆಹಾರ ಪದ್ಧತಿ, ಜೀವನಶೈಲಿಯ ಬದಲಾವಣೆ, ದೈಹಿಕ ಚಟುವಟಿಕೆಯ ಕೊರತೆ, ಅಧಿಕ ತೂಕ, ಬೊಜ್ಜು, ಧೂಮಪಾನ ಮತ್ತು ಮದ್ಯಪಾನ. ಅಲ್ಲದೆ.. ಹೆಚ್ಚು ಮಸಾಲೆ ಪದಾರ್ಥಗಳನ್ನು ಸೇವಿಸುವುದು, ಬಣ್ಣ ಲೇಪಿತ ಪದಾರ್ಥಗಳಿರುವ ಪದಾರ್ಥಗಳನ್ನು ಆಗಾಗ ಸೇವಿಸುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದು, ಅತಿಯಾದ ಒತ್ತಡಕ್ಕೆ ಒಳಗಾಗುವುದು, ಇವೆಲ್ಲವೂ ಕವಾಟವನ್ನು ಹಾಳು ಮಾಡಿ GERDಗೆ ಕಾರಣವಾಗುತ್ತವೆ ಎಂದು ಹೇಳುತ್ತಾರೆ ವೈದ್ಯರು.

ಮೇಲಾಗಿ ಹೊಟ್ಟೆಯ ಆಮ್ಲವು ಅನ್ನನಾಳಕ್ಕೆ ಆಗಾಗ ಬರುವುದರಿಂದ ಅನ್ನನಾಳಕ್ಕೆ ಹಾನಿಯಾಗುವ ಸಂಭವವಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ನೀವು ಆಗಾಗ್ಗೆ ಈ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ತಕ್ಷಣವೇ ಎಚ್ಚೆತ್ತುಕೊಂಡು ಸಂಬಂಧಪಟ್ಟ ವೈದ್ಯರಲ್ಲಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ. ಅಲ್ಲದೆ.. ಒಂದಷ್ಟು ಮುಂಜಾಗ್ರತೆ ವಹಿಸುವುದು ಕಡ್ಡಾಯ ಎನ್ನುತ್ತಾರೆ ವೈದ್ಯರು.

ಕಡ್ಡಾಯವಾಗಿ ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?:

  • ಎದೆಯುರಿ, ಗ್ಯಾಸ್ ಮತ್ತು ಅಲ್ಸರ್ ಇತ್ಯಾದಿಗಳಿಂದ ದೂರವಿರಲು, ಆಹಾರದ ಮುನ್ನೆಚ್ಚರಿಕೆಗಳ ಜೊತೆಗೆ ಆರೋಗ್ಯಕರ ಜೀವನಶೈಲಿಗಾಗಿ ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಅವಶ್ಯಕ.
  • NIH ಸಂಶೋಧಕರ ತಂಡವೂ ಇದೇ ವಿಷಯವನ್ನು ಬಹಿರಂಗಪಡಿಸಿದೆ. (ನ್ಯೂಸ್ ಇನ್ ಹೆಲ್ತ್ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.)
  • ಮೊದಲನೆಯದಾಗಿ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಬೇಕು.
  • ನಿರ್ದಿಷ್ಟವಾಗಿ ಹೇಳುವುದಾದರೆ, ಮಸಾಲೆಗಳು, ಮೆಣಸಿನಕಾಯಿಗಳು, ಎಣ್ಣೆ ಪದಾರ್ಥಗಳು, ಜಂಕ್ ಫುಡ್, ಪಿಜ್ಜಾ, ಬರ್ಗರ್, ಚೀಸ್ ಅನ್ನು ದೂರವಿಡುವುದನ್ನು ಖಚಿತಪಡಿಸಿಕೊಳ್ಳಬೇಕು.
  • ಅದೇ ರೀತಿ.. ಸಮಯಕ್ಕೆ ಸರಿಯಾಗಿ ಊಟ ಮಾಡಬೇಕು. ಅತಿಯಾಗಿ ತಿನ್ನಬೇಡಿ. ಅದರಲ್ಲೂ ಸಮಾಧಾನದಿಂದ ತಿನ್ನುವುದನ್ನು ರೂಢಿಸಿಕೊಳ್ಳಬೇಕು.
  • ತಿಂದ ತಕ್ಷಣ ಮಲಗಬೇಡಿ. ಕನಿಷ್ಠ ಒಂದು ಗಂಟೆ ವಿರಾಮ ಇರಬೇಕಾಗುತ್ತದೆ.
  • ಒತ್ತಡ ಮತ್ತು ಮಾನಸಿಕ ಚಿಂತೆಗಳು ನಿಮ್ಮನ್ನು ಕಾಡದಂತೆ ಎಚ್ಚರವಹಿಸಿ.
  • ಅಧಿಕ ತೂಕ ಇರುವವರು.. ತಮ್ಮ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡಿ.
  • ಇವುಗಳ ಜೊತೆಗೆ ಮದ್ಯಪಾನ ಮತ್ತು ಧೂಮಪಾನದಿಂದ ಆದಷ್ಟು ದೂರವಿರಲು ಡಾ.ರಾಕೇಶ್ ಸಲಹೆ ನೀಡುತ್ತಾರೆ.
ಇದನ್ನೂ ಓದಿ: ವ್ಯಾಯಾಮಕ್ಕೂ ಮುನ್ನ ಬಾಳೆಹಣ್ಣು ತಿಂದರೆ ಏನಾಗುತ್ತೆ?: ತಜ್ಞರು ಹೇಳೋದು ಹೀಗೆ.. - BANANA HEALTH BENEFITS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.