ETV Bharat / state

ಹುಬ್ಬಳ್ಳಿ: ಗಣೇಶೋತ್ಸವ ಮೆರವಣಿಗೆಯಲ್ಲಿ ನಟ ದರ್ಶನ್ ಫೋಟೋ ಹಿಡಿದು ಕುಣಿದ ಅಭಿಮಾನಿಗಳು - Hubballi Ganesh Procession

ಹುಬ್ಬಳ್ಳಿಯಲ್ಲಿ ಮಂಗಳವಾರ ರಾತ್ರಿ ಅದ್ಧೂರಿಯಾಗಿ 105 ಗಣೇಶ ಮೂರ್ತಿಗಳ ಶೋಭಾಯಾತ್ರೆ ನಡೆಯಿತು. ಈ ವೇಳೆ ಅಭಿಮಾನಿಗಳು ನಟ ದರ್ಶನ್​ ಫೋಟೋ ಹಿಡಿದು ಕುಣಿದ ದೃಶ್ಯ ಕಂಡುಬಂತು.

Fan danced holding Darshan's photo
ಗಣೇಶೋತ್ಸವದ ನಿಮಜ್ಜನಾ ಮೆರವಣಿಗೆಯಲ್ಲಿ ನಟ ದರ್ಶನ್ ಫೋಟೋ ಹಿಡಿದು ಕುಣಿದಾಡಿದ ಅಭಿಮಾನಿ (ETV Bharat)
author img

By ETV Bharat Karnataka Team

Published : Sep 18, 2024, 12:00 PM IST

Updated : Sep 18, 2024, 1:59 PM IST

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ 11 ದಿನಗಳ ಬಳಿಕ ಮಂಗಳವಾರ ಅದ್ಧೂರಿ ಮೆರವಣಿಗೆಯೊಂದಿಗೆ ಗಣೇಶನಿಗೆ ವಿದಾಯ ಹೇಳಲಾಯಿತು. ನಿಮಜ್ಜನ ಹಿನ್ನೆಲೆಯಲ್ಲಿ ಅವಳಿ‌ ನಗರದಲ್ಲಿ ಒಟ್ಟು 105 ಗಣೇಶ ಮೂರ್ತಿಗಳ ಮೆರವಣಿಗೆ ನಡೆಯಿತು. ಈ ವೇಳೆ ಅಭಿಮಾನಿಗಳು ನಟ ದರ್ಶನ್​ ಫೋಟೋ ಹಿಡಿದು ಕುಣಿದ ದೃಶ್ಯ ಕಂಡುಬಂದಿದೆ.

ಗಣೇಶೋತ್ಸವದ ನಿಮಜ್ಜನಾ ಮೆರವಣಿಗೆಯಲ್ಲಿ ನಟ ದರ್ಶನ್ ಫೋಟೋ ಹಿಡಿದು ಕುಣಿದಾಡಿದ ಅಭಿಮಾನಿ (ETV Bharat)

ಹುಬ್ಬಳ್ಳಿಯ ಮರಾಠ ಗಲ್ಲಿ, ಮ್ಯಾದರ ಓಣಿ, ಶಕ್ತಿ ನಗರ, ಪೆಂಡಾರ ಗಲ್ಲಿ, ದಾಜಿಬಾನ್ ಪೇಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಬೃಹತ್ ಗಣೇಶ ಮೂರ್ತಿಗಳ ಮೆರವಣಿಗೆ ಗಮನ ಸೆಳೆಯಿತು. ಡಿಜೆ, ವಾದ್ಯಗಳ ಸದ್ದಿಗೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ರಾತ್ರಿ ಹತ್ತು ಗಂಟೆಯವರಿಗೆ ಡಿಜೆಗೆ ಅವಕಾಶ ನೀಡಲಾಗಿತ್ತು. ಇಂದಿರಾ ಗಾಂಧಿ ಗ್ಲಾಸ್ ಹೌಸ್ ಪಕ್ಕದಲ್ಲಿ ಪಾಲಿಕೆ ನಿರ್ಮಿಸಿರುವ ಬೃಹತ್ ಬಾವಿಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನೆ ನಡೆಯಿತು.

ಪೊಲೀಸ್ ಇಲಾಖೆಯಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಆರ್​ಎಎಫ್ ಸೇರಿದಂತೆ 3 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ವೃತ್ತಗಳಲ್ಲಿ ಪೊಲೀಸ್, ಜಿಲ್ಲಾಡಳಿತ, ಆರೋಗ್ಯ, ಕಿಮ್ಸ್ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಸುರಕ್ಷಿತ ತಾಣಗಳನ್ನು ನಿರ್ಮಿಸಲಾಗಿತ್ತು.

ಪೊಲೀಸ್ ಕಮಿಷನರ್‌ಗೆ ಯುವಕರ ಮೆಚ್ಚುಗೆ: ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಗಣೇಶ ಮೂರ್ತಿ ಮೆರವಣಿಗೆ ಬಂದೋಬಸ್ತ್‌ನ ಉಸ್ತುವಾರಿ ವಹಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಖುದ್ದು ತಾವೇ ಮೆರವಣಿಗೆ ಸ್ಥಳದಲ್ಲಿ ಬೀಡುಬಿಟ್ಟು ಭದ್ರತೆಯನ್ನು ಅವಲೋಕಿಸಿದರು. ಕಮಿಷನರ್ ಅವರನ್ನು ‌ಕಂಡ ಯುವಕರು ಅವರ ಕೈ ಕುಲುಕಿದರೆ, ಇನ್ನು ಕೆಲವರು ನಮಸ್ಕರಿಸುವ ದೃಶ್ಯಗಳು ಸಾಮಾನ್ಯವಾಗಿದ್ದವು.

ಇದನ್ನೂ ಓದಿ: ಶಿವಮೊಗ್ಗ: ಹಿಂದೂ ಮಹಾಮಂಡಳ ಗಣಪನ ಅದ್ಧೂರಿ ಮೆರವಣಿಗೆ, ಪಟಾಕಿ ಸಿಡಿಸಿ ಸಂಭ್ರಮ - Shimogga ganesh procession

Last Updated : Sep 18, 2024, 1:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.