ETV Bharat / state

ಡಿಸಿಇಟಿ-24: ಇಂದಿನಿಂದ ಕ್ಯಾಶುಯಲ್ ಸುತ್ತು ಆರಂಭ - DCET 24 - DCET 24

ಡಿಸಿಇಟಿ-24 ಕ್ಯಾಶುಯಲ್ ಸುತ್ತು ಇಂದಿನಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

CASUAL ROUND STARTS  KARNATAKA EXAMINATION AUTHORITY  BENGALURU
ಕೆಇಎ (ETV Bharat)
author img

By ETV Bharat Karnataka Team

Published : Sep 18, 2024, 11:25 AM IST

ಬೆಂಗಳೂರು: ಡಿಸಿಇಟಿ-24 ಕ್ಯಾಶುಯಲ್ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಇಂದಿನಿಂದ ಆರಂಭವಾಗಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.

ಸೀಟ್​ಗಳ ಲಭ್ಯತೆಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಕೆಇಎ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುತ್ತದೆ. ಸಂಜೆ 4ಗಂಟೆಯಿಂದ ಸೆ.20ರವರೆಗೆ ಹೊಸದಾಗಿ ಆಪ್ಷನ್ ದಾಖಲಿಸಬಹುದು. ಸೆ.21ರಂದು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುವುದು. ಸೆ.23ರಿಂದ 25ರವರೆಗೆ ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸೆ.25ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜುಲೈನಲ್ಲಿ ನಡೆದ ಮೇಕ್ ಅಪ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಡಿಸಿಇಟಿ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳ ರ‍್ಯಾಂಕ್ ವೆಬ್​ಸೈಟ್​ನಲ್ಲಿ ಪ್ರಕಟಿಸಿ, ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿರುವ ಅಭ್ಯರ್ಥಿಗಳು ಕೂಡ ಹೊಸದಾಗಿ ಆಪ್ಷನ್ ದಾಖಲಿಸಬಹುದು. ಅಲ್ಲದೆ, ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಪಡೆಯದ ಮತ್ತು ಹಂಚಿಕೆಯಾದ ಸೀಟಿಗೆ ಶುಲ್ಕ ಪಾವತಿಸದೇ ಇರುವ ಅಭ್ಯರ್ಥಿಗಳೂ ಈ ಸುತ್ತಿನಲ್ಲಿ ಹೊಸದಾಗಿ ಆಪ್ಷನ್​ ದಾಖಲಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಅದ್ಧೂರಿಯಾಗಿ ನೆರವೇರಿದ ಕಿಚಡಿ ಜಾತ್ರೆ, ಜಟಾ ಪ್ರದರ್ಶನ ಜಾತ್ರೆ - Fair In bagalkote

ETV Bharat Logo

Copyright © 2024 Ushodaya Enterprises Pvt. Ltd., All Rights Reserved.