ನವದೆಹಲಿ: ಪುರುಷರಿಗೆ ಹೋಲಿಕೆ ಮಾಡಿದಾಗ ಹೃದಯಾಘಾತದಿಂದ ಚೇತರಿಕೆ ಕಂಡ ಮಹಿಳೆಯರಲ್ಲಿ ಖಿನ್ನತೆ ಮತ್ತು ಆತಂಕದ ಅಪಾಯದ ದರ ಹೆಚ್ಚಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ನೆದರ್ಲ್ಯಾಂಡ್ನ ಆಮಸ್ಟರ್ಡ್ಯಾಮ್ ಯುನಿವರ್ಸಿಟಿ ಮೆಡಿಕಲ್ ಸೆಂಟರ್ ಸಂಶೋಧಕರ ಗುಂಪು ಈ ಕುರಿತು ಅಧ್ಯಯನ ಮಾಡಿದೆ. ಈ ಸಂಬಂಧ ಐದು ವರ್ಷಗಳ ಕಾಲ 1,250 ಜನರ ಸಾಮಾಜಿಕ ಆರ್ಥಿಕ ದತ್ತಾಂಶವನ್ನು ಆಯ್ಕೆ ಮಾಡಿ ಅಧ್ಯಯನ ನಡೆಸಿದೆ. ಇನ್ನು ಅಧ್ಯಯನದಲ್ಲಿ ಭಾಗಿಯಾದವರ ಸರಾಸರಿ ವಯಸ್ಸು 53 ಆಗಿದೆ. ಇವರೆಲ್ಲಾ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಬಳಿಕ ಚೇತರಿಕೆ ಕಂಡವರಾಗಿದ್ದಾರೆ.
ಹೃದಯಾಘಾತದ ಬಳಿಕ ಅವರ ಐದು ವರ್ಷಗಳ ಬಳಿಕ ಅವರಲ್ಲಿನ ಈ ಪರಿಸ್ಥಿತಿಗೆ ಕಾರಣವಾಗುವ ಬೇರೆ ಅಂಶವನ್ನು ಕೂಡ ಗಮನಿಸಲಾಗಿದೆ. ಈ ಅಧ್ಯಯನವನ್ನು 'ಜರ್ನಲ್ ಸರ್ಕ್ಯೂಲರ್: ಕಾರ್ಡಿಯೊವಸ್ಕ್ಯೂಲರ್ ಕ್ವಾಲಿಟಿ ಅಂಡ್ ಔಟ್ಕಂ'ನಲ್ಲಿ ಪ್ರಕಟಿಸಲಾಗಿದೆ.
ಹೃದಯಾಘಾತದಿಂದ ಚೇತರಿಕೆಯಾದ ಮೊದಲ ವರ್ಷದಲ್ಲಿ ಮಹಿಳೆಯರು ಖಿನ್ನತೆ ವಿರುದ್ಧ ಔಷಧ ಪಡೆಯುತ್ತಿರುವುದು ಕಂಡು ಬಂದಿದೆ. ಇದು ಪುರುಷರಲ್ಲಿ ಕಂಡಿಲ್ಲ. ಈ ಔಷಧಗಳನ್ನು ಅವರು ಐದು ವರ್ಷಗಳ ಕಾಲ ಮುಂದುವರೆಸಿರುವುದು ಕಾಣ ಬಹುದಾಗಿದೆ ಎಂದು ಅಧ್ಯಯನದ ಲೇಖಕ ರೊಬಿನ್ ಸ್ಮಿತ್ಸ್ ತಿಳಿಸಿದ್ದಾರೆ.