ICMR's 25 Health Tips: ಹೊಸ ವರ್ಷದಲ್ಲಿ ಪ್ರತಿಯೊಬ್ಬರೂ ಕೂಡ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (NIN) 25 ಆರೋಗ್ಯ ಸಲಹೆಗಳ ಸಮಗ್ರ ಮಾರ್ಗದರ್ಶಿಯನ್ನು ಬಿಡುಗಡೆಗೊಳಿಸಿದೆ. ಈ ಟಿಪ್ಸ್ಗಳನ್ನು ಪಾಲಿಸುವ ಮೂಲಕ ನೀವು ದೈಹಿಕ ಹಾಗೂ ಮಾನಸಿಕ ಯೋಗಕ್ಷೇಮದ ಜೊತೆಗೆ ಜೀವಿತಾವಧಿಯನ್ನೂ ಹೆಚ್ಚಿಸಬಹುದಾಗಿದೆ.
ಐಸಿಎಂಆರ್ & ಎನ್ಐಎನ್ ನೀಡಿದ ಹೆಲ್ತ್ ಟಿಪ್ಸ್:
1. ಆಹಾರ ಪದ್ಧತಿ:
- ವೈವಿಧ್ಯಮಯ ಆಹಾರಕ್ರಮ ಅನುಸರಿಸಿ: ಎಲ್ಲಾ ಅಗತ್ಯ ಪೋಷಕಾಂಶಗಳ ಸೇವನೆ ಮಾಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಆಹಾರಕ್ರಮದಲ್ಲಿ ವೈವಿಧ್ಯಮಯ ಆಗಿರಿಸಬೇಕಾಗುತ್ತದೆ.
- ದೇಹವನ್ನು ಹೈಡ್ರೇಟೆಡ್ ಆಗಿರಿಸಿ: ಪ್ರತಿದಿನ ಕನಿಷ್ಠ 2 ಲೀಟರ್ ನೀರನ್ನು ಕುಡಿಯಬೇಕು.
- ಋತುಮಾನಗಳಲ್ಲಿ ಲಭಿಸುವ ಆಹಾರಗಳನ್ನು ಆಯ್ಕೆ ಮಾಡಿ: ಋತುಮಾನಗಳಲ್ಲಿ ಲಭಿಸುವ ಅಥವಾ ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳು ಹೆಚ್ಚು ಪೌಷ್ಟಿಕ ಹಾಗೂ ನೈಸರ್ಗಿಕವಾಗಿವೆ. ಇವುಗಳನ್ನು ಮಿಸ್ ಮಾಡದೇ ಸೇವಿಸಿ.
- ಕೆಫೀನ್ ಮಿತಿವಾಗಿ ಸೇವಿಸಿ: ಕೆಫೀನ್ ಹೆಚ್ಚು ಸೇವಿಸುವ ಬದಲು ಪೌಷ್ಟಿಕಾಂಶವಿರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.
- ನೇರವಾಗಿ ಪ್ರೋಟೀನ್ ಸೇವಿಸಿ: ನಿಮ್ಮ ಊಟದಲ್ಲಿ ಹೆಚ್ಚಿನ ಪ್ರೋಟೀನ್ ಹಾಗೂ ಕಡಿಮೆ ಕೊಬ್ಬಿನ ನೇರ ಮಾಂಸವನ್ನು ಆಯ್ಕೆ ಮಾಡಿ.
- ಉಪ್ಪಿನ ಬಳಕೆ ಕಡಿಮೆ ಮಾಡಿ: ನಿಮ್ಮ ಆಹಾರದ ಸುವಾಸನೆ ಹೆಚ್ಚಿಸಲು ಲವಂಗ, ದಾಲ್ಚಿನ್ನಿ ಹಾಗೂ ಕಾಳುಮೆಣಸಿನಂತಹ ಮಸಾಲೆಗಳನ್ನು ಬಳಕೆ ಮಾಡಿ.
- ಸಕ್ಕರೆ ಸೇವನೆ ಕಡಿಮೆ ಮಾಡಿ: ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕ್ಕರೆಯನ್ನು ಸೇವಿಸುವುದನ್ನು ಮಿತಗೊಳಿಸುವುದು ಮುಖ್ಯ.
- ಅತಿಯಾಗಿ ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಿ: ನೈಸರ್ಗಿಕ, ಕನಿಷ್ಠ ಸಂಸ್ಕರಿಸಿದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.
- ವಿವಿಧ ಎಣ್ಣೆಗಳನ್ನು ಬಳಕೆ ಮಾಡಿ: ಸಮತೋಲಿತ ಪೋಷಣೆಗಾಗಿ ವಿವಿಧ ರೀತಿಯ ಎಣ್ಣೆಗಳನ್ನು ಮಿತವಾಗಿ ಬಳಕೆ ಮಾಡಿ.
- ಜ್ಯೂಸ್ಗಳಿಗಿಂತ ತಾಜಾ ಹಣ್ಣುಗಳು ಸೇವಿಸಿ: ಜ್ಯೂಸ್ಗಳನ್ನು ಸೇವಿಸುವ ಬದಲು ಸಂಪೂರ್ಣ ಹಣ್ಣುಗಳನ್ನು ಸೇವಿಸಬಹುದು. ಇವುಗಳಲ್ಲಿ ಉತ್ತಮವಾದ ಫೈಬರ್ ಹಾಗೂ ಪೋಷಕಾಂಶಗಳು ಇರುತ್ತವೆ.
2. ಆಹಾರ ತಯಾರಿಕೆ & ನೈರ್ಮಲ್ಯ
- ಆಹಾರದ ಉತ್ಪನ್ನಗಳ ಮೇಲೆ ಲೇಬಲ್ ಓದಿ: ಆಹಾರದ ಉತ್ಪನ್ನಗಳ ಮೇಲೆ ಲೇಬಲ್ನಲ್ಲಿರುವ ಅಂಶಗಳನ್ನು ಮಿಸ್ ಮಾಡದೇ ಓದಬೇಕಾಗುತ್ತದೆ. ಪ್ಯಾಕ್ ಮಾಡಿದ ಆಹಾರಗಳ ಪೌಷ್ಟಿಕಾಂಶದ ಅಂಶವನ್ನು ಅರ್ಥಮಾಡಿಕೊಳ್ಳಿ.
- ಕಚ್ಚಾ ಧಾನ್ಯಗಳನ್ನು ಸೇವಿಸಿ: ಪಾಲಿಶ್ ಮಾಡದ ಧಾನ್ಯಗಳು ಸಂಸ್ಕರಿಸಿದ ಆಹಾರಗಳಿಗಿಂತ ಆರೋಗ್ಯಕರವಾಗಿವೆ.
- ಮನೆಯಲ್ಲಿ ಬೇಯಿಸಿದ ಊಟಕ್ಕೆ ಆದ್ಯತೆ ಕೊಡಿ: ಮನೆಯಿಂದ ಹೊರಗೆ ದೊರೆಯುವ ಆಹಾರಗಳನ್ನು ತಿನ್ನುವುದನ್ನು ಆದಷ್ಟು ಕಡಿಮೆ ಮಾಡಿ.
- ಕಚ್ಚಾ ಮತ್ತು ಬೇಯಿಸಿದ ಆಹಾರಗಳನ್ನು ಪ್ರತ್ಯೇಕಿಸಿ: ಉತ್ತಮ ಆರೋಗ್ಯದ ಸುರಕ್ಷತೆಗಾಗಿ ಕಚ್ಚಾ ಮತ್ತು ಬೇಯಿಸಿದ ಆಹಾರಗಳನ್ನು ಪ್ರತ್ಯೇಕಿಸಬೇಕು.
- ಹುದುಗಿಸಿದ ಆಹಾರಗಳನ್ನು ಆಯ್ಕೆ ಮಾಡಿ: ಹುದುಗಿಸಿದ ಆಹಾರಗಳನ್ನು ಆರಿಸಿಕೊಳ್ಳಿ. ಇವು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
3. ಲೈಫ್ಸ್ಟೈಲ್ ಟಿಪ್ಸ್ :
- ವೇಳಾಪಟ್ಟಿ ತಕ್ಕಂತೆ ಆಹಾರ ಸೇವಿಸಿ: ಉತ್ತಮ ಜೀರ್ಣಕ್ರಿಯೆಗಾಗಿ ಉಪಹಾರ, ಊಟವನ್ನು ನಿಗದಿತ ಸಮಯದಲ್ಲಿ ಮಾಡಬೇಕು.
- ನಿಯಮಿತವಾಗಿ ವ್ಯಾಯಾಮ ಮಾಡಿ: ದೈನಂದಿನ ದೈಹಿಕ ಚಟುವಟಿಕೆಯು ನಿಮ್ಮನ್ನು ಸದೃಢವಾಗಿ ಮತ್ತು ಶಕ್ತಿಯುತವಾಗಿರಿಸುತ್ತದೆ.
- ವಿರಾಮಗಳನ್ನು ತೆಗೆದುಕೊಳ್ಳಿ: ದೀರ್ಘಕಾಲದವರೆಗೆ ಕುಳಿತುಕೊಳ್ಳುವುದನ್ನು ತಪ್ಪಿಸಬೇಕು. ನಿಮ್ಮ ದಿನಚರಿಯಲ್ಲಿ ಆಗಾಗ ಎದ್ದು ಓಡಾಡ ಬೇಕಾಗುತ್ತದೆ.
- ಮೆಟ್ಟಿಲುಗಳನ್ನು ಬಳಕೆ ಮಾಡಿ: ಮೆಟ್ಟಿಲು ಹತ್ತುವಂತಹ ಸಣ್ಣ ಚಟುವಟಿಕೆಗಳು ಫಿಟ್‌ನೆಸ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
- ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ: ಒಟ್ಟಾರೆ ಆರೋಗ್ಯಕ್ಕಾಗಿ ನೈಸರ್ಗಿಕವಾಗಿ ದೊರೆಯುವ ವಿಟಮಿನ್ ಡಿ ಅನ್ನು ಪಡೆಯಲು ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಬೇಕಾಗುತ್ತದೆ.
- ಸ್ಕ್ರೀನ್ ವೀಕ್ಷಿಸುವ ಸಮಯ ಕಡಿಮೆ ಮಾಡಿ: ಆದಷ್ಟು ಸ್ಕ್ರೀನ್ ವೀಕ್ಷಿಸುವ ಸಮಯ ಕಡಿಮೆ ಮಾಡಿಬೇಕು. ಸ್ವ-ಆರೈಕೆಯ ಮೇಲೆ ಕೇಂದ್ರೀಕರಿಸಲು ಹೆಚ್ಚಿನ ಸಮಯವನ್ನು ಕಳೆಯಿರಿ.
- ಧ್ಯಾನ ಮಾಡಿ: ದೈನಂದಿನ ಧ್ಯಾನವು ಮಾನಸಿಕ ಶಾಂತಿ ಹಾಗೂ ಗಮನಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
4. ಸಾಮಾಜಿಕ ಹಾಗೂ ಪರಿಸರ ಅಭ್ಯಾಸಗಳೇನು?
- ಆರೋಗ್ಯಕರವಾದ ವಸ್ತುಗಳನ್ನು ಉಡುಗೊರೆಯಾಗಿ ನೀಡಿ: ಉಡುಗೊರೆಗಳನ್ನು ನೀಡುವಾಗ ಸಿಹಿತಿಂಡಿಗಳ ಬದಲು ಆರೋಗ್ಯಕರವಾದ ಪರ್ಯಾಯ ವಸ್ತುಗಳನ್ನು ನೀಡಿ.
- ನೈರ್ಮಲ್ಯ ಕಾಪಾಡಿ: ವೈಯಕ್ತಿಕ ಶುಚಿತ್ವ ಮತ್ತು ಸ್ವಚ್ಛ ಪರಿಸರವು ತುಂಬಾ ನಿರ್ಣಾಯಕ ಪಾತ್ರವಹಿಸುತ್ತದೆ.
- ಆಹಾರ ಪದ್ಧತಿಗಳ ಬಗ್ಗೆ ಜಾಗರೂಕರಾಗಿರಿ: ಭಾವನಾತ್ಮಕವಾಗಿ ತಿನ್ನುವುದನ್ನು ತಪ್ಪಿಸಬೇಕು. ನಿಮ್ಮ ಆಹಾರ ಮನಸ್ಸಿನಿಂದ ಆನಂದಿಸಬೇಕಾಗುತ್ತದೆ.
ಈ ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಸಮತೋಲಿತ, ಆರೋಗ್ಯಕರ ಜೀವನಶೈಲಿಯನ್ನು ಖಚಿತಪಡಿಸಿಕೊಳ್ಳಬಹುದು. ಸಣ್ಣದಾಗಿ ಪ್ರಾರಂಭಿಸಿ ಹಾಗೂ ಆರೋಗ್ಯಕರ, ಹೆಚ್ಚು ತೃಪ್ತಿಕರ ಜೀವನಕ್ಕಾಗಿ ಈ ಅಭ್ಯಾಸಗಳನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಐಸಿಎಂಆರ್ ಹಾಗೂ ಎನ್ಐಎನ್ ಸಲಹೆ ನೀಡಿದೆ.
ಓದುಗರಿಗೆ ಪ್ರಮುಖ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.