ನವದೆಹಲಿ: ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಲೂಪಸ್ ಎಂಬ ಆಟೋಇಮ್ಯೂನ್ ರೋಗಕ್ಕೆ ಪ್ರಮುಖ ಕಾರಣ ಈಸ್ಟೋಜನ್ ಮತ್ತು ಎಕ್ಸ್ ಕ್ರೊಮೊಜೋನ್ ಆಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ದೇಹದ ಪ್ರತಿ ರಕ್ಷಣಾ ವ್ಯವಸ್ಥೆ ಮೇಲೆ ಪ್ರಭಾವ ಬೀರುವ ಈ ರೋಗ ಮಹಿಳೆಯರನ್ನು ಹೆಚ್ಚು ದುರ್ಬಲವಾಗಿಸುತ್ತದೆ.
ಜೀವನ ಬದಲಾಯಿಸುವ ಆಟೋ ಇಮ್ಯೂನ್ ರೋಗ ಲೂಪಸ್ ಕುರಿತು ಅರಿವು ಮೂಡಿಸುವ ಕುರಿತು ಮೇ 10ರಂದು ವಿಶ್ವ ಲೂಪಸ್ ದಿನವನ್ನು ಆಚರಣೆ ಮಾಡಲಾಗುವುದು. ಆಂಟಿಬಾಡೀಸ್ ಎಂಬ ಕೆಲವು ಅಂಶಗಳನ್ನು ಉತ್ಪಾದಿಸುವ ಮೂಲಕ ದೇಹವು ಅದರ ಅಂಗಗಳ ಮೇಲೆ ದಾಳಿ ಮಾಡುತ್ತದೆ.
ಈ ರೋಗದ ಪ್ರಮುಖ ಲಕ್ಷಣಗಳು ಎಂದರೆ ಜ್ವರ, ಆಯಾಸ, ತ್ವಚೆಯಲ್ಲಿ ದದ್ದು, ಸಣ್ಣ ಮತ್ತು ದೊಡ್ಡ ಕೀಲು ನೋವು, ಉಸಿರಾಟ ಸಮಸ್ಯೆ, ಕೆಲವೊಮ್ಮೆ ನುಂಗಲು ಕಷ್ಟ ಮತ್ತು ಎದೆ ನೋವು ಆಗಿದೆ.
ಈ ಪರಿಸ್ಥಿತಿಯು ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್ (ಎಸ್ಎಲ್ಇ) ಎಂದು ಕರೆಯಲಾಗುವುದು. ಇದು ಜಗತ್ತಿನಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ ಲಕ್ಷದಲ್ಲಿ ಎಸ್ಎಲ್ಇ 3.2 ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ, ಜಾಗತಿಕವಾಗಿ ಸಂತಾನೋತ್ಪತ್ತಿ ವಯಸ್ಸಿನ ವ್ಯಾಪ್ತಿಯಲ್ಲಿರುವ ಮಹಿಳೆಯರು ಎಸ್ಎಲ್ಇಯ ಶೇ 90ರಷ್ಟು ಪ್ರಕರಣಗಳು ಕಂಡು ಬಂದಿವೆ.
ಮಹಿಳೆಯರಲ್ಲಿ ಅನುವಂಶಿಕತೆಯ ಲೈಂಗಿಕ ಹಾರ್ಮೋನುಗಳು ಮತ್ತು ಈಸ್ಟ್ರೊಜೆನ್ ನಿರ್ದಿಷ್ಟವಾಗಿ ಲೂಪಸ್ ಬೆಳವಣಿಗೆಗೆ ಹೆಚ್ಚು ಕೊಡುಗೆ ನೀಡುತ್ತದೆ ಎಂದು ಗುರುಗ್ರಾಮದ ಪರಸ್ ಹೆಲ್ತ್ನ ಹಿರಿಯ ವೈದ್ಯ ಡಾ ಅನು ದಬೆರ್ ತಿಳಿಸಿದ್ದಾರೆ. ಮಹಿಳೆಯರಲ್ಲಿನ ಎಕ್ಸ್ ಕ್ರೊಮಾಜೋನ್ ಮತ್ತು ಲೂಪಸ್ ಅಭಿವೃದ್ಧಿ ನಡುವಿನ ಸಂಬಂಧವನ್ನು ಅಧ್ಯಯನದಲ್ಲಿ ಈ ರೋಗದ ಬಗ್ಗೆ ಹೆಚ್ಚು ಗಮನಿಸಲಾಗಿದೆ. ಮಹಿಳೆಯರಲ್ಲಿರುವ ಎರಡು ಸಕ್ರಿಯ ಎಕ್ಸ್ ಕ್ರೊಮಾಜೋನ್ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ನಿಯಂತ್ರಿಸಲು ಪ್ರತಿ ಅಭಿವೃದ್ಧಿ ಕೋಶದಲ್ಲಿ ಒಂದು ಎಕ್ಸ್ ಕ್ರೊಮಾಜೋನ್ ಅನ್ನು ನಿಷ್ಕ್ರಿಯಗೊಳ್ಳುತ್ತದೆ.
ಎಕ್ಸ್-ಕ್ರೋಮಾಸೋಮ್ ನಿಷ್ಕ್ರಿಯಗೊಳಿಸುವಿಕೆ ಪ್ರಕ್ರಿಯೆಯು ಪ್ರತಿರಕ್ಷಣಾ ವ್ಯವಸ್ಥೆಯು ಬೆದರಿಕೆ ಪರಿಣಾಮ ಹೊಂದಿದೆ. ಈ ನಿಷ್ಕ್ರಿಯತೆಯು ಎಷ್ಟು ಪರಿಣಾಮಕಾರಿಯಾಗಿ ಸಂಭವಿಸುತ್ತದೆ ಎಂಬುದರ ವ್ಯತ್ಯಾಸಗಳು ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ಲೂಪಸ್‌ನಂತಹ ಸ್ವಯಂ ನಿರೋಧಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಈ ಲೂಪಸ್ ತ್ವಚೆ, ಕಿಡ್ನಿ, ಹೃದಯ, ಮಿದುಳು, ಕೀಲು, ಶ್ವಾಸಕೋಶ ಮತ್ತು ರಕ್ತನಾಳದ ಮೆಲೆ ಪರಿಣಾಮ ಬೀರುತ್ತದೆ. ಈ ಲೂಪಸ್ ರೋಗಕ್ಕೆ ಯಾವುದೆ ಲಸಿಕೆ ಇಲ್ಲ. ಇದು ಆಟೋಇಮ್ಯೂನ್ ಪರಿಸ್ಥಿತಿಯಾಗಿದ್ದು, ಬಹುತೇಕ ಸಮಯದಲ್ಲಿ ಈ ರೋಗ ಅನುವಂಶಿಕತೆ ಕಾರಣವಾಗುತ್ತದೆ. ಆರಂಭಿಕ ಹಂತದಲ್ಲಿ ಇದರ ಪತ್ತೆಗೆ ಯಾವುದೇ ಲಕ್ಷಣಗಳು ಕಾಡುವುದಿಲ್ಲ. ಕೆಲವು ಪರಿಸ್ಥಿತಿಯಲ್ಲಿ ಆರಂಭಿಕ ಚಿಹ್ನೆ ಮೂಲಕ ಪತ್ತೆ ಮಾಡಬಹುದು ಎಂದು ಡಾ ಪ್ರಸಾದ್ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಅಸ್ಥಿಸಂಧಿವಾತ ರೋಗಿಗಳಲ್ಲಿ ಉರಿಯೂತವಿಲ್ಲದೆ ಕಾಡುವ ನೋವಿಗೆ ಕಾರಣ ಪತ್ತೆ ಮಾಡಿದ ಸಂಶೋಧಕರು