ETV Bharat / bharat

ತಿರುಪತಿ ಕಾಲ್ತುಳಿತ: ಇಂದು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಭೇಟಿಯಾಗಲಿರುವ ಆಂಧ್ರ ಸಿಎಂ - TIRUPATI STAMPEDE

ತಿರುಪತಿ ಕಾಲ್ತುಳಿತ ಪ್ರಕರಣ: ಇಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಲಿದ್ದಾರೆ.

CM Chandrababu Naidu Meet Tirupati Stampede Injured In Hospitals
ತಿರುಪತಿ ಕಾಲ್ತುಳಿತ ಪ್ರಕರಣ (ANI)
author img

By ETV Bharat Karnataka Team

Published : Jan 9, 2025, 11:12 AM IST

ಅಮರಾವತಿ(ಆಂಧ್ರ ಪ್ರದೇಶ): ತಿರುಪತಿಯಲ್ಲಿ ನಿನ್ನೆ ಕಾಲ್ತುಳಿತಕ್ಕೊಳಗಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜನರನ್ನು ಇಂದು ಆಂಧ್ರ ಪ್ರದೇಶ ಸಿಎಂ ಎನ್​.ಚಂದ್ರಬಾಬು ನಾಯ್ಡು ಭೇಟಿಯಾಗಲಿದ್ದಾರೆ.

ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ತಿರುಮಲದಲ್ಲಿನ ವೆಂಕಟೇಶ್ವರ ಸ್ವಾಮಿ ದರ್ಶನದ ಟೋಕನ್​ ಟಿಕೆಟ್​ ಪಡೆಯುವಾಗ ಉಂಟಾದ ಕಾಲ್ತುಳಿತದಲ್ಲಿ 6 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಾಳಗಳನ್ನು ಎಸ್​ವಿಆರ್​ ರುಯಾ ಸರ್ಕಾರಿ ಜನರಲ್​ ಆಸ್ಪತ್ರೆ ಮತ್ತು ಎಸ್‌ವಿಐಎಂಎಸ್​ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ಘಟನೆಯ ಕುರಿತು ಸಿಎಂ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತೆಲಗು ದೇಶಂ ಪಕ್ಷದ(ಟಿಡಿಪಿ) ವಕ್ತಾರರು ತಿಳಿಸಿದ್ದಾರೆ.

ಟಿಡಿಪಿ ರಾಷ್ಟ್ರೀಯ ವಕ್ತಾರ ಪ್ರೇಮ್​ ಕುಮಾರ್​ ಜೈನ್ ಮಾತನಾಡಿ​, "ಈ ಘಟನೆ ದುರದೃಷ್ಟಕರ. ಇಂಥ ಘಟನೆಗಳು ಮರುಕಳಿಸದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಿಎಂ ಅಧಿಕಾರಿಗಳ ಸಭೆ ಕರೆದಿದ್ದಾರೆ. ಗಾಯಾಳುಗಳ ಚಿಕಿತ್ಸೆಗೆ ನಮ್ಮ ಸರ್ಕಾರ ಎಲ್ಲಾ ಅಗತ್ಯ ಸಹಾಯ ನೀಡಲಿದೆ" ಎಂದರು.

ನಿನ್ನೆ ತಿರುಪತಿ ಜಿಲ್ಲಾಧಿಕಾರಿ ಎಸ್.ವೆಂಕಟೇಶ್ವರ ಪ್ರತಿಕ್ರಿಯಿಸಿ, "ತಮಿಳುನಾಡಿದ ಸಲೆಮ್​ ಎಂಬ ವ್ಯಕ್ತಿ ಹಾಗೂ ಆಂಧ್ರದ ನರ್ಸಿಪಟ್ನಂನ ಐವರು ಮಹಿಳೆಯರು ಸೇರಿ ಆರು ಮಂದಿ ಕಾಲ್ತುಲಿತದಲ್ಲಿ ಸಾವನ್ನಪ್ಪಿದ್ದಾರೆ. ತಿರುಮಲದ ಎಂಜಿಎಂ ಶಾಲೆಯ ಬಳಿ ಬೈರಾಗಿ ಪಟ್ಟೆಡಾದಲ್ಲಿ ಘಟನೆ ನಡೆದಿದೆ" ಎಂದು ತಿಳಿಸಿದ್ದರು.

ಸಿಎಂ ಚಂದ್ರಬಾಬು ನಾಯ್ಡು ವಿಷಾದ ವ್ಯಕ್ತಪಡಿಸಿ, "ತಿರುಪತಿಯ ವಿಷ್ಣು ನಿವಾಸದ ಬಳಿ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್​ ಪಡೆಯುವಾಗ ಉಂಟಾದ ನೂಕುನುಗ್ಗಲಿನಲ್ಲಿ ಕೆಲವು ಭಕ್ತರು ಸಾವನ್ನಪ್ಪಿರುವ ಸುದ್ದಿ ನನಗೆ ದುಃಖ ತಂದಿದೆ" ಎಂದು ಬೇಸರ ವ್ಯಕ್ತಪಡಿಸಿದ್ದರು.

ತೆಲಂಗಾಣ ಸಿಎಂ ಎ.ರೇವಂತ್​ ರೆಡ್ಡಿ ಕೂಡ ಆಘಾತ ವ್ಯಕ್ತಪಡಿಸಿದ್ದು, ಭಕ್ತರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್​ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್​ ಗಾಂಧಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಟಿಕೆಟ್​ಗಾಗಿ ನೂಕುನುಗ್ಗಲು; ಕಾಲ್ತುಳಿತದಲ್ಲಿ ಐವರು ಮಹಿಳೆಯರು ಸೇರಿ 6 ಭಕ್ತರು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.