ETV Bharat / health

ಈ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆ- ನಿಮಗಿದು ತಿಳಿದಿದೆಯೇ?: ತಜ್ಞರು ಸಲಹೆ ಹೀಗಿದೆ ನೋಡಿ - CANCER PREVENTION FOODS

ಆಹಾರ ಹಾಗೂ ಜೀವನಶೈಲಿಯ ಬದಲಾವಣೆಯಿಂದ ಕ್ಯಾನ್ಸರ್ ಉಂಟಾಗುತ್ತದೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ. ತಜ್ಞರು ತಿಳಿಸುವಂತಹ ಈ ಆಹಾರ ಸೇವಿಸುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆ ಇರುತ್ತದೆ. ಈ ಆಹಾರಗಳು ಯಾವುವು ಎಂಬುದನ್ನು ನೋಡೋಣ.

CANCER FIGHTING FOODS LIST  WHAT ARE THE FOODS TO AVOID CANCER  BEST DIET TO AVOID CANCER  GOOD DIET TO PREVENT CANCER
ಸಾಂದರ್ಭಿಕ ಚಿತ್ರ (Getty images)
author img

By ETV Bharat Health Team

Published : 18 hours ago

Cancer Prevention Foods: ಪ್ರಸ್ತುತ ಕ್ಯಾನ್ಸರ್ ರೋಗವು ಬಹಳ ವೇಗವಾಗಿ ಹರಡುತ್ತದೆ. ಇದಕ್ಕೆ ಕಾರಣ ನಾವು ತಿನ್ನುವ ಆಹಾರ ಮತ್ತು ನಾವು ಅನುಸರಿಸುತ್ತಿರುವ ಜೀವನಶೈಲಿ ಬದಲಾವಣೆಗಳು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಈ ರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಸಾವಿನ ಅಪಾಯವನ್ನು ತಪ್ಪಿಸಬಹುದು. ಈ ಹಿನ್ನೆಲೆಯಲ್ಲಿ ಉತ್ತಮ ಜೀವನಶೈಲಿ ಮತ್ತು ಕೆಲವು ಆಹಾರ ಸೇವನೆಯಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಬ್ರೊಕೊಲಿ: ಇದು ಪ್ರಾಸ್ಟೇಟ್, ಕೊಲೊನ್ ಮತ್ತು ಮೂತ್ರಕೋಶದ ಕ್ಯಾನ್ಸರ್ ಅನ್ನು ತಡೆಯುತ್ತದೆ. ಇದರಲ್ಲಿರುವ ಸಲ್ಫೊರಾಫೇನ್ ದೇಹದಲ್ಲಿನ ರಕ್ಷಣಾತ್ಮಕ ಕಿಣ್ವಗಳನ್ನು ಉತ್ತೇಜಿಸುತ್ತದೆ. ವಿಷಕಾರಿ ಕಲ್ಮಶಗಳನ್ನು ತೆಗೆದುಹಾಕುತ್ತದೆ. ಬ್ರೊಕೋಲಿಯಲ್ಲಿ ಫೈಬರ್ ಸಮೃದ್ಧವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಕಿತ್ತಳೆ: ಇದರಲ್ಲಿರುವ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಕ್ಯಾನ್ಸರ್ ಅನ್ನು ತಡೆಯುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮತ್ತು ತೂಕವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ ತ್ವಚೆಯನ್ನು ಮೃದುವಾಗಿರಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಗ್ರೀನ್ ಟೀ: ಇದರ ಉತ್ಕರ್ಷಣ ನಿರೋಧಕಗಳು ಅನ್ನನಾಳ, ಶ್ವಾಸಕೋಶ, ಬಾಯಿ ಮತ್ತು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಅನ್ನು ತಡೆಯುತ್ತದೆ. ಇದರಲ್ಲಿರುವ ಪಾಲಿಫಿನಾಲ್‌ಗಳು ಹೊಸ ಕೋಶಗಳನ್ನು ಬದಲಾಯಿಸುತ್ತವೆ ಎಂದು ವೈದ್ಯಕೀಯ ತಜ್ಞರು ತಿಳಿಸುತ್ತಾರೆ.

ಶುಂಠಿ: ಇದು ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ. ಶುಂಠಿ ವಿಶೇಷವಾಗಿ ಅಂಡಾಶಯದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಈ ಜೀವಕೋಶಗಳು ವಿಸ್ತರಿಸುವ ಶಕ್ತಿಯನ್ನು ನಿರ್ಬಂಧಿಸುತ್ತವೆ ಎಂದು ತಜ್ಞರು ವಿವರಿಸುತ್ತಾರೆ. ಇದು 2015ರಲ್ಲಿ ಜರ್ನಲ್ ಆಫ್ ನ್ಯೂಟ್ರಿಷನ್ ಮತ್ತು ಕ್ಯಾನ್ಸರ್​​ನಲ್ಲಿ (Journal of Nutrition and Cancer) ಪ್ರಕಟವಾದ "ಜಿಂಜರ್: ಎ ನೋವೆಲ್ ಆಂಟಿ-ಕ್ಯಾನ್ಸರ್ ಏಜೆಂಟ್"ನಲ್ಲಿ (Ginger: A Novel Anti-Cancer Agent) ಬಹಿರಂಗವಾಗಿದೆ. (ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇವು ಕ್ಯಾನ್ಸರ್ ತಡೆಗಟ್ಟುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇದು ಜೀವಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಜೊತೆಗೆ ಸ್ತನ, ದೊಡ್ಡ ಕರುಳು, ಹೊಟ್ಟೆ ಮತ್ತು ಅನ್ನನಾಳದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಸೇಬು: ಪ್ರತಿದಿನವೂ ಸೇಬು ತಿಂದರೆ ವೈದ್ಯರ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಕ್ಯಾನ್ಸರ್‌ನ ವಿಷಯದಲ್ಲೂ ಇದು ನಿಜ ಎನ್ನುತ್ತಾರೆ ತಜ್ಞರು. ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಸೇಬುಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಸಂಶೋಧನೆಗಳು ವಿವರಿಸುತ್ತವೆ.

ಸಾಲ್ಮನ್ ಫಿಶ್​: ಇದರಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ವಿವಿಧ ಜೀವಸತ್ವಗಳು, ಪ್ರೋಟೀನ್ಸ್​ ಮತ್ತು ಸೆಲೆನಿಯಮ್ ಕೂಡ ಲಭ್ಯವಿರುತ್ತದೆ. ಇವೆಲ್ಲವೂ ಪಿತ್ತಜನಕಾಂಗದ ಕ್ಯಾನ್ಸರ್ ತಡೆಗಟ್ಟಲು ಹಾಗೂ ಹೃದಯಾಘಾತವನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ದಾಳಿಂಬೆ: ಆ್ಯಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಪಾಲಿಫಿನಾಲ್‌ಗಳು ಇದರಲ್ಲಿವೆ. ಈ ಪಾಲಿಫಿನಾಲ್ ಸ್ತನ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಅರಿಶಿನ: ಅರಿಶಿನವು ಕ್ಯಾನ್ಸರ್ ಅನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಇದು ವಿಶೇಷವಾಗಿ ಸ್ತನ, ಕೊಲೊನ್ ಮತ್ತು ಚರ್ಮಕ್ಕೆ ಸಂಬಂಧಿಸಿದ ಕ್ಯಾನ್ಸರ್ ಕೋಶಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಇದು ಕ್ಯಾನ್ಸರ್ ಕೋಶಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕಾಳುಮೆಣಸು: ಕಾಳುಮೆಣಸು ಮತ್ತು ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕ್ಯಾನ್ಸರ್ ಉಂಟುಮಾಡುವ ಕೋಶಗಳನ್ನು ಕೊಲ್ಲುತ್ತವೆ. ಇವುಗಳನ್ನು ತರಕಾರಿಗಳೊಂದಿಗೆ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.

ಕ್ಯಾರೆಟ್: ಕ್ಯಾರಟ್‌ನಲ್ಲಿ ಬಯೋಫ್ಲೇವನಾಯ್ಡ್‌ಗಳು ಮತ್ತು ಆಲ್ಫಾ ಕ್ಯಾರೋಟಿನ್‌ಗಳು ಹೇರಳವಾಗಿದ್ದು, ಇದು ಕ್ಯಾನ್ಸರ್ ಅನ್ನು ತಡೆಯುತ್ತದೆ. ಕ್ಯಾರೆಟ್ ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಯಾಗುತ್ತದೆ. ನಿರ್ದಿಷ್ಟವಾಗಿ ಶ್ವಾಸಕೋಶದ ಕ್ಯಾನ್ಸರ್ ತಡೆಗಟ್ಟಲು ಕ್ಯಾರೆಟ್ ಸಹಾಯ ಮಾಡುತ್ತದೆ ಎನ್ನವುದು ತಜ್ಞರ ಅಭಿಪ್ರಾಯವಾಗಿದೆ.

ದ್ರಾಕ್ಷಿ: ದ್ರಾಕ್ಷಿಯಲ್ಲಿರುವ ಎಲಾಜಿಕ್ ಆಸಿಡ್ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಎಲಾಜಿಕ್ ಆಮ್ಲವು ಉಸಿರಾಟದ ವ್ಯವಸ್ಥೆಯನ್ನು ಪರಿಸರದಲ್ಲಿನ ಹಾನಿಕಾರಕ ವಸ್ತುಗಳಿಂದ ರಕ್ಷಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://pmc.ncbi.nlm.nih.gov/articles/PMC2664283/

ಓದುಗರಿಗೆ ವಿಶೇಷ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಬಿರಿಯಾನಿ ರುಚಿಯ ಹಿಂದಿನ ರಹಸ್ಯವೇನು ಗೊತ್ತೇ? ಈ ಮಸಾಲೆ ಪದಾರ್ಥಗಳಿಂದ ಟೇಸ್ಟ್​ನೊಂದಿಗೆ ಭರ್ಜರಿ ಆರೋಗ್ಯದ ಲಾಭಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.