ETV Bharat / state

ದಾವಣಗೆರೆ ‌ನಗರ ಕಾಯ್ತಿವೆ ಆಟೋಮ್ಯಾಟಿಕ್ ಹೈ ಡೆಫಿನಿಷನ್ ಕ್ಯಾಮೆರಾಗಳು - DAVANGERE SMART CITY PROJECT

ಸ್ಮಾರ್ಟ್​ ಸಿಟಿ ಯೋಜನೆ ಅಡಿಯಲ್ಲಿ ದಾವಣಗೆರೆ ನಗರದಲ್ಲಿ ಅಳವಡಿಸಿರುವ ಕ್ಯಾಮೆರಾಗಳು ನಾನಾ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ನೆರವಾಗುತ್ತಿವೆ.

cameras
ನಗರದಲ್ಲಿ ಅಳವಡಿಸಿರುವ ಹೈ ಡೆಫಿನಿಷನ್‌ ಕ್ಯಾಮೆರಾಗಳು (ETV Bharat)
author img

By ETV Bharat Karnataka Team

Published : 12 hours ago

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ದಾವಣಗೆರೆ ನಗರದಲ್ಲಿ ಗಲ್ಲಿಗೊಂದು ಕ್ಯಾಮೆರಾ ಅಳವಡಿಸಲಾಗಿದೆ. ನಗರದೆಲ್ಲೆಡೆ ಆಟೋಮ್ಯಾಟಿಕ್ ಹೈ ಡೆಫಿನಿಷನ್ ಕ್ಯಾಮರಾಗಳಿದ್ದು, ಅಪರಾಧಿಗಳಿಗೆ ಸಿಂಹಸ್ವಪ್ನವಾಗಿವೆ. ಅಲ್ಲದೇ ಪ್ರಕರಣಗಳನ್ನು ಸುಲಭವಾಗಿ ಭೇದಿಸಲು ಇವು ಪೊಲೀಸ್ ಇಲಾಖೆಗೆ ಸಹಕಾರಿಯಾಗಿವೆ. ಇದೇ ಕ್ಯಾಮೆರಾಗಳ ಸಹಾಯದಿಂದ ಪೊಲೀಸರು ಕಠಿಣ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.

ದಾವಣಗೆರೆ ಸ್ಮಾರ್ಟ್ ಸಿಟಿ ಲಿ ಐಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ನಗರದಲ್ಲಿ ಮೊದಲ ಹಂತದಲ್ಲಿ 550 ಕ್ಯಾಮೆರಾಗಳು, ಎರಡನೇ ಹಂತದಲ್ಲಿ 140 ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಈ ಪೈಕಿ 380ಕ್ಕೂ ಹೆಚ್ಚು ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಈ ಎಲ್ಲಾ ಕ್ಯಾಮೆರಾಗಳು ಆಟೋಮ್ಯಾಟಿಕ್ ಹಾಗೂ ಹೈಡೆಫಿನಿಷನ್ ಕ್ಯಾಮೆರಾಗಳಾಗಿವೆ. ಕಿ.ಮೀ ಗಟ್ಟಲೆ ದೂರದಿಂದ ದೃಶ್ಯ, ಫೋಟೋಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಇವುಗಳಿಗಿದೆ.‌

ದಾವಣಗೆರೆ ಎಸ್​ಪಿ ಉಮಾ ಪ್ರಶಾಂತ್ ಮಾತನಾಡಿದರು. (ETV Bharat)

ಎಸ್​ಪಿ ಉಮಾ ಪ್ರಶಾಂತ್ ಪ್ರತಿಕ್ರಿಯೆ: ''ಈ ಕ್ಯಾಮೆರಾಗಳು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಿವೆ. ಇಲ್ಲಿಯತನಕ 250ಕ್ಕೂ ಹೆಚ್ಚು ಪ್ರಕರಣಗಳನ್ನು ಇದೇ ಕ್ಯಾಮೆರಾಗಳ ಸಹಾಯದಿಂದ ಪತ್ತೆ ಮಾಡಿದ್ದೇವೆ. 45 ಮಹಿಳಾ ಮತ್ತು ಮಕ್ಕಳ ಪ್ರಕರಣಗಳು, 170 ಕಾನೂನುಬಾಹಿರ ಪ್ರಕರಣಗಳು ಹಾಗೂ ನಿಯಮ ಉಲ್ಲಂಘನೆ ಸೇರಿದಂತೆ ಪ್ರಾಪರ್ಟಿ ರಿಕವರಿ, ನಕಲಿ ನಂಬರ್ ಪ್ಲೇಟ್, ಮೊಬೈಲ್ ಕಳ್ಳತನ ಹಾಗೂ 6 ಚೈನ್ ಸ್ನ್ಯಾಚಿಂಗ್ ಪ್ರಕರಣಗಳು, 4 ಕೊಲೆ ಕೇಸ್, 30ಕ್ಕೂ ಹೆಚ್ಚು ನಕಲಿ ನಂಬರ್ ಪ್ಲೇಟ್ ಹಾಗೂ ಹಿಟ್ ಆ್ಯಂಡ್ ರನ್ ಕೇಸ್​ಗಳನ್ನು ಭೇದಿಸಲು ಸಹಕಾರಿಯಾಗಿವೆ. ಸುಸಜ್ಜಿತವಾದ ಕಮಾಂಡೆಂಟ್ ರೂಮ್ ಇದೆ. ಅಲ್ಲಿ ಯಾವುದೇ ಘಟನೆ ನಡೆದಾಗ ನಮಗೆ ತಕ್ಷಣವೇ ಮಾಹಿತಿ ನೀಡುತ್ತಾರೆ. ಹೀಗಾಗಿ ನಮಗೆ ಬಹಳ ಉಪಯೋಗ ಆಗಿದೆ" ಎಂದರು.

camera
ನಗರದಲ್ಲಿ ಅಳವಡಿಸಿರುವ ಹೈ ಡೆಫಿನಿಷನ್‌ ಕ್ಯಾಮೆರಾಗಳು (ETV Bharat)

ಐಸಿಟಿ ಪ್ರಾಜೆಕ್ಟ್​ಗೆ ನಾಲ್ಕು ರಾಷ್ಟ್ರಮಟ್ಟದ ಪ್ರಶಸ್ತಿ: ಸ್ಮಾರ್ಟ್ ಸಿಟಿ ಎಂಡಿ ವೀರೇಶ್ ಕುಮಾರ್ ಮಾತನಾಡಿ, ''ಐಸಿಟಿ ಪ್ರಾಜೆಕ್ಟ್​ಗೆ ನಾಲ್ಕು ರಾಷ್ಟ್ರ ಮಟ್ಟದ ಪ್ರಶಸ್ತಿಗಳು ದಕ್ಕಿವೆ. ಇದರಲ್ಲಿ ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ಅ​ನ್ನು ನಾವು ಯಾವ ಮ್ಯಾನೇಜ್ ಮಾಡುತ್ತೇವೆ, ಅದನ್ನು ಜನರ ಬಳಕೆಗೆ ಹೇಗೆ ತೆರೆದಿಟ್ಟಿದ್ದೇವೆ ಎನ್ನುವುದಕ್ಕೋಸ್ಕರ ನೀಡಿದ್ದಾರೆ'' ಎಂದು ತಿಳಿಸಿದರು.

cameras
ನಗರದಲ್ಲಿ ಅಳವಡಿಸಿರುವ ಹೈ ಡೆಫಿನಿಷನ್‌ ಕ್ಯಾಮೆರಾಗಳು (ETV Bharat)

''ಐಸಿಟಿ ಪ್ರಾಜೆಕ್ಟ್​ನ ಮೊದಲ ಹಂತದಲ್ಲಿ 220 ಕ್ಯಾಮೆರಾಗಳು ಉಪಯೋಗವಾಗ್ತಿವೆ. ಎರಡನೇ ಹಂತದಲ್ಲಿ 200 ಕ್ಯಾಮರಾಗಳಿವೆ. ಒಟ್ಟು 380-500 ಕ್ಯಾಮೆರಾಗಳು ವರ್ಕ್ ಆಗ್ತಿವೆ. ಕ್ಯಾಮೆರಾ ವ್ಯವಸ್ಥೆಗಾಗಿ ನಮಗೆ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ದೆಹಲಿಯಲ್ಲಿ ಐ ಟ್ರಿಪಲ್ ಸಿ ಸೈಕಲ್ ಎನ್ಆಫ್ 2.0 ಅವಾರ್ಡ್, ಡಿಜಿಟಲ್ ಭಾರತ್ ಸಮಿಟ್ ವಿಶೇಷ ಐಸಿಟಿ ಪ್ರಾಜೆಕ್ಟ್ ಅವಾರ್ಡ್, ಹೈದರಾಬಾದ್​ನಲ್ಲಿ ಐಸಿಟಿ ಪ್ರಾಜೆಕ್ಟ್​ಗೆ ಅವಾರ್ಡ್, ಕೊಚ್ಚಿ ಮೆಟ್ರೋದವರು ಸ್ಮಾರ್ಟ್ ಮೊಬಿಲಿಟಿ ಪ್ರಶಸ್ತಿ ನೀಡಿದ್ದಾರೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ: ಕ್ಯಾಮರಾ ಕಂಡಲ್ಲಿ ಸ್ಲೋ..ಬಳಿಕ ಫಾಸ್ಟ್.. ಯಾಮಾರಿಸಿದ್ದ 89 ಸಾವಿರ ಸವಾರರಿಗೆ ಶಾಕ್! - traffic rules violation - TRAFFIC RULES VIOLATION

ETV Bharat Logo

Copyright © 2025 Ushodaya Enterprises Pvt. Ltd., All Rights Reserved.