ನವದೆಹಲಿ: ವೈದ್ಯಕೀಯ ಲೋಕದಲ್ಲಿ ಚಮತ್ಕಾರದ ಘಟನೆಗಳು ಈ ಹಿಂದೆಯೂ ಹಲವು ಬಾರಿ ನಡೆದಿದೆ. ಇಂಥದ್ದೇ ಘಟನೆ ಮರುಕಳಿಸಿದೆ. ಉತ್ತರ ಪ್ರದೇಶದ 33 ವರ್ಷದ ಮಹಿಳೆ ಕಳೆದ ಎಂಟು ವರ್ಷಗಳಲ್ಲಿ ಗರ್ಭಿಣಿಯಾಗಲು ವಿಫಲವಾಗಿದ್ದರು. ಇದಕ್ಕಾಗಿ 10 ಬಾರಿ ಐವಿಎಫ್ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಇವು ಯಾವುದೂ ಕೂಡ ಯಶಸ್ವಿಯಾಗಲಿಲ್ಲ. ಆದರೆ 11ನೇ ಪ್ರಯತ್ನ ಸಫಲವಾಗಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ವಾರಣಾಸಿಯಿಂದ 200 ಕಿ.ಮೀ ದೂರದ ಪ್ರದೇಶದಲ್ಲಿ ವಾಸಿಸುವ ಈ ಮಹಿಳೆ ಗರ್ಭ ಧರಿಸುವ ಸಲುವಾಗಿ ದೆಹಲಿ/ಎನ್ಸಿಆರ್ನಲ್ಲಿ ಅನೇಕ ವೈದ್ಯರು ಹಾಗು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು. 4 ರಿಂದ 6 ವಾರಗಳ ಕಾಲ ಒಂದು ಐವಿಎಫ್ನ ಚಿಕಿತ್ಸೆ ನಡೆಸಲಾಗಿದೆ. ಈ ರೀತಿಯಲ್ಲಿ 10 ಬಾರಿ ಐವಿಎಫ್ ಚಿಕಿತ್ಸೆಗೆ ಒಳಗಾಗಿದ್ದರೂ ಯಾವುದೇ ಫಲ ನೀಡಲಿಲ್ಲ. ಇದರಿಂದ ತೀವ್ರ ಮಾನಸಿಕ ಆಘಾತಕ್ಕೊಳಗಾಗಿದ್ದರು.
ಬಿರ್ಲಾ ಫರ್ಟಿಲಿಟಿ ಆ್ಯಂಡ್ ಐವಿಎಫ್ನಲ್ಲಿ ಅಂತಿಮ ಪ್ರಯತ್ನ ಮಾಡಿದ್ದಾರೆ. ವೈದ್ಯರು ಬಂಜೆತನ ಮತ್ತು ಐವಿಎಫ್ ಚಕ್ರ ವಿಫಲವಾಗಲು ಕಾರಣವೇನು ಎಂಬುದಕ್ಕೆ ಕುರಿತು ನಿಖರ ಕಾರಣ ಹುಡುಕಿದ್ದಾರೆ. ವೈದ್ಯಕೀಯ ಪರೀಕ್ಷೆಯ ವೇಳೆ ಮಹಿಳೆ ಪ್ರಾಥಮಿಕ ಫಲವತ್ತತೆ ಮತ್ತು ಎವಿಎಫ್ ಚಿಕಿತ್ಸೆಯಲ್ಲಿ ಅನುಸರಿಸಿದ ವಿಧಾನದ ಕುರಿತು ಗೊತ್ತಾಗಿದೆ. ಪತಿ ಹೆಚ್ಚಿನ ಮಟ್ಟದಲ್ಲಿ ಡಿಎನ್ಎ ಪ್ರಾಗ್ಮೆಂಟೆಷನ್ ಇಂಡೆಕ್ಸ್ (ಡಿಎಫ್ಐ) ಹೊಂದಿದ್ದು, ವೀರ್ಯ ಪದ್ಧತಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಪತಿಯ ವೀರ್ಯನಲ್ಲಿ ಸೋಂಕು ಇದ್ದು, ಆ್ಯಂಟಿ ಬಯೋಟಿಕ್ ಚಿಕಿತ್ಸೆ ಬೇಕಾಗಿತ್ತು ಎಂದು ಲಜಪತ್ ನಗರ್ನ ಬಿರ್ಲಾ ಫರ್ಟಿಲಿಟಿ ಆ್ಯಂಡ್ ಐವಿಎಫ್ ಕನ್ಸಲ್ಟಂಟ್ ಮುಸ್ಕಾನ್ ಛಬ್ರಾ ತಿಳಿಸಿದರು.
ಬಳಿಕ ಮಹಿಳೆಯ ಅಂಡಾಶಯದ ಪರೀಕ್ಷೆ ನಡೆಸಲಾಗಿದೆ. ಆ ಸಂದರ್ಭದಲ್ಲಿ ವಿಸ್ತರಿಸಿದ ಕುಹರ ಮತ್ತು ಗರ್ಭಾಶಯದ ಗೋಡೆಯ ಮೇಲೆ ಸ್ಕ್ರಾಚಿಂಗ್ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ದಂಪತಿ ಜೀವನಶೈಲಿ ಬದಲಾಯಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಇದರ ಜೊತೆಗೆ ದೀರ್ಘಕಾಲದ ಆ್ಯಂಟಿಆಕ್ಸಿಡೆಂಟ್ ಕೋರ್ಸ್ ಅನ್ನು ಆರಂಭಿಸಿದ್ದಾರೆ. ಇದಕ್ಕಾಗಿ ಇರಾ ಟೆಸ್ಟಿಂಗ್ ಒಳಗಾಗಿದ್ದಾರೆ. ಸೂಕ್ತ ಸ್ಥಳದಲ್ಲಿ ಇಂಪ್ಲಾಟೇಷನ್ ಚಿಕಿತ್ಸೆ ನಡೆಸಲಾಗಿದೆ. ಎರಡು ಭ್ರೂಣಗಳ ವರ್ಗಾವಣೆಯನ್ನು ಸಮಯಕ್ಕುನುಗುಣವಾಗಿ ಮಾಡಿದ್ದಾರೆ. ಈ ಚಿಕಿತ್ಸೆಯ 15 ದಿನಗಳ ನಂತರ ಮಹಿಳೆಯ ಗರ್ಭ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದು, ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ವಿವರಿಸಿದರು.(ಐಎಎನ್ಎಸ್)
ಇದನ್ನೂ ಓದಿ: ಮಗು ಹೊಂದುವ ಕನಸಿಗೆ ಅಡ್ಡಿಯಾಗುವುದು ಈ ಜೀವನ ಶೈಲಿ: ಬೇಕಿದೆ ಆರೋಗ್ಯಕರ ಅಭ್ಯಾಸ