Daytime Sleepiness Reasons: ಊಟ ಮಾಡಿದ ನಂತರ ಕೆಲಸದ ಸಮಯದಲ್ಲಿ ನಮ್ಮಲ್ಲಿ ಹೆಚ್ಚಿನವರು ನಿದ್ರೆ ಮಾಡುತ್ತಾರೆ. ಇದರ ಪರಿಣಾಮವಾಗಿ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಬೆಂಬಲಿಸುವುದಿಲ್ಲ. ಇದರಿಂದ ಯಾವುದೇ ಕಾರ್ಯಗಳತ್ತ ಗಮನಹರಿಸಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಾರೆ. ಕಚೇರಿಯ ಸಮಯದಲ್ಲಿ ಹಗಲಿನಲ್ಲಿ ನಿದ್ರೆ ಬರಲು ಕಾರಣಗಳೇನು? ಈ ತೊಂದರೆ ಪರಿಹರಿಸಲು ಏನು ಮಾಡಬೇಕು ಎಂದು ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.
ಊಟ ತಡವಾಗಿ ಮಾಡುವುದು: ರಾತ್ರಿ ವೇಳೆಯಲ್ಲಿ ತಡವಾಗಿ ಊಟ ಮಾಡುವುದು ಕೂಡ ಹಗಲಿನಲ್ಲಿ ನಿದ್ದೆ ಬರಲು ಕಾರಣವಾಗುತ್ತದೆ. ತಡವಾಗಿ ಊಟ ಮಾಡಿದರೆ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟಾಗುತ್ತದೆ. ವಿಶೇಷವಾಗಿ ಊಟದ ಬಳಿಕ 3 ರಿಂದ 4 ಗಂಟೆಗಳ ನಂತರ ನಿದ್ರೆ ಮಾಡಬೇಕಾಗುತ್ತದೆ. ಸಾಧ್ಯವಾದಷ್ಟು ರಾತ್ರಿಯ ಊಟವನ್ನು ಬೇಗ ಮಾಡಬೇಕು. ಮಧ್ಯರಾತ್ರಿಯಲ್ಲಿ ಯಾವುದೇ ಆಹಾರ ಸೇವಿಸಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಫೋನ್ ಹಾಗೂ ಕಂಪ್ಯೂಟರ್‌ನಂತಹ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಾರೆ. ರಾತ್ರಿ ವೇಳೆ ಕಡಿಮೆ ಬೆಳಕಿನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಊಟದ ಸಮಯದ ಮೊದಲು ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಸಾಧ್ಯವಾದಷ್ಟು ಮಿತಿಗೊಳಿಸೋದು ಉತ್ತಮ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಉತ್ತಮ ನಿದ್ರೆ ಅಗತ್ಯ: ಹಗಲು ನಿದ್ದೆ ತಪ್ಪಿಸಲು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು. ನೆಮ್ಮದಿಯಿಂದ ನಿದ್ರೆ ಮಾಡಲು ನಮ್ಮ ಸುತ್ತಲಿನ ವಾತಾವರಣ ಚೆನ್ನಾಗಿರಬೇಕಾಗುತ್ತದೆ. ಮಲಗುವ ಕೊಠಡಿಯಲ್ಲಿ ಬೆಳಕು ಇಲ್ಲದಂತೆ ನೋಡಿಕೊಳ್ಳಬೇಕು. ನಿತ್ಯ ಒಂದೇ ಸಮಯದಲ್ಲಿ ಮಲಗಬೇಕು ಎಂದು ತಜ್ಞರು ತಿಳಿಸುತ್ತಾರೆ.
ಮದ್ಯ ಸೇವನೆ: ತಜ್ಞರು ಹೇಳುವಂತೆ ಮದ್ಯ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನಿದ್ರಾಹೀನತೆ ಸಮಸ್ಯೆಯು ದೇಹದ ಆರೋಗ್ಯ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಮದ್ಯಪಾನದಿಂದ ದೂರವಿರಲು ತಜ್ಞರು ಸಲಹೆ ನೀಡುತ್ತಾರೆ.
ರಾತ್ರಿಯಲ್ಲಿ ಕಾಫಿ, ಚಹಾ ಕುಡಿಯಬೇಡಿ: ರಾತ್ರಿ ಸಮಯದಲ್ಲಿ ವಿಶೇಷವಾಗಿ ಕಾಫಿ ಹಾಗೂ ಚಹಾ ಕುಡಿದರೆ, ಕೆಫೀನ್ ನಿದ್ರೆಗೆ ಭಂಗ ತರುತ್ತದೆ ಎಂದು ಹಲವು ಸಂಶೋಧನೆಗಳು ತಿಳಿಸುತ್ತವೆ. ರಾತ್ರಿಯ ಊಟದ ನಂತರ ಕಾಫಿ, ಚಹಾ ಕುಡಿಯಬೇಡಿ ಎಂದು ತಜ್ಞರು ತಿಳಿಸುತ್ತಾರೆ. 2018ರಲ್ಲಿ ನ್ಯೂಟ್ರಿಯೆಂಟ್ಸ್ ಜರ್ನಲ್‌ನಲ್ಲಿ ಪ್ರಕಟವಾದ 'ಡಯಟ್ ಮತ್ತು ಡೇಟೈಮ್ ಸ್ಲೀಪಿನೆಸ್ ನಡುವಿನ ಸಂಬಂಧ' (The Relationship Between Diet and Daytime Sleepiness) ಎಂಬ ಅಧ್ಯಯನದಲ್ಲಿ ವಿಷಯ ತಿಳಿದಿದೆ (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ).
ಆರೋಗ್ಯಕರ ನಿದ್ರೆಗೆ ತಜ್ಞರ ಸಲಹೆ: ರಾತ್ರಿ ಮಲಗುವ ಮುನ್ನ ಪುಸ್ತಕ ಓದುವಂತಹ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲನ್ನು ಕುಡಿಯಬೇಕು. ಇದರಿಂದ ಆರಾಮದಾಯಕ ನಿದ್ರೆ ಆಗುತ್ತದೆ. ರಾತ್ರಿ ಸಮಯದಲ್ಲಿ 6 ರಿಂದ 8 ಗಂಟೆ ನಿದ್ದೆ ಮಾಡಬೇಕು. ಇದರಿಂದ ಕಿರಿಕಿರಿ, ಆಯಾಸ, ನಿಸ್ತೇಜತೆ ಉಂಟಾಗುವುದಿಲ್ಲ ಎಂದು ತಜ್ಞರು ವಿವರಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಬಹುದು:
ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.