How to Find best cinnamon: ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನ್ನಿಗೆ ವಿಶೇಷವಾದ ಸ್ಥಾನವಿದೆ. ಬಿರಿಯಾನಿ, ನಾನ್ ವೆಜ್ ಖಾದ್ಯಗಳಿಗೆ ಕಡ್ಡಾಯವಾಗಿ ಬಳಕೆ ಮಾಡಲಾಗುತ್ತದೆ. ದಾಲ್ಚಿನ್ನಿಯು ರುಚಿ ಮತ್ತು ಪರಿಮಳದ ದೃಷ್ಟಿಯಿಂದ ಮಾತ್ರವಲ್ಲದೇ ಆರೋಗ್ಯಕ್ಕೂ ಹೆಚ್ಚು ಪ್ರಯೋಜನವಾಗಿದೆ. ಈ ಪ್ರಸಿದ್ಧ ದಾಲ್ಚಿನ್ನಿಯಲ್ಲಿ ಪ್ರಮುಖವಾಗಿ ಎರಡು ವಿಧಗಳಿದ್ದು, ಒಂದು ಸಿನಮೋಮಮ್ ವೆರಮ್ ದಾಲ್ಚಿನ್ನಿ. ಮತ್ತೊಂದು ಒಂದು ರೀತಿಯ ಕ್ಯಾಸಿಯಾ. ಇವುಗಳಲ್ಲಿ ಮೊದಲನೆಯದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಬೆಲೆಯು ಕೂಡ ಹೆಚ್ಚಿರುತ್ತದೆ.
ದಾಲ್ಚಿನ್ನಿ ಹೇಗೆ ಬೆಳೆಯುತ್ತೆ?: ಸಿನ್ನಮೋಮಮ್ ವೆರಮ್ ಎಂಬುದು ಮರದ ಹೆಸರು. ಇದರ ತೊಗಟೆಯೇ ದಾಲ್ಚಿನ್ನಿ. ಇದನ್ನು ಶ್ರೀಲಂಕಾದಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಈ ತೊಗಟೆಯು ಸುತ್ತಿಕೊಂಡಿರುತ್ತದೆ. ಇತರ ವಿಧದ ದಾಲ್ಚಿನ್ನಿಗಳನ್ನು ಇದೇ ರೀತಿ ಬೆಳೆಯಲಾಗುತ್ತದೆ. ಆದರೆ, ಗುಣಮಟ್ಟ ಮಾತ್ರ ಬದಲಾಗುತ್ತದೆ.
ಕ್ಯಾಸಿಯಾ ದಾಲ್ಚಿನ್ನಿಯನ್ನು ನಮ್ಮ ದೇಶದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಇದನ್ನು ಹೆಚ್ಚಾಗಿ ಚೀನಾದಲ್ಲಿ ಬೆಳೆಯಲಾಗುತ್ತದೆ. ಶ್ರೀಲಂಕಾದ ತಳಿಯನ್ನು ಕೇರಳದಲ್ಲಿ ನಮ್ಮ ಹತ್ತಿರ ಬೆಳೆಯಲಾಗುತ್ತದೆ. ಇದನ್ನು ಮಲಬಾರ್ ದಾಲ್ಚಿನ್ನಿ ಎಂದು ಕರೆಯಲಾಗುತ್ತದೆ. ಆದರೆ, ಇಲ್ಲಿ ಕಡಿಮೆ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇತ್ತೀಚೆಗೆ ಕೆಲವು ದಕ್ಷಿಣದ ರಾಜ್ಯಗಳು ಶ್ರೀಲಂಕಾದ ದಾಲ್ಚಿನ್ನಿಯನ್ನು ಬೆಳೆಸಲು ಆರಂಭಿಸಿವೆ.
ಶ್ರೀಲಂಕಾದ ತಳಿಯ ದಾಲ್ಚಿನ್ನಿ ಏಕೆ ಒಳ್ಳೆಯದು?: ಶ್ರೀಲಂಕಾದ ದಾಲ್ಚಿನ್ನಿ ತಳಿಯು ರುಚಿ ಮತ್ತು ಗುಣಮಟ್ಟದಲ್ಲಿ ಉತ್ತಮವಾಗಿದೆ ಎಂದು ಆರೋಗ್ಯ ತಜ್ಞರು ಹಾಗೂ ಕೃಷಿ ತಜ್ಞರು ತಿಳಿಸುತ್ತಾರೆ. ದಾಲ್ಚಿನ್ನಿಯಲ್ಲಿ ಆ್ಯಂಟಿ -ಆಕ್ಸಿಡೆಂಟ್ ಅಧಿಕವಾಗಿರುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೃದ್ರೋಗಗಳ ತಡೆಗಟ್ಟುವಿಕೆಗೆ ಈ ದಾಲ್ಚಿನ್ನಿ ತುಂಬಾ ಒಳ್ಳೆಯದು ಎಂದು ಹಲವು ಸಂಶೋಧನೆಗಳು ಸ್ಪಷ್ಟಪಡಿಸಿವೆ. ಒಬ್ಬ ಮನುಷ್ಯ ದಿನಕ್ಕೆ 120 ಮಿಲಿಗ್ರಾಂ ದಾಲ್ಚಿನ್ನಿ ತೆಗೆದುಕೊಳ್ಳಬಹುದು. ಸಕ್ಕರೆ ಕಾಯಿಲೆ ಇರುವವರು ದಾಲ್ಚಿನ್ನಿ ಪುಡಿಯನ್ನು ಬಿಸಿ ನೀರಿನಲ್ಲಿ ಹಾಕಿ ಕುಡಿದರೆ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ.
ಶ್ರೀಲಂಕಾದ ದಾಲ್ಚಿನ್ನಿ ತಳಿಯನ್ನು ಹೇಗೆ ಗುರುತಿಸೋದು?
- ಶ್ರೀಲಂಕಾದ ದಾಲ್ಚಿನ್ನಿ ಬೆಲೆ ಹೆಚ್ಚಿರುತ್ತದೆ.
- ರೋಲ್ಗಳಾಗಿ ಸುತ್ತಿಕೊಂಡಿರುತ್ತದೆ.
- ಗಟ್ಟಿಯಾಗಿರೋದಿಲ್ಲ. ಸುಲಭವಾಗಿ ಮುರಿಯುತ್ತದೆ.
- ತಿಳಿ ಕೇಸರಿ ಬಣ್ಣ ಇರುತ್ತದೆ.
ಚೀನಾದ ದಾಲ್ಚಿನ್ನಿಯನ್ನು ಹೇಗೆ ಕಂಡು ಹಿಡಿಯುವುದು?
- ಚೀನಾದ ದಾಲ್ಚಿನ್ನಿ ಗಟ್ಟಿಯಾಗಿದೆ.
- ದಾಲ್ಚಿನ್ನಿ ಸುಲಭವಾಗಿ ಮುರಿಯುವುದಿಲ್ಲ.
- ದರ ಕೂಡ ಕಡಿಮೆ ಇರುತ್ತದೆ.
- ಅದರ ಮೇಲೆ ಕ್ಯಾಸಿಯಾ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ.
- ಗಾಢ ಕಂದು ಬಣ್ಣ ಇರುತ್ತದೆ.
ಚೀನಾ ಮರದಲ್ಲಿ ಕೂಮರಿನ್ ದಾಲ್ಚಿನ್ನಿ ಹೆಚ್ಚು ಬೆಳೆಯಲಾಗುತ್ತದೆ. ಇದನ್ನು ಸೇವಿಸಿದರೆ ಕೆಲವು ಕಾಯಿಲೆಗಳು ಬರುವ ಸಾಧ್ಯತೆ ಇದೆ. ಶ್ರೀಲಂಕಾದ ತಳಿಗಳಲ್ಲಿ ಈ ರಾಸಾಯನಿಕ ಕಡಿಮೆ ಬಳಕೆ ಮಾಡುತ್ತಾರೆ ಎಂದು ಸಂಶೋಧನೆಗಳು ತೋರಿಸುತ್ತವೆ. ಇವೆರಡರ ಜೊತೆಗೆ ವಿಯೆಟ್ನಾಂನಲ್ಲಿ ಸೈಗಾನ್ ದಾಲ್ಚಿನ್ನಿ ಬೆಳೆಯಲಾಗುತ್ತದೆ. ಇದು ಹೆಚ್ಚು ಮಸಾಲೆಯುಕ್ತವಾಗಿದೆ. ಇಂಡೋನೇಷ್ಯಾದಲ್ಲಿ ಲಭ್ಯವಿರುವ ಒಂದನ್ನು 'ಕೊರಿನ್ಟಿಜ್' ಎಂದು ಕರೆಯಲಾಗುತ್ತದೆ. ಸ್ವಲ್ಪ ಹೆಚ್ಚು ಸಿಹಿ ಇರುತ್ತದೆ. ಈ ದಾಲ್ಚಿನ್ನಿಗಳನ್ನು ಹೆಚ್ಚಾಗಿ ಬೇಕರಿಗಳಲ್ಲಿ ಬಳಕೆ ಮಾಡುತ್ತಾರೆ.