ETV Bharat / health

ಎಳ್ಳೆಣ್ಣೆ ಹೀಗೆ ಸೇವಿಸಿದರೆ ಬೊಜ್ಜು ಬೆಣ್ಣೆಯಂತೆ ಕರಗುತ್ತೆ: ಪೌಷ್ಟಿಕ ತಜ್ಞರ ಸಲಹೆ - SESAME OIL BENEFITS

ಎಳ್ಳೆಣ್ಣೆ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭಗಳು ಲಭಿಸುತ್ತವೆ. ಮುಖ್ಯವಾಗಿ ಎಳ್ಳೆಣ್ಣೆ ತೂಕ ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ ಎನ್ನುವ ಬಗ್ಗೆ ಪೌಷ್ಟಿಕ ತಜ್ಞರು ತಿಳಿಸಿರುವ ಮಾಹಿತಿ ಇಲ್ಲಿದೆ ಸಂರ್ಪೂರ್ಣವಾಗಿ ಓದಿ.

SESAME OIL BENEFITS  SESAME OIL USES AND NUTRITION  SESAME OIL HELPS IN REDUCING WEIGHT  ಎಳ್ಳೆಣ್ಣೆಯ ಆರೋಗ್ಯದ ಲಾಭಗಳು
ಎಳ್ಳು ಹಾಗೂ ಎಳ್ಳೆಣ್ಣೆ (FREEPIK)
author img

By ETV Bharat Health Team

Published : Jan 18, 2025, 12:19 PM IST

Health benefits of sesame oil: ಇಂದಿನ ಆಧುನಿಕ ಯುಗದಲ್ಲಿ ಬಹುತೇಕರಿಗೆ ಸ್ಥೂಲಕಾಯತೆ ಸಮಸ್ಯೆ ಕಾಡುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಸ್ಥೂಲಕಾಯತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಹಾರ ಪದ್ಧತಿಯ ಮೇಲೆ ನಿಯಂತ್ರಣ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ತಿಳಿಸುತ್ತಾರೆ ತಜ್ಞರು.

ಚಳಿಗಾಲದಲ್ಲಿ ಅನೇಕ ಕಾರಣಗಳಿಂದ ತೂಕ ಹೆಚ್ಚಾಗುತ್ತದೆ. ಹೆಚ್ಚು ಕ್ಯಾಲೊರಿಗಳ ಆಹಾರ ಸೇವಿಸುವುದು. ಕಡಿಮೆ ದೈಹಿಕ ಚಟುವಟಿಕೆ, ಚಯಾಪಚಯ ಬದಲಾವಣೆ ಹಾಗೂ ನಿರ್ಜಲೀಕರಣ, ಹಾರ್ಮೋನುಗಳ ಬದಲಾವಣೆ ಹಾಗೂ ಅತಿಯಾಗಿ ನಿದ್ರೆ ಮಾಡುವುದು ಆಗಿದೆ. ಜನರು ಹೆಚ್ಚಾಗಿರುವ ತೂಕ ಕಡಿಮೆ ಮಾಡಲು ಅನೇಕ ಪರಿಹಾರಗಳನ್ನು ಪ್ರಯತ್ನಿಸುತ್ತಾರೆ. ಆದ್ರೆ, ಈ ಎಲ್ಲಾ ಪ್ರಯತ್ನಗಳು ಫಲ ನೀಡಲು ಸಾಧ್ಯವಾಗುವುದಿಲ್ಲ. ತಜ್ಞರು ತಿಳಿಸುವ ಸಲಹೆಗಳನ್ನು ಪಾಲಿಸಿದರೆ, ಚಳಿಗಾಲದಲ್ಲಿ ನೀವು ಸ್ಲಿಮ್ ಆಗಿ ಹಾಗೂ ಫಿಟ್ ಆಗಿ ಕಾಣಲು ಸಾಧ್ಯವಿದೆ.

SESAME OIL BENEFITS  SESAME OIL USES AND NUTRITION  SESAME OIL HELPS IN REDUCING WEIGHT  ಎಳ್ಳೆಣ್ಣೆಯ ಆರೋಗ್ಯದ ಲಾಭಗಳು
ಎಳ್ಳೆಣ್ಣೆ (pexels)

ಎಳ್ಳೆಣ್ಣೆ ಲಾಭಗಳು: ಆಯುರ್ವೇದದಲ್ಲಿ ಎಳ್ಳೆಣ್ಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಎಳ್ಳಿನಲ್ಲಿ ಔಷಧೀಯ ಗುಣಗಳು ಇರುವುದರಿಂದಾಗಿ, ಇದನ್ನು ವಿವಿಧ ರೀತಿಯ ಸೌಂದರ್ಯ ವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಎಳ್ಳೆಣ್ಣೆಯನ್ನು ಹೊಂದಿರುವ ಸೌಂದರ್ಯ ವರ್ಧಕಗಳು ನಮ್ಮ ಚರ್ಮಕ್ಕೆ ತೇವಾಂಶವನ್ನು ಕಾಯ್ದುಕೊಳ್ಳಲು ಮಾತ್ರವಲ್ಲದೆ ಚರ್ಮದಲ್ಲಿ ಹೊಸ ಕೋಶಗಳನ್ನು ಸೃಷ್ಟಿಸುತ್ತವೆ. ಎಳ್ಳಿನ ಎಣ್ಣೆಯಲ್ಲಿ ವಯಸ್ಸಾಗುವುದನ್ನು ತಡೆಯುವ ಗುಣಗಳು ನೈಸರ್ಗಿಕವಾಗಿ ಕಂಡುಬರುತ್ತವೆ ಎಂದು ಪೌಷ್ಟಿಕ ತಜ್ಞೆ ರೋಶ್ನಿ ದಿನಿಜ್ ತಿಳಿಸುತ್ತಾರೆ.

ಆಹಾರದಲ್ಲಿ ಎಳ್ಳು ಬಳಕೆ ಮಾಡಿರುವುದು (pexels)

ಸಾಮಾನ್ಯವಾಗಿ ದೇಹದ ಮಸಾಜ್‌ಗೆ ಎಳ್ಳೆಣ್ಣೆ ಸೂಕ್ತವೆಂದು ಪರಿಗಣಿಸಲಾಗುತ್ತದೆ. ಸೌಂದರ್ಯವಷ್ಟೇ ಅಲ್ಲ, ಎಳ್ಳೆಣ್ಣೆ ಆಹಾರದ ರುಚಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಲವು ರಾಜ್ಯಗಳಲ್ಲಿ ಎಳ್ಳೆಣ್ಣೆಯನ್ನು ಮುಖ್ಯವಾಗಿ ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ. ಎಳ್ಳು ಹಾಗೂ ಎಳ್ಳೆಣ್ಣೆ ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ರೋಶ್ನಿ ದಿನಿಜ್ ವಿವರಿಸುತ್ತಾರೆ.

ಕೊಲೆಸ್ಟ್ರಾಲ್ ಕರಗುತ್ತೆ: ದೇಹದ ತೂಕ ಇಳಿಸಲು ಸಾಮಾನ್ಯವಾಗಿ ಜನರು ಮುಂಜಾನೆ ಬಿಸಿ ನೀರಿನಲ್ಲಿ ನಿಂಬೆ ರಸ ಬೆರೆಸಿ ಕುಡಿಯುತ್ತಾರೆ. ಆದರೆ, ನೀವು ಬೆಳಿಗ್ಗೆ ನಿಂಬೆ ರಸದ ಬದಲಿಗೆ ಒಂದು ಚಮಚ ಎಳ್ಳು ಎಣ್ಣೆಯನ್ನು ಬೆರೆಸಿದ ಬಿಸಿನೀರನ್ನು ಸೇವಿಸಿದರೆ, ನಂತರ ಅದನ್ನು ಸೇವಿಸುವುದರಿಂದ ನಿಮ್ಮ ತೂಕ ಕಡಿಮೆಯಾಗುತ್ತದೆ. ಇದನ್ನು ನಿಯಮಿತವಾಗಿ ಸೇವಿಸಿದರೆ ದೇಹದಲ್ಲಿನ ಕೊಲೆಸ್ಟ್ರಾಲ್ ಕೂಡ ಕರಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಎಳ್ಳು (pexels)

Sciencedirect.com ಪ್ರಕಾರ, ಎಳ್ಳೆಣ್ಣೆಯಲ್ಲಿ ಪ್ರೋಟೀನ್ ಹಾಗೂ ಫೈಬರ್‌ ಸಮೃದ್ಧವಾಗಿದೆ. ತೂಕ ನಷ್ಟಕ್ಕೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬೆಳ್ಳಗ್ಗೆ ಎಳ್ಳೆಣ್ಣೆ ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದನ್ನು ಸೇವಿಸಿದ ನಂತರ ಹೆಚ್ಚು ಹಸಿವು ಆಗುವುದಿಲ್ಲ. ಇದರಿಂದಾಗಿ ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಇದನ್ನು ಸೇವಿಸಿದ ಬಳಿಕ ಯಾವುದೇ ಜಂಕ್ ಫುಡ್ ತಿನ್ನಬಾರದು ಎನ್ನುವುದನ್ನು ನೆನಪಿನಲ್ಲಿಡಿ. ಎಳ್ಳಿನ ಎಣ್ಣೆಯು ತೂಕ ಕಡಿಮೆ ಮಾಡುವುದಲ್ಲದೆ, ಈ ಎಣ್ಣೆಯ ಸೇವನೆಯು ದೇಹದಲ್ಲಿ ಕಫ- ವಾತ- ಪಿತ್ತ ದೋಷವನ್ನು ಸಹ ನಿಯಂತ್ರಣ ಮಾಡಬಹುದು. ಇದು ಜ್ವರ, ಶೀತ ಹಾಗೂ ಕೆಮ್ಮಿನಂತಹ ತೊಂದರೆಗಳನ್ನು ತಡೆಯುತ್ತದೆ. ಕೀಲು ನೋವನ್ನು ನಿವಾರಣೆ ಮಾಡುತ್ತದೆ. ವಿಶೇಷವಾಗಿ ಕೀಲು ಸಮಸ್ಯೆಗಳು ಹಾಗೂ ವಯಸ್ಸಾದಂತೆ ಬರುವ ವಿವಿಧ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ವಿಟಮಿನ್ ಇ: ಎಳ್ಳೆಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದರ ಬಳಕೆ ಮಾಡುವುದರಿಂದ ತೂಕ ಇಳಿಕೆಯ ಜೊತೆಗೆ ಸ್ನಾಯುಗಳು ಮತ್ತು ರಕ್ತ ಕಣಗಳು ಆರೋಗ್ಯವಾಗಿರಲು ಸಾಧ್ಯವಿದೆ. ಎಳ್ಳೆಣ್ಣೆ ಆರೋಗ್ಯದ ಜೊತೆಗೆ ತ್ವಚೆಯ ಸೌಂದರ್ಯಕ್ಕೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಇದರಿಂದ ಚರ್ಮವು ಆರೋಗ್ಯಕರವಾಗುತ್ತದೆ. ಕೂದಲು ಮತ್ತು ಉಗುರುಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತದೆ. ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ಖಂಡಿತವಾಗಿಯೂ ನೀವು ಫಿಟ್ ಆಗಿರುತ್ತೀರಿ. ಈ ಎಣ್ಣೆಯನ್ನು ನಿಮ್ಮ ಚಳಿಗಾಲದ ಆಹಾರದಲ್ಲಿ ನಿಯಮಿತವಾಗಿ ಬಳಕೆ ಮಾಡಲು ತಜ್ಞರು ಸಲಹೆ ನೀಡಿದ್ದಾರೆ.

ಬಿಸ್ಕತ್​ಗೆ ಎಳ್ಳು ಬಳಕೆ (pexels)

ಹಲವು ವಿಧಗಳ ಆಹಾರದಲ್ಲಿ ಸೇರಿಸಿಕೊಳ್ಳಿ: ಸೌಂದರ್ಯಕ್ಕೆ ಅಷ್ಟೇ ಅಲ್ಲ, ಎಳ್ಳೆಣ್ಣೆ ಆಹಾರದ ಟೇಸ್ಟ್​ ಹೆಚ್ಚಿಸುತ್ತದೆ. ಎಳ್ಳೆಣ್ಣೆ ಮಾತ್ರವಲ್ಲ, ಬ್ರೆಡ್, ಚಟ್ನಿ, ಪಕೋಡಾ, ಸಿಹಿತಿಂಡಿಗಳು, ಸಲಾಡ್‌ಗಳು ಮತ್ತು ತರಕಾರಿಗಳ ರುಚಿಯನ್ನು ಹೆಚ್ಚಿಸಲು ಎಳ್ಳನ್ನು ಬಳಕೆ ಮಾಡಿದರೆ ಉತ್ತಮ. ಭಾರತ ಹೊರತುಪಡಿಸಿ, ಎಳ್ಳು ಹಾಗೂ ಎಳ್ಳಿನ ಎಣ್ಣೆಯನ್ನು ಮುಖ್ಯವಾಗಿ ವಿವಿಧ ದೇಶಗಳಲ್ಲಿ ಅಡುಗೆಗಳಲ್ಲಿ ಉಪಯೋಗಿಸಲಾಗುತ್ತದೆ. ಎಳ್ಳು ಮತ್ತು ಎಳ್ಳೆಣ್ಣೆಯು ರುಚಿಯ ಜೊತೆಗೆ ಆರೋಗ್ಯ ಲಾಭಗಳನ್ನು ಒದಗಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಖಾರದ ತಿಂಡಿಯಲ್ಲಿ ಎಳ್ಳು ಉಪಯೋಗಿಸಿರುವುದು (pexels)

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು:

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇವುಗಳನ್ನು ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.