ಹೈದರಾಬಾದ್: ಕಿರುತೆರೆ ನಟಿ ಹೀನಾ ಖಾನ್ ಸ್ತನ ಕ್ಯಾನ್ಸರ್ಗೆ ಗುರಿಯಾಗಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಈ ಸಂಬಂಧ ಚಿಕಿತ್ಸೆ ಆರಂಭಿಸಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಕುರಿತು ಅರಿವು, ಆರಂಭಿಕ ಹಂತದ ಪತ್ತೆ ಮತ್ತು ಚಿಕಿತ್ಸೆ ಸಂದರ್ಭದಲ್ಲಿ ಸಕಾರಾತ್ಮಕವಾಗಿರುವ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಏನಿದು ಸ್ತನ ಕ್ಯಾನ್ಸರ್?: ಸ್ತನದ ಅಂಗಾಂಶದಲ್ಲಿ ಉಂಟಾಗುವ ಬೆಳವಣಿಗೆ ಇದಾಗಿದೆ. ಜಾಗತಿಕವಾಗಿ ಹೆಚ್ಚಿನ ಮಟ್ಟದಲ್ಲಿ ಈ ಸ್ತನ ಕ್ಯಾನ್ಸರ್ ಮಹಿಳೆಯರನ್ನು ಕಾಡಿದರೂ, ಪುರುಷರು ಕೂಡಾ ಇದರಿಂದ ಹೊರತಾಗಿಲ್ಲ. ಸ್ತನ ಕ್ಯಾನ್ಸರ್ ಸ್ತನದ ವಿವಿಧ ಭಾಗದಲ್ಲಿ ಆರಂಭವಾಗಬಹುದು. ಸ್ತನ ಗ್ರಂಥಿಗಳು, ನಾಳಗಳು ಮತ್ತು ಕೊಬ್ಬಿನ ಅಂಗಾಂಶಗಳಿಂದ ರೂಪುಗೊಂಡಿರುತ್ತದೆ. ಮಹಿಳೆಯರಲ್ಲಿ ಹೆರಿಗೆಯಾದ ಬಳಿಕ ಮಗುವಿಗೆ ಹಾಲನ್ನು ಉತ್ಪಾದಿಸುವ ಕಾರ್ಯವನ್ನು ಇದು ನಿರ್ವಹಿಸುತ್ತದೆ.
ಸ್ತನ ಕ್ಯಾನ್ಸರ್ ಹಂತಗಳು?: ಮೂರನೇ ಹಂತದ ಸ್ತನದಲ್ಲಿರುವ ಗಡ್ಡೆ 5 ಸೆ.ಮೀ ಗಿಂತ ದೊಡ್ಡದಾಗಿರುತ್ತದೆ. 1-3 ದುಗ್ಧರಸ ಗ್ರಂಥಿಗಳು ಎದೆಯ ಗೋಡೆಯ ಸ್ನಾಯು ಅಥವಾ ತ್ವಚೆಯ ಸುತ್ತಲಿನ ಅಂಗಾಂಶಗಳಿಗೆ ಹರಡಿಕೊಂಡಿರುತ್ತದೆ. ಈ ಹಂತದಲ್ಲಿ ಸ್ತನದಲ್ಲಿ ಗಡ್ಡೆಗಳಾಗಿರುವುದು ಅನುಭವಕ್ಕೆ ಬರುತ್ತದೆ. ಹಾಗೇ ತ್ವಚೆಯ ಬದಲಾವಣೆ ಮತ್ತು ಸ್ತನ ನೋವು, ಮೊಲೆಗಳಿಂದ ಸ್ರಾವ ಕಂಡು ಬರುತ್ತದೆ.
ಸ್ತನ ಕ್ಯಾನ್ಸರ್ ಅನ್ನು ಗಡ್ಡೆಗಳ ಆಧಾರದ ಮೇಲೆ ವಿಭಾಗಿಸಲಾಗಿದೆ. ಲೋಬ್ಲು ಎದೆ ಹಾಲು ಉತ್ಪಾದನೆ ಮಾಡುವ ಗ್ರಂಥಿಯಾಗಿದ್ದು, ಇಲ್ಲಿಂದ ಆರಂಭವಾಗುವ ಕ್ಯಾನ್ಸರ್ ಅನ್ನು ಲೋಬ್ಯುಲರ್ ಕ್ಯಾನ್ಸರ್ ಎನ್ನಲಾಗುವುದು. ಲೋಬ್ಲುಗಳಿಂದ ಹೊರಬರುವ ಹಾಲನ್ನು ಸಣ್ಣ ನಗರಗಳ ಮೂಲಕ ಮೊಲೆಗೆ ಸಾಗಿಸುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ಪ್ರಾರಂಭವಾಗುವ ಸ್ಥಳ ಇದಾಗಿದ್ದು, ಇದನ್ನು ಡಕ್ಟಲ್ ಕ್ಯಾನ್ಸರ್ ಎನ್ನಲಾಗುವುದು. ಮೊಲೆಗಳಿಂದ ಆರಂಭವಾಗುವ ಸ್ತನದ ಕ್ಯಾನ್ಸರ್ ಅನ್ನು ಪ್ಯಾಗೆಟ್ ಕಾಯಿಲೆ ಎಂದು ಗುರುತಿಸಲಾಗಿದೆ. ಕಡಿಮೆ ಸಾಮಾನ್ಯ ವಿಧದ ಸ್ತನದ ಕ್ಯಾನ್ಸರ್ ಅನ್ನು ಫಿಲೋಡ್ಸ್ ಟ್ಯೂಮರ್ ಆಗಿದೆ.
ಸಣ್ಣ ಪ್ರಮಾಣದ ಕ್ಯಾನ್ಸರ್ಗಳು ಸ್ತನದ ಅಂಗಾಂಶದಿಂದ ಪ್ರಾರಂಭವಾಗುತ್ತದೆ. ಈ ಕ್ಯಾನ್ಸರ್ ಅನ್ನು ಸಾರ್ಕೋಮಾಗಳು ಮತ್ತು ಲಿಂಫೋಮಾ ಎಂದು ಕರೆಯಾಗಿದೆ. ಆದರೆ, ಇದನ್ನು ಸ್ತನದ ಕ್ಯಾನ್ಸರ್ ಎಂದು ಗುರುತಿಸುವುದಿಲ್ಲ. ಈ ಸ್ತನದ ಕ್ಯಾನ್ಸರ್ ಅನ್ನು ಕೆಲವು ಪ್ರೋಟಿನ್ ಮತ್ತು ಜೀನ್ಗಳ ಮೂಲಕವೂ ವರ್ಗೀಕರಿಸಲಾಗಿದೆ.