ಕರ್ನಾಟಕ

karnataka

ETV Bharat / health

ಕೇರಳದಲ್ಲಿ ವೆಸ್ಟ್​ ನೈಲ್​ ಜ್ವರ: ಇದ್ಯಾವ ರೋಗ? ಲಕ್ಷಣ, ಮುನ್ನೆಚ್ಚರಿಕೆ ಕ್ರಮಗಳು ಹೀಗಿವೆ - West Nile Fever - WEST NILE FEVER

ಸೋಂಕಿತ ಕ್ಯುಲೆಕ್ಸ್​ ಸೊಳ್ಳೆಗಳಿಂದ ವೆಸ್ಟ್​ ನೈಲ್​ ಜ್ವರ ಹರಡುತ್ತದೆ. 2011ರಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಈ ರೀತಿಯ ಜ್ವರ ವರದಿಯಾಗಿತ್ತು.

ವೆಸ್ಟ್​ ನೈಲ್​ ಜ್ವರ
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : May 8, 2024, 10:31 AM IST

ತಿರುವನಂತಪುರಂ: ರಾಜ್ಯದ ಮೂರು ಜಿಲ್ಲೆಗಳಲ್ಲಿ ಸೊಳ್ಳೆಗಳಿಂದ ಹರಡುವ ವೆಸ್ಟ್​ ನೈಲ್​ ಜ್ವರ ಪ್ರಕರಣಗಳು ಕಂಡುಬಂದಿವೆ. ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳ ನಿರ್ಮೂಲನೆಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಕುರಿತಾಗಿ ಅವರು ಜನರಲ್ಲೂ ಮನವಿ ಮಾಡಿದ್ದಾರೆ.

ಮಲ್ಲಪುರಂ, ಕೋಝಿಕ್ಕೋಡ್​ ಮತ್ತು ತ್ರಿಶೂರ್​​ ಜಿಲ್ಲೆಗಳಲ್ಲಿ ಸೋಂಕು ಕಂಡುಬಂದಿದ್ದು, ಆತಂಕ ಪಡುವ ಅಗತ್ಯವಿಲ್ಲ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ವೆಸ್ಟ್​ ನೈಲ್​ ಜ್ವರದ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಸೊಳ್ಳೆಗಳ ಮೂಲ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಬೇಕು ಹಾಗು ಮುಂಗಾರುಪೂರ್ವ ಸ್ವಚ್ಛತಾ ಕ್ರಮಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

10 ಜನರಲ್ಲಿ ವೆಸ್ಟ್‌ ನೈಲ್‌ ಸೋಂಕು: ರಾಜ್ಯದ ಹತ್ತು ಜನರಲ್ಲಿ ವೆಸ್ಟ್​ ನೈಲ್​ ಜ್ವರ ದೃಢಪಟ್ಟಿದ್ದು, ಈ ಪೈಕಿ ಐವರು ಗುಣಮಖರಾಗಿದ್ದಾರೆ. ಇದಕ್ಕೆ ಯಾವುದೇ ಲಸಿಕೆ ಮತ್ತು ಸೂಕ್ತ ಔಷಧಗಳಿಲ್ಲ. ಹೀಗಾಗಿ ಸೋಂಕು ಬಾರದಂತೆ ತಡೆಯುವುದೊಂದೇ ಮಾರ್ಗ.

ಜಪಾನೀಸ್ ಎನ್ಸೆಫಾಲಿಟಿಸ್‌ಗೆ ಹೋಲಿಸಿದರೆ ವೆಸ್ಟ್ ನೈಲ್ ಜ್ವರ ಹೆಚ್ಚು ಗಂಭೀರವಾಗಿಲ್ಲ. ಹೆಚ್ಚು ಆತಂಕ ಬೇಡ. ಆದರೆ ಎಚ್ಚರಿಕೆ ಅಗತ್ಯ. ಸೋಂಕಿತರು ಅಗತ್ಯ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ಸಚಿವೆ ಜಾರ್ಜ್‌ ಮನವಿ ಹೇಳಿದ್ದಾರೆ.

ವೆಸ್ಟ್​ ನೈಲ್​ ಜ್ವರದ ಕುರಿತು..: ಸೋಂಕಿತ ಕ್ಯುಲೆಕ್ಸ್​ ಸೊಳ್ಳೆಗಳಿಂದ ಈ ರೋಗ ಹರಡುತ್ತದೆ. ಮೊದಲ ಬಾರಿಗೆ 1937ರಲ್ಲಿ ಉಗಾಂಡಾದಲ್ಲಿ ಪತ್ತೆಯಾಗಿತ್ತು. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 2011ರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಜ್ವರಬಾಧೆಗೆ ಒಳಗಾದವರಲ್ಲಿ ಯಾವುದೇ ಹೊಸ ಲಕ್ಷಣಗಳು ಕಂಡು ಬಾರದಿದ್ದರೂ, ತಲೆ ನೋವು, ಸ್ನಾಯು ನೋವು, ತಲೆ ಸುತ್ತುವಿಕೆ, ಸ್ಮರಣೆ ಸಮಸ್ಯೆ ಇರುತ್ತದೆ. ಇದು ಅಪರೂಪದ ಪ್ರಕರಣದಲ್ಲಿ ನರ ಸಮಸ್ಯೆ ಮತ್ತು ಸಾವಿಗೂ ಕಾರಣವಾಗುತ್ತದೆ.

"ಜನರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡುವುದು ಅವಶ್ಯಕವಾಗಿದೆ. ನೀರು ನಿಲ್ಲದಂತೆ ಮುನ್ನಚ್ಚರಿಕೆ ವಹಿಸುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅವಕಾಶ ಮಾಡಿಕೊಡಬಾರದು. ಸೊಳ್ಳೆಗಳ ನಿರ್ಮೂಲನೆಯ ಕುರಿತು ಜನರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು" ಎಂದು ಸಚಿವೆ ಜಾರ್ಜ್‌ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಕ್ಕಳಲ್ಲಿ ಅಪರೂಪದ ಮಿದುಳಿನ ರೋಗ ಹರಡುತ್ತಿರುವ ಬಸವನ ಹುಳು; ಸಂಶೋಧನೆಯಲ್ಲಿ ಬಹಿರಂಗ

ABOUT THE AUTHOR

...view details