ETV Bharat / health

ವಿಶ್ವ ಯುನಾನಿ ವೈದ್ಯಕೀಯ ದಿನ: ಆಧುನಿಕ ಯುಗದಲ್ಲಿ ಹೆಚ್ಚಿದ ಪ್ರಾಚೀನ ಚಿಕಿತ್ಸಾ ವಿಧಾನದ ಪ್ರಾಮುಖ್ಯತೆ- ವೈದ್ಯರ ಅಭಿಮತ - WORLD UNANI MEDICINE DAY

'ಸಮಗ್ರ ಆರೋಗ್ಯ ಪರಿಹಾರಗಳಿಗಾಗಿ ಯುನಾನಿ ಔಷಧದಲ್ಲಿ ನಾವೀನ್ಯತೆ' ಎಂಬುದು ಈ ವರ್ಷದ ಧ್ಯೇಯ ವಾಕ್ಯದೊಂದಿಗೆ ಇಂದು ವಿಶ್ವ ಯುನಾನಿ ವೈದ್ಯಕೀಯ ದಿನ ಆಚರಿಸಲಾಗುತ್ತಿದೆ.

WORLD UNANI MEDICINE DAY  MINISTRY OF AYUSH  ವಿಶ್ವ ಯುನಾನಿ ವೈದ್ಯಕೀಯ ದಿನ  UNANI MEDICINE
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Health Team

Published : Feb 11, 2025, 3:09 PM IST

ಶ್ರೀನಗರ: ಇಂದು ವಿಶ್ವ ಯುನಾನಿ ವೈದ್ಯಕೀಯ ದಿನ ಆಚರಿಸಲಾಗುತ್ತಿದೆ. 'ಸಮಗ್ರ ಆರೋಗ್ಯ ಪರಿಹಾರಗಳಿಗಾಗಿ ಯುನಾನಿ ಔಷಧದಲ್ಲಿ ನಾವೀನ್ಯತೆ' ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ವಿಶ್ವ ಯುನಾನಿ ದಿನದ ಸಂದರ್ಭದಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ಹಲವಾರು ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಯುನಾನಿ ಔಷಧದ ಮಹತ್ವ ಮತ್ತು ಪರಿಣಾಮಕಾರಿತ್ವದ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ.

ಕಳೆದ ಕೆಲವು ವರ್ಷಗಳನ್ನು ನಾವು ಗಮನಿಸಿದರೆ ಜನರು ಮತ್ತೆ ಪ್ರಾಚೀನ ಚಿಕಿತ್ಸಾ ವಿಧಾನದತ್ತ ಆಕರ್ಷಿತರಾಗುತ್ತಿದ್ದಾರೆ. ಮೂಳೆ, ಕೀಲು ನೋವು, ಹೊಟ್ಟೆ, ಚರ್ಮ ರೋಗಗಳು ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಯುನಾನಿ ಔಷಧವನ್ನು ಅಳವಡಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದಾರೆ. ವೈದ್ಯಕೀಯ ಕ್ಷೇತ್ರವು ಅಸಾಧಾರಣ ಪ್ರಗತಿಯನ್ನು ಸಾಧಿಸಿದೆ ಹಾಗೂ ಹೆಚ್ಚಿನ ರೋಗಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿಸಿರುವ ಪ್ರಸ್ತುತ ಆಧುನಿಕ ಯುಗದಲ್ಲಿ ಪ್ರಾಚೀನ ಚಿಕಿತ್ಸಾ ವಿಧಾನವು ಇನ್ನೂ ಅದರ ಪ್ರಾಮುಖ್ಯತೆ ಉಳಿಸಿಕೊಂಡಿದೆ.

ಆಯುಷ್ ಘಟಕಗಳ ಸ್ಥಾಪನೆ : ಶಾಲಾ ಟೆಂಗ್‌ನ ಸರ್ಕಾರಿ ಯುನಾನಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಫಾರೂಕ್ ಮುಹಮ್ಮದ್ ಅಹ್ಮದ್ ನಕ್ಷ್ಬಂದಿ ಪ್ರತಿಕ್ರಿಯಿಸಿ, ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಕೊರೊನಾ ಸಾಂಕ್ರಾಮಿಕ ರೋಗ ಹರಡಿದ ನಂತರ, ಜನರು ಪ್ರಾಚೀನ ಚಿಕಿತ್ಸಾ ವಿಧಾನಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪ್ರಾಚೀನ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತವು ವಿಶ್ವದ ಇತರ ದೇಶಗಳಿಗಿಂತ ಮುಂದಿದೆ. ಹೊಸ ತಂತ್ರಗಳನ್ನು ಪರಿಚಯಿಸುವ ಮೂಲಕ ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಆಸ್ಪತ್ರೆಗಳಲ್ಲಿ ಆಯುಷ್ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ನಾವು ಮತ್ತೊಂದು ಬದಿಯನ್ನು ಯೋಚಿಸುವುದಾದರೆ, ಔಷಧಿಗಳನ್ನು ತಯಾರಿಸಲು ಬಳಸುವ ಸಸ್ಯಗಳು ಹಾಗೂ ಗಿಡಮೂಲಿಕೆಗಳು ಅಪರೂಪವಾಗುತ್ತಿವೆ ಮತ್ತು ಅಳಿವಿನಂಚಿನಲ್ಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಔಷಧಿಗಳಿಗಾಗಿ ಬಳಸುವ ಸಸ್ಯಗಳಲ್ಲಿ ಶೇ. 90ರಷ್ಟು ಅಳಿವಿನಂಚಿನಲ್ಲಿವೆ ಎಂದು ತಜ್ಞರು ತಿಳಿಸುತ್ತಾರೆ. ಅರಣ್ಯ ಪ್ರದೇಶಗಳಲ್ಲಿ 5,000 ಸಸ್ಯ ಪ್ರಭೇದಗಳು ಕಂಡುಬರುತ್ತವೆ. ಅವುಗಳಲ್ಲಿ 500 ಔಷಧಿಗಳಿಗಾಗಿ ಬಳಸಲ್ಪಡುತ್ತವೆ ಹಾಗೂ ಈ 500ರಲ್ಲಿ 300 ಸಸ್ಯಗಳು ಅತ್ಯಂತ ಮಹತ್ವದ್ದಾಗಿವೆ. ಏಕೆಂದರೆ ಅವುಗಳಿಂದ ಕ್ಯಾನ್ಸರ್ ಸೇರಿದಂತೆ ರೋಗಗಳಿಗೆ ಔಷಧಿಗಳನ್ನು ತಯಾರಿಸಲಾಗುತ್ತದೆ ಎಂದು ವಿವರಿಸಿದರು.

ಅಳಿವಿನಂಚಿನಲ್ಲಿ ಶೇ.90ರಷ್ಟು ಸಸ್ಯಗಳು : ಆಯುಷ್ ಇಲಾಖೆಯ ತಾಂತ್ರಿಕ ಅಧಿಕಾರಿ ಡಾ.ವಹೀದ್ ಮಾತನಾಡಿ, 150 ಸಸ್ಯಗಳು ಅತ್ಯಂತ ಮುಖ್ಯವಾಗಿದ್ದು, ಅವುಗಳಲ್ಲಿ 25 ಅಪರೂಪ. ಎತ್ತರದ ಪ್ರದೇಶಗಳಲ್ಲಿ ಕಂಡುಬರುವ 90 ಪ್ರತಿಶತ ಸಸ್ಯಗಳು ಅಳಿವಿನಂಚಿನಲ್ಲಿವೆ. ಇವುಗಳಲ್ಲಿ ಅಮೂಲ್ಯವಾದ ಅಲೋಪತಿ (ಇಂಗ್ಲಿಷ್) ಔಷಧಿಗಳನ್ನು ತಯಾರಿಸಲು ಬಳಸಲಾಗುವ ಅನೇಕ ಸಸ್ಯಗಳು ಸೇರಿವೆ. ಅಪರೂಪದ ಗಿಡಮೂಲಿಕೆಗಳು ಹಾಗೂ ಸಸ್ಯಗಳನ್ನು ಉಳಿಸಲು, ಜಮ್ಮು ಮತ್ತು ಕಾಶ್ಮೀರದ ದೋಡಾ, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳಲ್ಲಿ 500 ಕನಾಲ್ ಭೂಮಿಯನ್ನು ಒಳಗೊಂಡ ನರ್ಸರಿಗಳನ್ನು ಸ್ಥಾಪಿಸಲಾಗಿದೆ. ಇದು ಭಾರತದ ಮೊದಲ ದೊಡ್ಡ ನರ್ಸರಿ. ಇದರೊಂದಿಗೆ ಕೆಲವು ಅಪರೂಪದ ಹಾಗೂ ಪ್ರಮುಖ ಸಸ್ಯಗಳನ್ನು ಉಳಿಸಲು ಅರಣ್ಯ ಇಲಾಖೆ ಈಗ ಅವುಗಳನ್ನು ಕಡಿಯುವುದನ್ನು ನಿಷೇಧಿಸಿದೆ ಎಂದು ಮಾಹಿತಿ ನೀಡಿದರು.

ಯುನಾನಿ ಔಷಧದ ಬಗ್ಗೆ ಜಾಗೃತಿ : ಯುನಾನಿ ವೈದ್ಯರು, ವಿದ್ವಾಂಸರು ಹಾಗೂ ದಾರ್ಶನಿಕ ಹಕೀಮ್ ಅಜ್ಮಲ್ ಖಾನ್ ಅವರ ಜನ್ಮ ವಾರ್ಷಿಕೋತ್ಸವ ಗುರುತಿಸಲು ಫೆಬ್ರವರಿ 11 ರಂದು ವಿಶ್ವ ಯುನಾನಿ ದಿನವನ್ನು ಆಚರಿಸಲಾಗುತ್ತದೆ. ಅವರನ್ನು ಭಾರತದಲ್ಲಿ ಯುನಾನಿ ಔಷಧದ ಪ್ರವರ್ತಕ ಎಂದು ಪರಿಗಣಿಸಲಾಗಿದೆ. ವಿಶ್ವದ ಅತ್ಯಂತ ಹಳೆಯ ಆರೋಗ್ಯ ವ್ಯವಸ್ಥೆಗಳಲ್ಲಿ ಒಂದಾದ ಯುನಾನಿ ಔಷಧದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಲೇಖನ: ಪರ್ವೇಜ್ ಉದ್ ದಿನ್

ಇದನ್ನೂ ಓದಿ: ಚರ್ಮಗಂಟು ರೋಗಕ್ಕೆ ವಿಶ್ವದಲ್ಲೇ ಮೊದಲ ಲಸಿಕೆ ಆವಿಷ್ಕರಿಸಿದ ಭಾರತ; 'ದಿವಾ ಮಾರ್ಕರ್​ ಲಸಿಕೆ'ಗೆ ಪರವಾನಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.