ಕರ್ನಾಟಕ

karnataka

ETV Bharat / health

ದೇಹದ ತೂಕ ಕಡಿಮೆ ಮಾಡಲು ದಿನವೂ ಕಸರತ್ತು ನಡೆಸಿದ್ದೀರಾ?​​: ಹೀಗೆ ಮಾಡಿದರೆ ವಾರದಲ್ಲೇ ವೇಟ್​ ಲಾಸ್​ ಪಕ್ಕಾ! - Weight Loss Tips

ದೇಹದ ತೂಕ ಕಡಿಮೆ ಮಾಡಿಕೊಳ್ಳಲು ತಜ್ಞರು ಕೆಲವು ಸುಲಭವಾದ ಟಿಪ್ಸ್​ಗಳನ್ನು ನೀಡಿದ್ದು, ಇದನ್ನು ಅನುಸರಿಸುವುದರಿಂದ ಒಂದೇ ವಾರದಲ್ಲಿ ತೂಕ ಕಡಿಮೆ ಮಾಡಿಕೊಳ್ಳಬುಹುದು ಎಂದು ಹೇಳುತ್ತಾರೆ.

ದೇಹದ ತೂಕ ಇಳಿಸುವುದು ಹೇಗೆ
ದೇಹದ ತೂಕ ಇಳಿಸುವುದು ಹೇಗೆ (ETV Bharat)

By ETV Bharat Karnataka Team

Published : Jun 12, 2024, 11:26 AM IST

Updated : Jun 12, 2024, 12:53 PM IST

Weight Loss Tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೇಗಾದರೂ ಮಾಡಿ ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಜಿಮ್‌ಗೆ ಹೋಗಿ ಕಸರತ್ತು ನಡೆಸುತ್ತಾರೆ. ಡಯಟ್​ ಪ್ಲಾನ್​ಗಳನ್ನು ಹಾಕಿಕೊಂಡು ಆಹಾರ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಕೆಲವರು ಎಷ್ಟೇ ಪ್ರಯತ್ನ ಮಾಡಿದರೂ ದೇಹದ ತೂಕದಲ್ಲಿ ಯಾವುದೇ ಬದಲಾವಣೆಗಳು ಕಾಣಿಸಿಕೊಳ್ಳುವುದಿಲ್ಲ.

ಇದಕ್ಕೆ ಪ್ರಮುಖ ಕಾರಣವೆಂದರೆ ಅರಿವಿನ ಕೊರತೆ. ಬಹುತೇಕ ಜನರಿಗೆ ಎಷ್ಟು ಸಮಯದಲ್ಲಿ ಎಷ್ಟು ಕೆ.ಜಿ ತೂಕವನ್ನು ಕಳೆದುಕೊಳ್ಳಬೇಕು ಮತ್ತು ಯಾವೆಲ್ಲ ಆಹಾರ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ ಎಂಬುದರ ಬಗ್ಗೆ ತಿಳಿಯದೇ ಇರುವುದರಿಂದ ಎಷ್ಟೇ ಪ್ರಯತ್ನ ಪಟ್ಟರೂ ಫಲಿತಾಂಶ ಕಾಣುವುದಿಲ್ಲ. ಹಾಗಾಗಿ ಈ ವಿಧಾನವನ್ನು ಅನುಸರಿಸಿ ವಾರದಲ್ಲಿ ತೂಕ ಇಳಿಸಿಕೊಳ್ಳಬಹುದು ಎಂದು ತಜ್ಞರು ತಿಳಿಸಿದ್ದಾರೆ ಹಾಗಾದ್ರೆ ಆ ವಿಧಾನಗಳು ಯಾವವು ಎಂದು ಇಲ್ಲಿವೆ.

  • ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ವ್ಯಾಯಾಮದಿಂದ ಮಾತ್ರ ತೂಕವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ವ್ಯಾಯಾಮದ ಜತೆಗೆ ಆಹಾರ ಪದ್ಧತಿಯಲ್ಲಿಯೂ ಬದಲಾವಣೆ ಮಾಡಿಕೊಳ್ಳಲು ಸೂಚಿಸುತ್ತಾರೆ.
  • ಒಮ್ಮೆಲೆ ಆಹಾರ ಕ್ರಮದಲ್ಲಿ ಬದಲಾವಣೆ ಅಥವಾ ಕಡಿಮೆ ಸೇವನೆ ಮಾಡಿದರೆ ಅನಾರೋಗ್ಯ ಸಮಸ್ಯೆಗಳು ಕಾಡುತ್ತವೆ ಎನ್ನುತ್ತಾರೆ ವೈದ್ಯರು. ಏಕೆಂದರೆ ನಮ್ಮ ದೇಹವು ಯಾವುದೇ ಆಹಾರ ಕ್ರಮವನ್ನು ಬದಲಾಯಿಸಿದರೇ ಅದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ನಿಧಾನವಾಗಿ ತೂಕವನ್ನು ಕಳೆದುಕೊಳ್ಳಲು ಆಹಾರ ಪದ್ಧತಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.
  • ವಿಶೇಷವಾಗಿ ತೂಕ ನಷ್ಟಕ್ಕೆ ಕಡಿಮೆ ಕ್ಯಾಲೋರಿ ಆಹಾರ ಪದಾರ್ಥ ಸೇವಿಸಲು ತಜ್ಞರು ಸೂಚಿಸುತ್ತಾರೆ. ಹಾಗೆಯೇ ನೀವು ತೆಗೆದುಕೊಳ್ಳುವ ಆಹಾರವೂ ಪೌಷ್ಟಿಕಾಂಶಗಳಿಂದ ಕೂಡಿದೆಯೇ ಎಂದು ತಿಳಿದು ಬಳಿಕ ಸೇವನೆ ಮಾಡುವುದು ಸೂಕ್ತ. ಏಕೆಂದರೇ ಸರಿಯಾದ ಪೌಷ್ಟಿಕಾಂಶ ಇಲ್ಲದಿದ್ದರೆ ದೇಹವನ್ನು ದಂಡಿಸಲು ಬೇಕಾದ ಪ್ರಮಾಣದ ಶಕ್ತಿ ಸಿಗುವುದಿಲ್ಲ.
  • ಸಂಸ್ಕರಿಸಿದ ಮತ್ತು ಜಂಕ್ ಫುಡ್ ನಿಂದ ದೂರವಿರುವುದು ಸೂಕ್ತ. ಏಕೆಂದರೆ ಇವುಗಳಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಇವುಗಳನ್ನು ತೆಗೆದುಕೊಳ್ಳಬೇಡಿ ಎಂದು ತಜ್ಞರು ಹೇಳುತ್ತಾರೆ.
  • 2019 ರಲ್ಲಿ 'ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್' ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಹೆಚ್ಚು ಜಂಕ್ ಫುಡ್ ತಿನ್ನುವುದರಿಂದ ದೇಹದ ತೂಕ ಅಧಿಕವಾಗುವ ಸಾಧ್ಯತೆ ಹೆಚ್ಚು ಎಂದು ಈ ಸಂಶೋಧನೆಯಲ್ಲಿ ಭಾಗವಹಿಸಿದ್ದ ಇಂಗ್ಲೆಂಡ್​​ನ ಯೂನಿವರ್ಸಿಟಿ ಆಫ್ ರೀಡಿಂಗ್‌ನ ಪ್ರಮುಖ ಪೌಷ್ಟಿಕತಜ್ಞ ಡಾನ್ ಲೂಡ್ಸ್ ಹೇಳಿದ್ದಾರೆ.
  • ಕೇವಲ ಆಹಾರವನ್ನು ಆಯ್ಕೆಮಾಡುವುದರ ಬಗ್ಗೆ ಮಾತ್ರವಲ್ಲ, ಅದನ್ನು ತಿನ್ನುವ ಮೊದಲು ಹೇಗೆ ಬೇಯಿಸಬೇಕು ಎಂಬುದರ ಬಗ್ಗೆಯೂ ತಿಳಿದಿರಬೇಕು. ಸಾಧ್ಯವಾದಷ್ಟು ಗ್ರಿಲ್ಲಿಂಗ್​, ಸ್ಟೀಮಿಂಗ್​, ಬೆಕಿಂಗ್​ ಆಹಾರ ಸೇವಿಸಲು ಪ್ರಯತ್ನಿಸಿ. ಅಡುಗೆಯಲ್ಲಿ ಹೆಚ್ಚು ಎಣ್ಣೆಯನ್ನು ಬಳಸದಂತೆ ನೋಡಿಕೊಳ್ಳಿ.
  • ತಾಜಾ ತರಕಾರಿಗಳು ಮತ್ತು ಹಣ್ಣುಗಳನ್ನು ದೈನಂದಿನ ಆಹಾರದೊಂದಿಗೆ ಸೇವಿಸುವುದು ಉತ್ತಮ. ಕಾರ್ಬೋಹೈಡ್ರೇಟ್​ ಕಡಿಮೆ ಮಾಡಬೇಕು. ಅಂದರೆ ಒಂದು ಕಪ್​ ಅನ್ನದ ಜೊತೆಗೆ ಎರಡು ಕಪ್​ ನಷ್ಟು ತರಕಾರಿ ಪಲ್ಯ ಸೇವನೆ ಮಾಡಬೇಕು. ಜತೆಗೆ ಸಲಾಡ್‌ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.
  • ರಾಗಿ, ಜೋಳ ಬೆಳೆಗಳಂತಹ ಧಾನ್ಯಗಳನ್ನು ಬಳಸಿ ಮಾಡಿದಂತಹ ಆಹಾರಗಳನ್ನು ಸೇವನೆ ಮಾಡಬೇಕು. ಇದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಡೆಯುವುದು ಮಾತ್ರವಲ್ಲದೇ ತೂಕ ಕಡಿಮೆ ಮಾಡಲು ಸಹಾಯಕ ವಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
  • ಜಿಮ್​ಗೆ ಹೋಗಲು ಬಯಸಿದರೇ ಮೊದಲ ದಿನವೇ ಗಂಟೆಗಟ್ಟಲೆ ಜಿಮ್​ನಲ್ಲಿ ಕಸರತ್ತು ನಡೆಸದಿರಿ. ಹಂತ ಹಂತವಾಗಿ ದೇಹವನ್ನು ದಂಡಿಸುವುದು ಸೂಕ್ತ.
  • ಹಾಗೆ ಪ್ರತಿದಿನ ನಿಯಮಿತವಾಗಿ ನಡೆಯುವುದು ಅಭ್ಯಾಸ ಮಾಡಿಕೊಳ್ಳಿ. ಇದು ದೇಹದ ತೂಕ ಕಡಿಮೆ ಮಾಡುವುದರಲ್ಲಿ ಸಹಕಾರಿಯಾಗಲಿದೆ ಎಂದು ವೈದ್ಯರು ತಿಳಿಸುತ್ತಾರೆ.
  • ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಅನುಸರಿಸಿದರೆ ಕನಿಷ್ಠ ವಾರದಲ್ಲಿ ಅರ್ಧಕಿಲೋದಷ್ಟು ತೂಕ ಇಳಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.
Last Updated : Jun 12, 2024, 12:53 PM IST

ABOUT THE AUTHOR

...view details