ನವದೆಹಲಿ: ಮಿದುಳಿನಲ್ಲಿ ರಾಸಾಯನಿಕ ಬಿಡುಗಡೆ ಮತ್ತು ಮನಸ್ಥಿತಿ ಹಾಗೂ ಇತರ ಮಿದುಳಿನ ಕಾರ್ಯಾಚರಣೆಗೆ ವಿಟಮಿನ್ ಬಿ 12 ಪ್ರಮುಖ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೇ, ಕೆಂಪು ರಕ್ತ ಕೋಶಗಳ ರೂಪುಗೊಳ್ಳುವಿಕೆ. ಚಯಾಪಚಯ ಮತ್ತು ನರ ವ್ಯವಸ್ಥೆ ಹಾಗೂ ಡಿಎನ್ಎ ಉತ್ಪಾದನೆಯಲ್ಲೂ ಇದು ನಿರ್ಣಾಯಕ ಪಾತ್ರ ಹೊಂದಿದೆ.
ವಿಟಮಿನ್ ಬಿ 12 ಕೊರತೆ ಸಮಸ್ಯೆ: ವಿಚಿತ್ರವಾದ ಸಂವೇದನೆಗಳು, ಮರಗಟ್ಟುವಿಕೆ, ಕೈ - ಕಾಲು ಅಥವಾ ಪಾದಗಳಲ್ಲಿ ಜುಮ್ಮೆನ್ನಿಸುವುದು, ನಡೆಯಲು ತೊಂದರೆ (ದಿಗ್ಭ್ರಮೆಗೊಳಿಸುವಿಕೆ, ಸಮತೋಲನ ಸಮಸ್ಯೆಗಳು), ರಕ್ತಹೀನತೆ, ಆಲೋಚನೆ ಮತ್ತು ಅರಿವಿನ ತೊಂದರೆಗಳು, ನೆನಪಿನ ಶಕ್ತಿ ನಷ್ಟ, ದೌರ್ಬಲ್ಯ ಅಥವಾ ಆಯಾಸದಂತಹ ಸಮಸ್ಯೆ ಕಾಡುತ್ತದೆ.
ಈ ಕುರಿತು ಮಾತನಾಡಿರುವ ಸರ್ ಗಂಗಾ ರಾಮ್ ಆಸ್ಪತ್ರೆಯ ನರರೋಗ ತಜ್ಞರಾಗಿರುವ ಡಾ ಅಂಶು ರೋಹ್ಟಗಿ, ವಿಟಮಿನ್ ಬಿ 12 ಮತ್ತು ಇತರ ಬಿ ವಿಟಮಿನ್ಗಳು ಮಿದುಳಿನ ರಾಸಾಯನಿಕ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಇದು ಮನಸ್ಥಿತಿ ಮೇಲೆ ಮತ್ತು ಮಿದುಳಿನ ಕಾರ್ಯಾಚರಣೆ ಮೇಲೆ ಪ್ರಭಾವ ಬೀರುತ್ತದೆ. ಕಡಿಮೆ ಬಿ 12 ಮಟ್ಟ ಹಾಗೇ ವಿಟಮಿನ್ ಬಿ 6 ಖಿನ್ನತೆಯೊಂದಿಗೆ ಸಂಬಂಧಿಸಿದೆ ಎಂದಿದ್ದಾರೆ.
ಕೊರತೆಗೆ ಕಾರಣ: ಕಳಪೆ ಆಹಾರ ಅಥವಾ ವಿಟಮಿನ್ ಗ್ರಹಿಕೆಯನ್ನು ವ್ಯತ್ಯಾಸ. ಈ ಹಿನ್ನೆಲೆ ದೇಹಕ್ಕೆ ಅಗತ್ಯವಾದ ವಿಟಮಿನ್ ಬಿ 12 ಮಟ್ಟವನ್ನು ಸೇವಿಸುವ ಮೂಲಕ ಮನಸ್ಥಿತಿ ನಿಯಂತ್ರಣ ಜೊತೆ ಒಟ್ಟಾರೆ ಆರೋಗ್ಯ ಕಾಪಾಡಬಹುದಾಗಿದೆ ಎಂದಿದ್ದಾರೆ.
ಈ ಆಹಾರದಲ್ಲಿದೆ ವಿಟಮಿನ್ ಬಿ 12: ಫೌಲ್ಟ್ರಿ ಆಹಾರ, ಮಾಂಸ, ಮೀನು ಮತ್ತು ಡೈರಿ ಉತ್ಪನ್ನದಲ್ಲಿ ಲಭ್ಯವಾಗುತ್ತದೆ. ಓರಲ್ ಪೂರಕ, ಇಂಜೆಕ್ಷನ್ ಅಥವಾ ಮೂಗಿನ ಸ್ಪ್ರೇ ಕೂಡ ಲಭ್ಯವಿದೆ.
ಸಸ್ಯಹಾರಿಗಳು ಅಥವಾ ವೆಗಾನ್ ಆಹಾರ ಸೇವನೆ ಮೂಡುವವರಲ್ಲಿ ಇದರ ಕೊರತೆ ಹೆಚ್ಚು ಕಾಡುತ್ತದೆ. ಕಾರಣ ಸಸ್ಯಗಳಲ್ಲಿ ವಿಟಮಿನ್ ಬಿ 12 ಇರುವುದಿಲ್ಲ. ವಯಸ್ಸಾದವರು ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಜೀರ್ಣಾಂಗವ್ಯೂಹದ ಪರಿಸ್ಥಿತಿ ಹೊಂದಿರುವ ಜನರು ಸಹ ವಿಟಮಿನ್ ಬಿ 12 ಕೊರತೆಗೆ ಒಳಗಾಗುತ್ತಾರೆ.
ವಿಟಮಿನ್ ಬಿ 12 ಕೆಲಸ: ವಿಟಮಿನ್ ಬಿ 12 ಮಿದುಳಿನಲ್ಲಿ ಸೆರೊಟೊನಿನ್ನಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡಿ ಮನಸ್ಥಿತಿ ನಿಯಂತ್ರಿಸುತ್ತದೆ. ಬಿ -12 ಮಟ್ಟ ಕಡಿಮೆಯಾದರೆ, ಈ ರಾಸಾಯನಿಕ ಅಸಮತೋಲನ ಕಾಡುತ್ತದೆ. ಇದು ಮೂಡ್ ಸ್ವಿಂಗ್, ಕಿರಿಕಿರರಿ ಹಾಗೂ ಖಿನ್ನತೆಗೆ ಕಾರಣವಾಗುತ್ತದೆ ಎಂದು ಬೆಂಗಳೂರಿನ ಬನ್ನೇರುಘಟ್ಟದ ಫೋರ್ಟಿಸ್ ಆಸ್ಪತ್ರೆಯ ನರರೋಗ ತಜ್ಞರಾದ ಡಾ ಗುರುಪ್ರಸಾದ್ ಹೊಸುರ್ಕರ್ ತಿಳಿಸಿದ್ದಾರೆ.
ಈ ವಿಟಮಿನ್ 12 ಕೊರತೆಯಿಂದ ಉಂಟಾಗುವ ಮನಸ್ಥಿತಿ ಬದಲಾವಣೆಯು ಪುರಷರು ಮತ್ತು ಮಹಿಳೆಯರಲ್ಲಿ ಕಾಡಬಹುದು. ಬಿ- 12 ಮತ್ತು ಖಿನ್ನತೆ ನಡುವಿನ ಸಂಬಂಧ ಕುರಿತು ಅಧ್ಯಯನಗಳು ಸಾಗಿದೆ. ಕೆಲವು ಅಧ್ಯಯನಗಳು ಬಿ - 12 ಪೂರಕಗಳು ಮನಸ್ಥಿತಿ ಸುಧಾರಣೆಗೆ ಸಹಾಯಕವಾಗಲಿದೆ ಎಂದು ತೋರಿಸಿದೆ.
ಮನಸ್ಥಿತಿ ಬದಲಾವಣೆ ಗಂಭೀರ ಸಮಸ್ಯೆಯಾಗಿದೆ. ಇದು ಅನೇಕ ಕಾರಣದಿಂದ ಕೂಡ ಉಂಟಾಗುತ್ತದೆ. ಈ ಹಿನ್ನೆಲೆ ವೈದ್ಯರ ಸಮಾಲೋಚನೆ ನಡೆಸಿ, ಇದಕ್ಕೆ ನಿಖರ ಕಾರಣ ಏನು ಎಂಬುದು ತಿಳಿಯಬೇಕು. ಇದರಲ್ಲಿ ಬಿ12 ಕೊರತೆ ಕೂಡ ಅಡಗಿರುತ್ತದೆ ಎನ್ನುತ್ತಾರೆ ವೈದ್ಯರು. (ಐಎಎನ್ಎಸ್)
ಇದನ್ನೂ ಓದಿ: ಹೊಟ್ಟೆಯ ಬೊಬ್ಬು ಕರಗಿಸಬೇಕಾ?, ಚಪಾತಿ ಬದಲು ಜೋಳದ ರೊಟ್ಟಿ ತಿಂದು ನೋಡಿ!