ETV Bharat / health

ಹತ್ತೇ ನಿಮಿಷದಲ್ಲಿ ರೆಡಿ ಈ ರುಚಿ ರಸಂ: ಇದರ ಟೇಸ್ಟ್​​​ ಹೇಗಿದೆ ಅಂದರೆ ಬಾಯಲ್ಲಿ ನೀರೂರದಿದ್ದರೆ ಕೇಳಿ! - Hasi Saru Recipe - HASI SARU RECIPE

ಹಸಿ ನೀರುಳ್ಳಿ ಚೂರುಗಳೊಂದಿಗೆ, ಹುಳಿ ರುಚಿಯ ಈ ಸಾರು ಬಿಸಿ ಅನ್ನದ ಜೊತೆಗೆ ಬೇಳೆ ಪದಾರ್ಥ ಅಥವಾ ಇನ್ನಾವುದೇ ಖಾದ್ಯವನ್ನು ಬೆರೆಸಿ ತಿನ್ನಲು ತುಂಬಾ ರುಚಿಯಾಗಿರುತ್ತದೆ.

Hasi Saru Recipe
ಹಸಿ ಸಾರು ರೆಸಿಪಿ (ETV Bharat)
author img

By ETV Bharat Karnataka Team

Published : Jul 6, 2024, 9:50 PM IST

ಅವಸರದ ಈ ಆಧುನಿಕ ಯುಗದಲ್ಲಿ ಉದ್ಯೋಗಸ್ಥರೆಲ್ಲಾ ಇನ್​ಸ್ಟ್ಯಾಂಟ್​ ಆಹಾರವನ್ನೇ ನೆಚ್ಚಿಕೊಂಡಿರುತ್ತಾರೆ. ಕ್ಷಣ ಮಾತ್ರದಲ್ಲಿ ಆಹಾರ ತಯಾರಾಗಬೇಕೆನ್ನುವುದನ್ನೇ ಹೆಚ್ಚಿನವರು ಬಯಸುತ್ತಾರೆ. ಮಾರ್ಕೆಟ್​ ಅಲ್ಲಿ ದೊರೆಯುವ ಇನ್​ಸ್ಟ್ಯಾಂಟ್​ ಆಹಾರದ ಮೊರೆ ಹೋಗದೇ, ನೀವೇ ಮನೆಯಲ್ಲಿ ಹತ್ತೇ ನಿಮಿಷದಲ್ಲಿ ಈ ಸಾರು ತಯಾರಿಸಿಕೊಂಡು, ರುಚಿಯಾದ ಮನೆ ಆಹಾರವನ್ನು ಸವಿಯಬಹುದು. ಅದ್ಯಾವ ಸಾರು ಅಂತೀರಾ? ಅದೇ ಹಸಿರು ಸಾರು. ಇದು ತ್ವರಿತವಾಗಿ ಮಾಡಬಹುದಾದ ರೆಸಿಪಿಗಳಲ್ಲಿ ಒಂದು. ಮಸಾಲೆಗಳ ಅಗತ್ಯವಿಲ್ಲದೇ ಮತ್ತು ಹುರಿಯುವ ಕೆಲಸವಿಲ್ಲದೇ ಯಾರು ಬೇಕಾದರೂ ಹಸಿ ಸಾರನ್ನು ಚಿಟಿಕೆಯಲ್ಲಿ ಸರಳವಾಗಿ ಮಾಡಬಹುದು.

ಅನೇಕ ಮಂದಿಗೆ ಕರಿ ಜೊತೆಗೆ ಈ ಹಸಿ ಸಾರು ಕಡ್ಡಾಯವಾಗಿ ಇರಬೇಕು. ಹಸಿ ನೀರುಳ್ಳಿ ಚೂರುಗಳೊಂದಿಗೆ, ಹುಳಿ ರುಚಿಯ ಈ ಸಾರು ಬಿಸಿ ಅನ್ನದ ಜೊತೆಗೆ ಬೇಳೆ ಪದಾರ್ಥ ಅಥವಾ ಇನ್ನಾವುದೇ ಖಾದ್ಯವನ್ನು ಬೆರೆಸಿ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಅಷ್ಟೇ ಏಕೆ, ಕೆಲವರು ಮನೆಯಲ್ಲಿ ಎಷ್ಟೇ ತರದ ಪದಾರ್ಥಗಳನ್ನು ಮಾಡಿದರೂ ಚಿಕ್ಕ ಬಟ್ಟಲಿನಲ್ಲಿ ಈ ಹಸಿ ಸಾರನ್ನು ಮಾಡಿಯೇ ಮಾಡುತ್ತಾರೆ. ಅದ್ಭುತವಾದ ರುಚಿಕರವಾದ ಹಸಿ ಸಾರನ್ನು ಅತ್ಯಂತ ಸುಲಭವಾಗಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಹಸಿ ಸಾರು ತಯಾರಿಸಲು ಬೇಕಾಗುವ ಪದಾರ್ಥಗಳು:

  • ಹಸಿರು ಮೆಣಸಿನಕಾಯಿ - 5
  • ಸ್ವಲ್ಪ ಕೊತ್ತಂಬರಿ ಸೊಪ್ಪು
  • ಹುಣಸೆಹಣ್ಣು - 50 ಗ್ರಾಂ
  • 1/2 ಟೀಸ್ಪೂನ್ - ಅರಿಶಿನ ಪುಡಿ
  • ಜೀರಿಗೆ - ಟೀಚಮಚ
  • ಕರಿಬೇವಿನ ಎಲೆಗಳು - ನಾಲ್ಕರಿಂದ ಐದು ಚಿಗುರುಗಳು
  • ಸಣ್ಣ ಟೊಮೆಟೊ
  • ಈರುಳ್ಳಿ - ಎರಡು
  • ಒಣ ಮೆಣಸು - 3
  • ಉಪ್ಪು - ಸ್ವಲ್ಪ

ಹಸಿ ಸಾರು ತಯಾರಿಸುವ ವಿಧಾನ:

  • ಮೊದಲು 5 ಹಸಿರು ಮೆಣಸಿನಕಾಯಿಯನ್ನು ಸ್ಟ್ರೈನರ್ ಸಹಾಯದಿಂದ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಹೀಗೆ ಮಾಡುವುದರಿಂದ ಸಾರು ತುಂಬಾ ರುಚಿಯಾಗಿರುತ್ತದೆ.
  • ನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಣಮೆಣಸು ಮತ್ತು ಒಂದು ಚಮಚ ಜೀರಿಗೆ ಹಾಕಿ ಸುವಾಸನೆ ಬರುವವರೆಗೆ ಹುರಿಯಿರಿ.
  • ಬಿಸಿಯಾಗಿರುವಾಗಲೇ ಈ ಒಣಮೆಣಸು ಮತ್ತು ಜೀರಿಗೆ ಮಿಶ್ರಣವನ್ನು ಪುಡಿ ಮಾಡಿ. ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬುವುದಕ್ಕಿಂತ ಹಸಿಯಾಗಿ ಸೇರಿಸಿದರೆ ರುಚಿ ಹೆಚ್ಚು.
  • ಈಗ ಸಣ್ಣ ಬಟ್ಟಲಿನಲ್ಲಿ ಹುರಿದ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಸ್ಮ್ಯಾಶ್​ ಮಾಡಿ.
  • ಹಾಗೆಯೇ ಹುಣಸೆ ಹಣ್ಣನ್ನು ದೊಡ್ಡ ಬಟ್ಟಲಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಿ.
  • ಅದರ ನಂತರ ನಿಮ್ಮ ರುಚಿಗೆ ತಕ್ಕಂತೆ ಹುಣಸೆ ರಸಕ್ಕೆ ನೀರು ಸೇರಿಸಿ.
  • ನಂತರ ಈ ನೀರಿನಲ್ಲಿ ಸಣ್ಣದಾಗಿ ಕೊಚ್ಚಿದ ಈರುಳ್ಳಿ ಚೂರುಗಳನ್ನು ಸೇರಿಸಿ. ಜೊತೆಗೆ ಕರಿಬೇವಿನ ಎಲೆಗಳು ಮತ್ತು ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ.
  • ನಿಮಗೆ ಬೇಕಾದಲ್ಲಿ ಹಸಿ ಸಾರಿಗೆ ಸಣ್ಣ ಟೊಮೆಟೊ ತುಂಡುಗಳನ್ನು ಕೂಡ ಸೇರಿಸಬಹುದು.
  • ನಂತರ ಅರ್ಧ ಚಮಚ ಅರಿಶಿನ, ಹಸಿರು ಮೆಣಸಿನಕಾಯಿ ಕೊತ್ತಂಬರಿ ಮಿಶ್ರಣ, ಒಣ ಮೆಣಸಿನಕಾಯಿ ಮಿಶ್ರಣವನ್ನು ಸೇರಿಸಿ. ನಿಮ್ಮ ಕೈಗಳಿಂದ ಚೆನ್ನಾಗಿ ಮಿಶ್ರಣ ಮಾಡಿ.
  • ಹಸಿ ಸಾರಿಗೆ ಎಲ್ಲಾ ಪದಾರ್ಥಗಳನ್ನು ಹಾಕಿ ಕೈಯಿಂದ ಚೆನ್ನಾಗಿ ಬೆರೆಸಿ, ಸೂಪ್ ತುಂಬಾ ರುಚಿಯಾಗಿರುತ್ತದೆ.
  • ಬಿಸಿ ಅನ್ನದಲ್ಲಿ ಸುರಿದು ತಿಂದರೆ ಸ್ವರ್ಗಕ್ಕೆ ಮೂರೇ ಗೇಣು! ನೀವೂ ಮನೆಯಲ್ಲಿ ತಯಾರಿಸಿ ನೋಡಿ.

ಇದನ್ನೂ ಓದಿ: ಐದು ನಿಮಿಷದಲ್ಲಿ ರೆಡಿ ಮಾಡಿ ಈ ಮೆಣಸಿನ ಸಾರು​: ಮಳೆಗಾಲದ ಜ್ವರಗಳಿಗೆ ಸೂಪರ್ ಡೂಪರ್​ ಮನೆ ಮದ್ದು! - How to Make Pepper Soup

ETV Bharat Logo

Copyright © 2024 Ushodaya Enterprises Pvt. Ltd., All Rights Reserved.