ETV Bharat / health

ಬಾಯಿ ಚಪ್ಪರಿಸುವ ಚಾಕೊಲೇಟ್​ಗೂ ಒಂದು ದಿನ; ಇದರ ಕುರಿತು ತಿಳಿಯಲೇ ಬೇಕಾದ ಮಾಹಿತಿ ಇದು! - World Chocolate Day

ಚಾಕೊಲೇಟ್​ ಕೇವಲ ರುಚಿ, ಮನವನ್ನು ಮಾತ್ರ ತಣಿಸುವುದಿಲ್ಲ. ಇದು ಆರೋಗ್ಯಕ್ಕೂ ಪ್ರಯೋಜನಕಾರಿ ಗುಣವನ್ನು ಹೊಂದಿದೆ. ಇಂತಿಪ್ಪ ಚಾಕೊಲೇಟ್​ಗೆ ಒಂದು ದಿನ ಇದೆ ಎಂಬುದು ನಿಮಗೆ ಗೊತ್ತಾ? ಇದೀಗ ಆ ಬಗ್ಗೆಯೇ ತಿಳಿಯೋಣ

author img

By ETV Bharat Karnataka Team

Published : Jul 7, 2024, 4:58 AM IST

World Chocolate  Day 2024
ಚಾಕೊಲೇಟ್​ ದಿನ (ಸಂಗ್ರಹ ಚಿತ್ರ)

ಹೈದರಾಬಾದ್​: ಮಕ್ಕಳಿಂದ ವೃದ್ದರವರೆಗೆ ಎಲ್ಲರೂ ಬಾಯಿ ಚಪ್ಪರಿಸುವ ತಿನಿಸುವ ಚಾಕೊಲೇಟ್​. ಈ ಚಾಕೊಲೇಟ್​ ರುಚಿಗೆ ಮನಸೋಲದವರಿಲ್ಲ. ಇಂತಹ ಚಾಕೊಲೇಟ್​ಗಾಗಿ ಒಂದು ದಿನವನ್ನು ಮೀಸಲಿರಿಸಲಾಗಿದೆ. ಅದುವೇ ವಿಶ್ವ ಚಾಕೊಲೇಟ್​ ದಿನ. ಜುಲೈ 7ರಂದು ಎಲ್ಲೆಡೆ ವಿಶ್ವ ಚಾಕೊಲೇಟ್​ ದಿನ ಆಚರಿಸಲಾಗುವುದು. ಈ ಚಾಕೊಲೇಟ್​ ಕೇವಲ ರುಚಿ, ಮನವನ್ನು ಮಾತ್ರ ತಣಿಸುವುದಿಲ್ಲ. ಇದು ಆರೋಗ್ಯ ಪ್ರಯೋಜನಕಾರಿ ಗುಣವನ್ನು ಹೊಂದಿದೆ. ವಿಶ್ವದ ಅತ್ಯತ್ತಮ ತಿನಿಸಲ್ಲಿ ಒಂದಾಗಿದೆ. ಏಳು ಖಂಡಗಳಲ್ಲೂ ಇದು ಜನಪ್ರಿಯತೆ ಪಡೆದಿದೆ. ಇದೆ ಕಾರಣಕ್ಕ ಇದನ್ನು ಮ್ಯಾಜಿಕ್ ಬೀನ್ ಎಂದು ಕರೆಯಲಾಗುತ್ತದೆ.

ವಿಶ್ವ ಚಾಕೋಲೆಟ್​ ದಿನದ ಇತಿಹಾಸ: 1550ರಲ್ಲಿ ಮೊದಲ ಬಾರಿಗೆ ಇದೇ ದಿನ ಯುರೋಪ್​ನಿಂದ ಚಾಕೋಲೆಟ್​ ಅನ್ನು ತರಲಾಗಿತ್ತು. ಇದೇ ಕಾರಣಕ್ಕೆ 2009ರಲ್ಲಿ ವಿಶ್ವ ಚಾಕೋಲೆಟ್​ ದಿನ ಆಚರಿಸಲಾಯಿತು.

ಚಾಕೋಲೆಟ್​ ಹೇಗೆ ಮಾಡುತ್ತಾರೆ?: ಅನೇಕ ಮಂದಿಗಳು ಚಾಕೊಲೇಟ್​ ಅನ್ನು ಹೇಗೆ ತಯಾರಿಸುತ್ತಾರೆ ಎಂದು ತಿಳಿದಿಲ್ಲ. ಇದನ್ನು ಕೊಕೊ ಬೀನ್​ ಸಮಸ್ಕರಿಸಿ, ಅವುಗಳ ಶೆಲ್​ ಅನ್ನು ತೆಗೆಯಲಾಗುವುದು. ಚಾಕೊಲೇಟಿಯರ್‌ಗಳನ್ನು ಕೊಕೊ ರಸ, ಕೋಕೋ ಸಾಲಿಡ್​ ಮತ್ತು ಕೊಕೋ ಬೆಣ್ಣೆಯಾಗಿ ಮಾಡಲಾಗುವುದು. ಬಳಿಕ ಹಾಲು ಮತ್ತು ಸಕ್ಕರೆಯೊಂದಿಗೆ ಸಂಯೋಜಿಸಲಾಗುತ್ತದೆ. ಪ್ರತಿಯೊಂದು ಚಾಕೊಲೇಟ್ ವಿಭಿನ್ನ ವಿಧಾನಗಳು ಮತ್ತು ಕಲ್ಪನೆಗಳನ್ನು ಹೊಂದಿದ್ದು ಅದು ಜಗತ್ತಿನ್ನೆಲ್ಲೆಡೆ ಜನಪ್ರಿಯವಾಗಿದೆ.

ಜನರನ್ನು ಒಂದೂಗೂಡಿಸುವ ಚಾಕೋಲೆಟ್​: ಚಾಕೊಲೇಟ್​ ಪ್ರತಿಯೊಬ್ಬರು ಆಹ್ಲಾದಿಸಿ ಸೇವಿಸುವ ರುಚಿಕರ ತಿನಿಸು ಆಗಿದೆ. ಅದರ ಜೊತೆಗೆ ಸಂಭ್ರಮಾಚರಣೆ, ಮೋಜಿನ ಕ್ಷಣದಲ್ಲಿ, ಕುಟುಂಬ ಸದಸ್ಯರ ನಡುವಿನದ ಉಡುಗೊರೆಯಾಗಿದೆ. ಚಾಕಲೇಟ್ ಸಂತೋಷ, ಸಂಭ್ರಮ ಮತ್ತು ಆಚರಣೆಯ ಸಂಕೇತವಾಗಿದೆ.

ಚಾಕೊಲೇಟ್​ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನ:

  • ಚಾಕೊಲೇಟ್​ ಸೇವನೆಯಿಂದ ನಿಮ್ಮ ಮನಸ್ಥಿತಿ ಬದಲಾಗಿ, ಉಲ್ಲಾಸಿತಗೊಳ್ಳುತ್ತೀರಿ.
  • ಮಾನಸಿಕ ಆರೋಗ್ಯವನ್ನು ಸುಧಾರಿಸಲು ಹಾಗೂ ಖಿನ್ನತೆ ವಿರುದ್ಧ ಸಹಾಯ ಮಾಡುತ್ತದೆ.
  • ಒತ್ತಡ ಕಡಿಮೆ ಮಾಡುತ್ತದೆ.
  • ಡಾರ್ಕ್​ ಚಾಕೋಲೆಟ್​ ಹೃದಯರಕ್ತನಾಳದ ಅಪಾಯವನ್ನು ಕಡಿಮೆ ಮಾಡುತ್ತದೆ.
  • ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ
  • ಆ್ಯಂಟಿ ಆಕ್ಸಿಡೆಂಟ್​ ಆಗರ
  • ಖನಿಜಾಂಶಗಳ ಆಗರ

ಚಾಕೊಲೇಟ್​ ಸೇವನೆಯಿಂದಾಗುವ ತೊಂದರೆ

  • ಅತಿ ಹೆಚ್ಚಿನ ಚಾಕೊಲೇಟ್​ ಸೇವನೆ ಅನಗತ್ಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತೂಕ ಹೆಚ್ಚಳ ಅನೇಕ ಸಮಸ್ಯೆಗೆ ಮೂಲಕ ಕಾರಣ
  • ನಿತ್ಯ ಚಾಕೊಲೇಟ್​ ಸೇವನೆ ಹಲ್ಲಿನ ಆರೋಗ್ಯವನ್ನು ಕೂಡಾ ಹಾಳು ಮಾಡುತ್ತದೆ.
  • ಚಾಕೊಲೇಟ್​ನಲ್ಲಿನ ಸಂಸ್ಕರಿತ ಕೊಬ್ಬು ಇದ್ದು, ಇದು ಟೈಪ್​ 2 ಮಧುಮೇಹಕ್ಕೆ ಕಾರಣವಾಗುತ್ತದೆ.
  • ಇದು ಮೈಗ್ರೇನ್​ ಸಮಸ್ಯೆಗೂ ಕಾರಣವಾಗುತ್ತದೆ.

ಚಾಕೊಲೇಟ್​ ನಿಜಾಂಶ

  • ಕೋಕೋ ಬೀನ್ ಅಮೆಜಾನ್‌ನಲ್ಲಿ ಹುಟ್ಟುತ್ತದೆ. ಆದರೆ ವಿಶ್ವದ ಕೋಕೋದ ಸುಮಾರು 30 ಪ್ರತಿಶತವನ್ನು ಆಫ್ರಿಕಾದಲ್ಲಿ ಬೆಳೆಯಲಾಗುತ್ತದೆ.
  • ಕೋಕೋ ಪಾನೀಯವಲ್ಲದೇ, ಅಜ್ಟೆಕ್ ಸಂಸ್ಕೃತಿಯಲ್ಲಿ ಚಾಕೊಲೇಟ್ ಅನ್ನು ಕರೆನ್ಸಿಯಾಗಿಯೂ ಬಳಸಲಾಗುತ್ತಿತ್ತು.
  • ವಿಜ್ಞಾನಿಗಳ ಪ್ರಕಾರ, ಬಣ್ಣಗಳು ರುಚಿಯ ಗ್ರಹಿಕೆಗೆ ಪರಿಣಾಮ ಬೀರುತ್ತವೆ.

ವಿಶ್ವ ಚಾಕೊಲೇಟ್ ದಿನದ ಹೊರತಾಗಿ, ಬಿಟರ್‌ಸ್ವೀಟ್ ಚಾಕೊಲೇಟ್ ಡೇ (10 ಜನವರಿ), ಮಿಲ್ಕ್ ಚಾಕೊಲೇಟ್ ಡೇ (28 ಜುಲೈ), ವೈಟ್ ಚಾಕೊಲೇಟ್ ಡೇ (22 ಸೆಪ್ಟೆಂಬರ್), ಚಾಕೊಲೇಟ್ ಕವರ್ಡ್ ಎನಿಥಿಂಗ್ ಡೇ (16 ಡಿಸೆಂಬರ್) ಅನೇಕ ಚಾಕೊಲೇಟ್‌ಗಳಿಗೆ ಹಲವಾರು ದಿನಗಳು ಮೀಸಲಾಗಿದೆ.

ಅತ್ಯುತ್ತಮ ಚಾಕೊಲೇಟ್​ ತಯಾರಿಸುವ ದೇಶಗಳು

  • ಬೆಲ್ಜಿಯಂ
  • ಸ್ವಿಟ್ಜರ್ಲೆಂಡ್
  • ಈಕ್ವೆಡಾರ್
  • ಯುನೈಟೆಡ್ ಕಿಂಗ್ಡಮ್
  • ಐವರಿ ಕೋಸ್ಟ್
  • ಇಟಲಿ
  • ಯುನೈಟೆಡ್ ಸ್ಟೇಟ್ಸ್

ಇದನ್ನೂ ಓದಿ: ಚಾಕೋಲೆಟ್​ನೊಂದಿಗೆ ಪ್ರೀತಿಯ ಬಂಧದ ಸಿಹಿ ಮತ್ತಷ್ಟು ಹೆಚ್ಚಿಸಿಕೊಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.