ETV Bharat / state

ಜಿ ಟಿ ದೇವೇಗೌಡರು ವಾಸ್ತವಾಂಶ ಮಾತನಾಡಿದ್ದಾರೆ : ಗೃಹ ಸಚಿವ ಡಾ ಜಿ ಪರಮೇಶ್ವರ್​ - Dr G Parameshwar

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಸಿಎಂ ಸಿದ್ದರಾಮಯ್ಯ ಪರ ಜಿ. ಟಿ ದೇವೇಗೌಡರ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ. ಜಿ. ಟಿ ದೇವೇಗೌಡರು ವಾಸ್ತಾವಾಂಶ ಮಾತನಾಡಿದ್ದಾರೆ ಎಂದಿದ್ದಾರೆ.

home-minister-dr-g-parameshwar
ಗೃಹ ಸಚಿವ ಡಾ ಜಿ ಪರಮೇಶ್ವರ್​ (ETV Bharat)
author img

By ETV Bharat Karnataka Team

Published : Oct 5, 2024, 6:14 PM IST

ಧಾರವಾಡ : ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಜಿ. ಟಿ ದೇವೇಗೌಡರ ಹೇಳಿಕೆ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಾತನಾಡಿದ್ದಾರೆ. ಜಿ. ಟಿ ದೇವೇಗೌಡರು ವಾಸ್ತವಾಂಶ ಮಾತನಾಡಿದ್ದಾರೆ. ಅವರು ಕಾಂಗ್ರೆಸ್​ಗೆ ಬಂದ್ರೆ ಶಕ್ತಿ ಬರುತ್ತದೆ ಅನೋದಿದ್ರೆ ತೆಗೆದುಕೊಳ್ಳುತ್ತೇವೆ. ಯಾರು ಕಾಂಗ್ರೆಸ್​ನ ಸಿದ್ದಾಂತ ಒಪ್ಪಿಕೊಳ್ಳುತ್ತಾರೋ ಅವರನ್ನ ಕಾಂಗ್ರೆಸ್​ಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿಎಂ ಸ್ಥಾನಕ್ಕೆ ಪರಮೇಶ್ವರ್​ ಹೆಸರು ಕೇಳಿ ಬರುತ್ತಿರುವ ವಿಚಾರದ ಬಗ್ಗೆ ಮಾತನಾಡಿದರು. ಅದು ನನಗೆ ಕೇಳಿಸಿಲ್ಲ, ಮಾಧ್ಯಮಗಳಿಗೆ ಹೇಗೆ ಕೇಳಿಸುತ್ತೆ. ಅದು ನನಗೆ ಕೇಳಿಸಿದಾಗ ನೋಡೋಣ ಬಿಡಿ ಎಂದು ಹೇಳಿದರು.

ಗೃಹ ಸಚಿವ ಡಾ ಜಿ ಪರಮೇಶ್ವರ್​ (ETV Bharat)

ರಾಜ್ಯದಲ್ಲಿ CEN ಠಾಣೆಗಳ ನೇಮಕಾತಿಗೆ ಪ್ರತ್ಯೇಕ ಕೇಡರ್, ಜಿಲ್ಲೆಗೊಬ್ಬ ಪ್ರತ್ಯೇಕ ಎಸ್​ಪಿ ಸಹ ನೇಮಕ ಮಾಡುತ್ತೇವೆ. ಪ್ರತಿ ಜಿಲ್ಲೆಯಲ್ಲಿ ಫಾರೆನ್ಸಿಕ್ ಸಿಇಎನ್ ಪೊಲೀಸ್ ಠಾಣೆ ಮಾಡಿದ್ದೇವೆ. ಪ್ರತಿ ಜಿಲ್ಲೆಯಲ್ಲಿ ಬೇಸಿಕ್ ಫಾರೆನ್ಸಿಕ್ ಸೈನ್ಸ್ ಲ್ಯಾಬ್ ಸಹ ಮಾಡಿದ್ದೇವೆ. ಹೊಸದಾಗಿ 43 ಫಾರೆನ್ಸಿಕ್ CEN ಪೊಲೀಸ್ ಠಾಣೆಗಳನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅದಕ್ಕೊಂದು ವರ್ಟಿಕಲ್ ಕ್ರಿಯೆಟ್ ಮಾಡುತ್ತೇವೆ. ಈಗ ಅದಕ್ಕೊಬ್ಬ ಡಿವೈಎಸ್ಪಿ ಇದ್ದಾರೆ ಎಂದು ತಿಳಿಸಿದರು.

CEN ಠಾಣೆಗಳ ನೇಮಕಕ್ಕೆ ಪ್ರತ್ಯೇಕ ಕೇಡರ್: ಮುಂದಿನ ದಿನಗಳಲ್ಲಿ ಅದಕ್ಕಾಗಿಯೇ ಎಸ್​ಪಿ ಅಥವಾ ಬೇರೆ ಹಿರಿಯ ಅಧಿಕಾರಿ ನೇಮಕ ಸಹ ಮಾಡುತ್ತೇವೆ. ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ಹೀಗಾಗಿ ಇದಕ್ಕೆ ನಾವು ಹೆಚ್ಚು ಮಹತ್ವ ಕೊಟ್ಟಿದ್ದೇವೆ. ಈ ನಿಮಿತ್ತವಾಗಿ ಫಾರೆನ್ಸಿಕ್ ವಿವಿಗೆ ಭೇಟಿ ನೀಡಿದ್ದೇನೆ. ಉತ್ತಮವಾದ ವಿಸಿಟ್ ಇದಾಗಿದೆ. ಪೊಲೀಸರಿಗೆ ಎರಡು ಹಂತದಲ್ಲಿ ಇವರು ತರಬೇತಿ ನೀಡುತ್ತಾರೆ. ಮುಂದೆ CEN ಠಾಣೆಗಳ ನೇಮಕಕ್ಕೆ ಪ್ರತ್ಯೇಕ ಕೇಡರ್ ಮಾಡುತ್ತೇವೆ ಎಂದು ಹೇಳಿದರು.

545 ಪಿಎಸ್‌ಐ ನೇಮಕಾತಿ ವಿಚಾರಕ್ಕೆ ಮಾತನಾಡಿ, ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಕೆಲವರು ಕೋರ್ಟ್​ಗೆ ಹೋಗಿದ್ದಾರೆ. ಪ್ರಿಯಾಂಕ್​ ಖರ್ಗೆ, ಈಶ್ವರ ಖಂಡ್ರೆ, ಶರಣಪ್ರಕಾಶ್ ಅವರ ಬೇಡಿಕೆಯೂ ಬಂದಿದೆ. 371ಜೆ ಗೆ ಶೇ. 8 ರಷ್ಟು ಮೀಸಲಾತಿ ಕೇಳಿದ್ದಾರೆ.

ಕೋರ್ಟ್ ತೀರ್ಪು ಆಧರಿಸಿ ಮುಂದಿನ ನಿರ್ಧಾರ : 2023ರಲ್ಲಿ ಈ ಸಂಬಂಧ ಆದೇಶವಾಗಿದೆ. ಈ ಆದೇಶ ಪಾಲಿಸಿ ಎಂದು ಒತ್ತಾಯಿಸುತ್ತಿದ್ದಾರೆ. 545 ಪಿಎಸ್‌ಐ ನೇಮಕ ಪ್ರಾರಂಭವಾಗಿದ್ದು 2020 ರಲ್ಲಿ. ಹೀಗಾಗಿ 2020 ನೋಟಿಫಿಕೇಷನ್​ನಲ್ಲಿ ಆಗಬೇಕು ಅನ್ನೋದು ಇನ್ನೊಂದು ವಾದ. ಇದನ್ನೇ ಈಗ ಕೋರ್ಟ್ ತೀರ್ಮಾನಿಸಬೇಕಿದೆ. ಕೋರ್ಟ್ ತೀರ್ಪು ಆಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಸಿಎಂ ಬದಲಾವಣೆ ವಿಚಾರ ಬರೀ ಊಹಾಪೋಹ: ಸಿದ್ದರಾಮಯ್ಯ - Siddaramaiah Clarifies

ETV Bharat Logo

Copyright © 2024 Ushodaya Enterprises Pvt. Ltd., All Rights Reserved.