ETV Bharat / state

ರಾಜ್ಯದಲ್ಲಿ ಇ-ಟ್ಯಾಕ್ಸಿ ನಿಷೇಧ: ಆದೇಶಕ್ಕೆ ಕಾರಣವಾದ ತಜ್ಞರ ವರದಿ ಹೇಳಿರುವುದೇನು? - E taxi ban in karnatak - E TAXI BAN IN KARNATAK

ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ನಿಷೇಧದ ಕುರಿತು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯ ಸಮಿತಿ ವರದಿ ಸಲ್ಲಿಸಿದ್ದು, ಅದರಲ್ಲಿ ಕಾರಣ ತಿಳಿಸಲಾಗಿದೆ.

ರಾಜ್ಯದಲ್ಲಿ ಇ-ಟ್ಯಾಕ್ಸಿ ನಿಷೇಧ
ರಾಜ್ಯದಲ್ಲಿ ಇ-ಟ್ಯಾಕ್ಸಿ ನಿಷೇಧ (ETV Bharat)
author img

By ETV Bharat Karnataka Team

Published : Jul 6, 2024, 1:14 PM IST

ಬೆಂಗಳೂರು: ನಗರದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದೆ. ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಗುರುವಾರ ಶಾಂತಿನಗರ ಸಾರಿಗೆ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದ ಬೆನ್ನಲ್ಲೇ ನಗರದ 11 ಆರ್.ಟಿ.ಒ ಕಚೇರಿಗಳ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಒಳಗೊಂಡಂತೆ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಸಾರಿಗೆ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ನಗರದಲ್ಲಿ ಬಸ್‌, ರೈಲು ಹಾಗೂ ಮೆಟ್ರೋ ರೈಲು ನಿಲ್ದಾಣಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು ಹಾಗೂ ವಾಹನಗಳ ಸಂಚಾರ ದಟ್ಟಣೆಯನ್ನ ನಿಯಂತ್ರಿಸುವ ಉದ್ದೇಶದಿಂದ 2021ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕ ಇ-ಬೈಕ್‌ ಟ್ಯಾಕ್ಸಿ ಯೋಜನೆಯನ್ನ ಜಾರಿಗೊಳಿಸಿತ್ತು. ಮತ್ತು ಆ ಸಂದರ್ಭದಲ್ಲಿ ಖಾಸಗಿ ಕಂಪನಿಗಳಿಗೆ ಇ-ಟ್ಯಾಕ್ಸಿ ಸೇವೆ ನೀಡಲು ಪರವಾನಗಿ ನೀಡಿತ್ತು. ವೈಟ್ ಬೋರ್ಡ್ ಹೊಂದಿರುವ ಬೈಕ್‌ಗಳ ಮೂಲಕವೂ ಟ್ಯಾಕ್ಸಿ ಸೇವೆ ಒದಗಿಸಲು ಸರ್ಕಾರ ಅನುಮತಿ ನೀಡಿತ್ತು.

ಸರ್ಕಾರದ ಆದೇಶವನ್ನ ತೀವ್ರವಾಗಿ ವಿರೋಧಿಸಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರು ಅನೇಕ ಕಡೆಗಳಲ್ಲಿ ಬೈಕ್ ಟ್ಯಾಕ್ಸಿ ಸವಾರರನ್ನ ಅಡ್ಡಗಟ್ಟಿ ಹಲ್ಲೆ ನಡೆಸಿದ್ದ ಪ್ರಕರಣಗಳು ವರದಿಯಾಗಿದ್ದವು. ಅಲ್ಲದೆ ಗ್ರಾಹಕ ಮಹಿಳೆಯರಿಗೆ ಬೈಕ್ ಟ್ಯಾಕ್ಸಿ ಚಾಲಕರು ಲೈಂಗಿಕ ಕಿರುಕುಳ ನೀಡಿದ ಪ್ರಕರಣಗಳೂ ಸಹ ದಾಖಲಾಗಿದ್ದವು. ಬಳಿಕ ಎಚ್ಚೆತ್ತುಕೊಂಡಿದ್ದ ಸರ್ಕಾರ ಇ–ಬೈಕ್‌ ಟ್ಯಾಕ್ಸಿ ಸೇವೆಯನ್ನ ಮುಂದುವರೆಸುವುದರ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನ ರಚಿಸಿತ್ತು.

ಸಮಿತಿ ಹೇಳಿದ್ದೇನು: ಇ-ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಕೆಲವು ಖಾಸಗಿ ಆ್ಯಪ್‌ ಆಧಾರಿತ ಸಂಸ್ಥೆಗಳು ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿಸುತ್ತಿದ್ದು, ಸಾರಿಗೆಯೇತರ ದ್ವಿಚಕ್ರ ವಾಹನಗಳನ್ನು ಸಾರಿಗೆಗಾಗಿ ಬಳಸುತ್ತಿವೆ. ಈ ಯೋಜನೆಯು ಆಟೋ, ಕ್ಯಾಬ್‌, ಟ್ಯಾಕ್ಸಿ ಚಾಲಕರು ಮತ್ತು ಬೈಕ್‌ ಟ್ಯಾಕ್ಸಿ ಸವಾರರ ನಡುವಿನ ಸಂಘರ್ಷಕ್ಕೆ ಕಾರಣವಾಗುತ್ತಿದ್ದು, ಈಗಾಗಲೇ ಅನೇಕ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಬೈಕ್ ಟ್ಯಾಕ್ಸಿ ಸೇವೆಯು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂದು ಸಮಿತಿ ತನ್ನ ವರದಿ ನೀಡಿತ್ತು.

ವರದಿ ಅನ್ವಯ ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಕರ್ನಾಟಕ ಇ-ಬೈಕ್‌ ಟ್ಯಾಕ್ಸಿ ಯೋಜನೆಯನ್ನು ರದ್ದುಗೊಳಿಸಿ ಇದೇ ವರ್ಷ ಮಾರ್ಚ್‌ನಲ್ಲಿ ಸರ್ಕಾರ ಆದೇಶಿಸಿತ್ತು. ಆದಾಗ್ಯೂ ಸಹ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ನಗರದಲ್ಲಿ ಸಂಚರಿಸುತ್ತಿವೆ. ತಕ್ಷಣ ಅವುಗಳಿಗೆ ಕಡಿವಾಣ ಹಾಕುವಂತೆ ಗುರುವಾರ ಖಾಸಗಿ ಸಾರಿಗೆ ವಾಹನಗಳ ಸಂಘಟನೆಗಳ ಒಕ್ಕೂಟದ ನೂರಾರು ಸದಸ್ಯರು ಸಾರಿಗೆ ಇಲಾಖೆಯ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ: ಬೆಂಗಳೂರು: ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳಿಗೆ ದಂಡದ ಬಿಸಿ - E TAXI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.