ETV Bharat / health

ಮೊದಲ ಬಾರಿಗೆ ರಕ್ತದ ಕೊಲೆಸ್ಟ್ರಾಲ್ ಮಟ್ಟ ತಡೆಗಟ್ಟಲು ಮಾರ್ಗಸೂಚಿ ಪ್ರಕಟ: ಗೈಡ್​​​​​ಲೈನ್ಸ್​​​ನಲ್ಲಿ ಏನೇನಿದೆ ಗೊತ್ತಾ? - guidelines on blood cholesterol - GUIDELINES ON BLOOD CHOLESTEROL

ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ರಕ್ತದ ಕೊಲೆಸ್ಟ್ರಾಲ್ ಮಟ್ಟ ತಡೆಗಟ್ಟಲು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ಮಾರ್ಗಸೂಚಿಗಳು ಅನುಸರಿಸಿದರೆ ನಿಮ್ಮ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. ಹಾಗಾದರೆ ಆ ಮಾರ್ಗಸೂಚಿಗಳೇನು ಎಂಬುದನ್ನು ಇಲ್ಲಿ ತಿಳಿಯಿರಿ.

ರಕ್ತದ ಕೊಲೆಸ್ಟ್ರಾಲ್ ಮಟ್ಟ ತಡೆಗಟ್ಟಲು ಮಾರ್ಗಸೂಚಿ ಪ್ರಕಟ
ರಕ್ತದ ಕೊಲೆಸ್ಟ್ರಾಲ್ ಮಟ್ಟ ತಡೆಗಟ್ಟಲು ಮಾರ್ಗಸೂಚಿ ಪ್ರಕಟ (Getty Images)
author img

By ETV Bharat Karnataka Team

Published : Jul 6, 2024, 6:36 PM IST

ಹೈದರಾಬಾದ್: ದೇಶದಲ್ಲೇ ಮೊದಲ ಬಾರಿಗೆ ರಕ್ತದ ಕೊಲೆಸ್ಟ್ರಾಲ್ ಮಟ್ಟದಲ್ಲಿ ಅಸಹಜ ಏರಿಳಿತವನ್ನು (ಡಿಸ್ಲಿಪಿಡೆಮಿಯಾ) ತಡೆಗಟ್ಟಲು ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ಸಿಎಸ್ಐ) ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ಸಿಎಸ್‌ಐ ಅಧ್ಯಕ್ಷ ಡಾ.ಪ್ರತಾಪಚಂದ್ರ ರಥ ಮಾತನಾಡಿ, ಇದೊಂದು ಸೈಲೆಂಟ್ ಕಿಲ್ಲರ್ ಇದ್ದಂತೆ. ಡಿಸ್ಲಿಪಿಡೆಮಿಯಾದಲ್ಲಿ ಅಧಿಕ ರಕ್ತದ ಕೊಲೆಸ್ಟ್ರಾಲ್, ಹೆಚ್ಚಿನ ಎಲ್‌ಡಿಎಲ್ - ಕೊಲೆಸ್ಟ್ರಾಲ್ (ಕೆಟ್ಟ ಕೊಲೆಸ್ಟ್ರಾಲ್), ಹೆಚ್ಚಿನ ಟ್ರೈಗ್ಲಿಸರೈಡ್‌ಗಳು ಮತ್ತು ಕಡಿಮೆ ಎಚ್‌ಡಿಎಲ್ - ಕೊಲೆಸ್ಟ್ರಾಲ್ (ಒಳ್ಳೆ ಕೊಲೆಸ್ಟ್ರಾಲ್) ಸೇರಿವೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದರ ರೋಗಲಕ್ಷಣಗಳು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳಂತೆ ತ್ವರಿತವಾಗಿ ಕಾಣಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಮಾರ್ಗಸೂಚಿಗಳೇನು?:

  • ಹೃದ್ರೋಗ ಅಥವಾ ಅಧಿಕ ರಕ್ತದ ಕೊಲೆಸ್ಟ್ರಾಲ್ ಮಟ್ಟಗಳ (ಹೈಪರ್ಕೊಲೆಸ್ಟರಾಲ್ಮಿಯಾ) ರೋಗಗಳನ್ನು ಹೊಂದಿದ್ದ ಕುಟುಂಬ ಹಿನ್ನೆಲೆ ಇರುವ ಜನರು ತಮ್ಮ ಮೊದಲ ಲಿಪಿಡ್ ಪ್ರೊಫೈಲ್ ಅನ್ನು 18 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮಾಡಿಸಿಕೊಳ್ಳಬೇಕು.
  • ಕಡಿಮೆ ಅಪಾಯದ ಹೊಂದಿರುವವರು LDL-C ಮಟ್ಟವನ್ನು 100 mg/dL ಗಿಂತ ಕಡಿಮೆ ಮತ್ತು HDL-C ಮಟ್ಟವನ್ನು 130 mg/dL ಗಿಂತ ಕಡಿಮೆ ಇರಿಸಿಕೊಳ್ಳುವ ಗುರಿ ಇಟ್ಟುಕೊಳ್ಳಬೇಕು.
  • ಹೆಚ್ಚಿನ ಅಪಾಯದಲ್ಲಿರುವವರು (ಮಧುಮೇಹ, ರಕ್ತದೊತ್ತಡ) LDL-C ಮಟ್ಟವನ್ನು 70 mg/dL ಗಿಂತ ಕಡಿಮೆ ಮತ್ತು HDL-C ಅಲ್ಲದ ಮಟ್ಟವನ್ನು 100 mg/dL ಗಿಂತ ಕಡಿಮೆ ಇರಿಸಿಕೊಳ್ಳಲು ಪ್ರಯತ್ನಿಸಬೇಕು.
  • ಹೆಚ್ಚಿನ ಅಪಾಯದಲ್ಲಿರುವವರು (ಪಾರ್ಶ್ವವಾಯು , ಹೃದಯಾಘಾತ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವವರು) LDL-C ಮಟ್ಟವನ್ನು 55 mg/dL ಗಿಂತ ಕಡಿಮೆ ಮತ್ತು HDL-C ಅಲ್ಲದ ಮಟ್ಟವನ್ನು 85 mg/dL ಗಿಂತ ಕಡಿಮೆ ಇರಿಸಿಕೊಳ್ಳಬೇಕು.
  • ಇವರು ಆಹಾರದಲ್ಲಿ ಕಡಿಮೆ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ತೆಗೆದುಕೊಳ್ಳಬೇಕು. ಅಲ್ಲದೆ, ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಮತ್ತು ವ್ಯಾಯಾಮವನ್ನು ಮಾಡಬೇಕು.

ಇದನ್ನೂ ಓದಿ: ಕ್ಷಣ ಕ್ಷಣಕ್ಕೂ ಮೂಡ್​ ಬದಲಾಗುತ್ತಾ ಹೋಗುತ್ತಾ?; ಇದಕ್ಕೆ ವಿಟಮಿನ್​ ಬಿ12 ಕೊರತೆಯೇ ಕಾರಣವಾಗಿರಬಹುದು - Vitamin B12 deficiency

ETV Bharat Logo

Copyright © 2025 Ushodaya Enterprises Pvt. Ltd., All Rights Reserved.