Weight Increase Reasons in Winter:ಶೀತ, ಕೆಮ್ಮು, ಕೀಲು ಸೆಳೆತ, ಉಸಿರಾಟಕ್ಕೆ ಸಂಬಂಧಿಸಿದಂತಹ ಸಮಸ್ಯೆಗಳು, ಒಣ ಚರ್ಮ ಚಳಿಗಾಲದಲ್ಲಿ ಕಾಡುತ್ತವೆ. ಆದರೆ, ಈ ಸಮಯದಲ್ಲಿ ತೂಕ ಹೆಚ್ಚಾಗುವುದು ಸಹ ಸಾಧ್ಯವಿದೆ ಎಂದು ಕೆಲವು ಸಂಶೋಧನೆ ಸ್ಪಷ್ಟಪಡಿಸಿವೆ. ಈ ಹಿನ್ನೆಲೆಯಲ್ಲಿ ನೀವು ಅದನ್ನು ತಿಳಿದುಕೊಂಡು ಅಧಿಕ ತೂಕದ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಬೇಕಾಗುತ್ತದೆ.
ಚಳಿಗಾಲದಲ್ಲಿ ಚಳಿಯ ವಾತಾವರಣವಿರುವುದರಿಂದ ನಮ್ಮಲ್ಲಿ ಹೆಚ್ಚಿನವರು ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಲು ಆಸಕ್ತಿಯನ್ನು ತೋರುವುದಿಲ್ಲ. ಇದರ ಪರಿಣಾಮವಾಗಿ, ಫಿಟ್‌ನೆಸ್ ದಿನಚರಿಯು ನಿಯಂತ್ರಣವನ್ನು ಮೀರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗೆಯೇ ಮುಂದುವರಿದರೆ ನಮ್ಮ ದೇಹಕ್ಕೆ ಸೇರುವ ಕ್ಯಾಲೋರಿಗಳು ಕೊಬ್ಬಾಗಿ ಪರಿವರ್ತನೆಗೊಂಡು ತೂಕ ಹೆಚ್ಚುತ್ತದೆ. ಅದಕ್ಕಾಗಿಯೇ ತೂಕವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ವ್ಯಾಯಾಮ ಮಾಡುವುದು ತುಂಬಾ ಮುಖ್ಯವಾಗಿದೆ. ಈ ಅನುಕ್ರಮದಲ್ಲಿ ನೀವು ಮತ್ತು ನಿಮ್ಮ ಸಂಗಾತಿ ಅಥವಾ ಗೆಳತಿ ನಿಮ್ಮೊಂದಿಗೆ ವ್ಯಾಯಾಮ ಮಾಡಲು ಪ್ರೋತ್ಸಾಹಿಸಲು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ವ್ಯಾಯಾಮದಲ್ಲಿ ಆಸಕ್ತಿ ಹೆಚ್ಚುತ್ತದೆ.
ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಸಂಚರಿಸಿ:ವಿಶೇಷವಾಗಿ ಚಳಿಗಾಲದಲ್ಲಿ, ಕೆಲವೊಮ್ಮೆ ದೇಹವು ಬಿಸಿಲಿಗೆ ಒಡ್ಡಿಕೊಳ್ಳುವುದಿಲ್ಲ. ಇದರಿಂದ 'ಸೀಸನಲ್ ಅಫೆಕ್ಟಿವ್ ಡಿಸಾರ್ಡರ್ (ಎಸ್ಎಡಿ)' ಎಂಬ ಒಂದು ರೀತಿಯ ಖಿನ್ನತೆ ಉದ್ಭವಿಸುವ ಸಾಧ್ಯತೆ ಇರುತ್ತದೆ. ಇದರಿಂದ ಆಹಾರದ ಹಂಬಲ ಹೆಚ್ಚುತ್ತದೆ. ಪರಿಣಾಮವಾಗಿ, ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಬೆಳಗ್ಗೆ ಬಿಸಿಲು ಇಲ್ಲದಿದ್ದರೂ ಮಧ್ಯಾಹ್ನ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಕಳೆಯುವಂತೆ ತಜ್ಞರು ಸೂಚಿಸುತ್ತಾರೆ. ಇದು ಪರೋಕ್ಷವಾಗಿ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ಬಿಸಿಲಿನಲ್ಲಿ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬಾರದು ಎಂದು ಅವರು ಸಲಹೆ ನೀಡುತ್ತಾರೆ.
ಹಾರ್ಮೋನುಗಳ ಅಸಮತೋಲನ: ಹಾರ್ಮೋನ್ ವ್ಯಾತ್ಯಾಸವೂ ಕೂಡ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆಯು ಹಾರ್ಮೋನ್ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಇದು ತೂಕ ಇಳಿಸುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಆಹಾರದ ಕಡುಬಯಕೆಗಳನ್ನು ಹೆಚ್ಚಿಸುತ್ತದೆ. ಹಾಗಾಗಿ ಹಾರ್ಮೋನ್ಗಳನ್ನು ಸಮತೋಲನದಲ್ಲಿಡಲು ಜೀವನಶೈಲಿಯ ಬದಲಾವಣೆಯೊಂದಿಗೆ ವೈದ್ಯರ ಸಲಹೆ ಪಾಲಿಸಬೇಕು ಎಂದು ಖ್ಯಾತ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಟಿ. ಲಕ್ಷ್ಮೀಕಾಂತ ತಿಳಿಸುತ್ತಾರೆ.