6-6-6 Walking Rule:ದೈಹಿಕವಾಗಿ ಸಕ್ರಿಯವಾಗಿರದೆ ಇರುವ ಜನರಲ್ಲಿ ಭವಿಷ್ಯದ ಹೃದಯ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ. ಪ್ರತಿದಿನ 6-6-6 ನಿಯಮದ ಪ್ರಕಾರ ಅನುಸರಿಸಲು ತಜ್ಞರು ಸಲಹೆ ನೀಡುತ್ತಾರೆ. ವಾಕಿಂಗ್ ಮಾಡುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ತಡೆಯಬಹುದು ಎಂದು ಅನೇಕ ಸಂಶೋಧನೆಗಳು ಸ್ಪಷ್ಟಪಡಿಸಿವೆ. ಪೋಲಿಷ್ ವೈದ್ಯಕೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ವಿಶ್ವದಾದ್ಯಂತ ಸಾವಿರಾರು ಜನರ ಮೇಲೆ ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಇದೇ ವಿಷಯವು ಮತ್ತೊಮ್ಮೆ ಬಹಿರಂಗವಾಗಿದೆ. ಇದರ ಜೊತೆಗೆ ಇನ್ನೂ ಹಲವು ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ.
ಸಂಶೋಧನೆ ಏನು ಹೇಳುತ್ತೆ?:ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ನಾವು ದೈನಂದಿನ ಚಟುವಟಿಕೆಗಳಿಗೆ ಇನ್ನೂ ಸಾವಿರ ಹೆಜ್ಜೆಗಳನ್ನು ನಡೆದರೂ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಅಪಾಯವು ಶೇಕಡಾ 15 ರಷ್ಟು ಕಡಿಮೆಯಾಗುತ್ತದೆ. ಹಾಗೆಯೇ ಬೆಳಗ್ಗೆ ಅಥವಾ ಸಂಜೆ 4,000 ಹೆಜ್ಜೆ ನಡೆದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಉಳಿಯಬಹುದು ಎಂದು ತಿಳಿದಿದೆ. ಆದ್ದರಿಂದ ಸಮಯವಿದ್ದಾಗ ವಾಕಿಂಗ್ ಮಾಡುವುದು ಸೇರಿದಂತೆ ದೈನಂದಿನ ವ್ಯಾಯಾಮ ಮಾಡಲು ಸೂಚಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಾಕಿಂಗ್ ಅಭ್ಯಾಸ ಮಾಡಿಕೊಳ್ಳಲು ಅತ್ಯಂತ ಸುಲಭವಾದ ಮಾರ್ಗ ಎಂದು ಸಂಶೋಧಕರು ತಿಳಿಸುತ್ತಾರೆ.
6-6-6 ನಿಯಮ ಏನು ತಿಳಿಸುತ್ತೆ?ನಡಿಗೆಯಲ್ಲಿ ಆಸಕ್ತಿ ಇಲ್ಲದವರು ಕೂಡ ಪ್ಲಾನ್ ಮಾಡಿಕೊಳ್ಳಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಪ್ರತಿದಿನ 6-6-6 ನಿಯಮವನ್ನು ಅನುಸರಿಸಿದರೆ ತುಂಬಾ ಒಳ್ಳೆಯದು. ಪ್ರತಿದಿನ ಬೆಳಗ್ಗೆ ಅಥವಾ ಸಂಜೆ 6 ಗಂಟೆಗೆ ಸಮಯವನ್ನು ನಿಗದಿಪಡಿಸಲು ಸೂಚಿಸಲಾಗುತ್ತದೆ. ನಡೆಯುವ ಮೊದಲು 6 ನಿಮಿಷಗಳ ಕಾಲ ವಾರ್ಮ್ಅಪ್ ಮಾಡಬೇಕು ಮತ್ತು ನಂತರ ಒಂದು ಗಂಟೆ ನಡೆಯಬೇಕು.