Avoid These Foods to Reduce High Uric Acid: ಇತ್ತೀಚೆಗೆ ಅನೇಕ ಜನರು ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಹಿಳೆಯರು ಅಥವಾ ಪುರುಷರು ಎಂಬ ಭೇದವಿಲ್ಲದೇ ಅನೇಕ ಜನರು ಈ ಸಮಸ್ಯೆಗೆ ತುತ್ತಾಗಿದ್ದಾರೆ. ಇದನ್ನು ಕಡಿಮೆ ಮಾಡಲು, ವೈದ್ಯರನ್ನು ಸಂಪರ್ಕಿಸಿ ಮತ್ತು ಕೆಲವು ಔಷಧಗಳನ್ನು ತೆಗೆದುಕೊಂಡರೂ ಕೂಡ ಫಲಿತಾಂಶ ಮಾತ್ರ ಸೀಮಿತವಾಗಿದೆ. ಆದಾಗ್ಯೂ, ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿರುವ ಜನರು ತಮ್ಮ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ವೈದ್ಯರು ತಿಳಿಸುವ ಪ್ರಕಾರ, ಯಾವೆಲ್ಲಾ ಆಹಾರಗಳನ್ನು ತ್ಯಜಿಸಬೇಕು ಎಂಬುದನ್ನು ಅರಿತುಕೊಳ್ಳೋಣ.
ಯೂರಿಕ್ ಆ್ಯಸಿಡ್ ಹೇಗೆ ರೂಪಗೊಳ್ಳುತ್ತೆ?: ನಾವು ಸೇವಿಸುವ ಆಹಾರದಲ್ಲಿರುವ ಪ್ಯೂರಿನ್ ಎಂಬ ರಾಸಾಯನಿಕ ವಿಭಜನೆಗೊಂಡು ಯೂರಿಕ್ ಆ್ಯಸಿಡ್ ರೂಪುಗೊಳ್ಳುತ್ತದೆ ಎನ್ನುತ್ತಾರೆ ಖ್ಯಾತ ಆಹಾರ ತಜ್ಞೆ ಡಾ.ಶ್ರೀಲತಾ. ಹೀಗೆ ರೂಪುಗೊಂಡ ಯೂರಿಕ್ ಆ್ಯಸಿಡ್ ಯಾವಾಗಲೂ ಮೂತ್ರದ ಮೂಲಕ ಹೊರ ಹೋಗುತ್ತದೆ. ಆದರೆ, ಕೆಲವೊಮ್ಮೆ ಯೂರಿಕ್ ಆಸಿಡ್ ಅಧಿಕವಾಗಿ ಬಿಡುಗಡೆಯಾಗಿ ಮೂತ್ರ ಸರಿಯಾಗಿ ಹೋಗದೇ ಈ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಯೂರಿಕ್ ಆ್ಯಸಿಡ್ ಸರಿಯಾಗಿ ವಿಸರ್ಜಿಸುವುದಿಲ್ಲ ಮತ್ತು ಅದು ರಕ್ತದಲ್ಲಿ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಹಾಗೆ ಉಳಿದಿರುವ ಯೂರಿಕ್ ಆ್ಯಸಿಡ್ ಹರಳುಗಳಾಗುತ್ತವೆ ಮತ್ತು ಕೀಲುಗಳ ಸುತ್ತ ಮತ್ತು ಅಂಗಾಂಶಗಳಲ್ಲಿ ಸಂಗ್ರಹವಾಗುತ್ತದೆ. ಮತ್ತು ಹೈಪರ್ಯುರಿಸೆಮಿಯಾಕ್ಕೆ ಕಾರಣವಾಗುತ್ತದೆ ಎಂದು ವಿವರಿಸಲಾಗಿದೆ. ಅಧಿಕ ತೂಕ ಹೊಂದಿರುವವರಿಗೆ ಈ ಯೂರಿಕ್ ಆಸಿಡ್ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.
ಯೂರಿಕ್ ಆ್ಯಸಿಡ್ ಹೆಚ್ಚಾದರೆ ಏನಾಗುತ್ತೆ?: ನಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುವುದು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಯೂರಿಕ್ ಆ್ಯಸಿಡ್ ಹೆಚ್ಚಳವು ಮೂತ್ರಪಿಂಡಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಇದರ ಹೆಚ್ಚಳದಿಂದ ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಅಧಿಕ ರಕ್ತದೊತ್ತಡ, ಕೀಲು ನೋವು, ಊತ ಹಾಗೂ ನಡೆಯಲು ತೊಂದರೆಯಾಗುವ ಸಂಭವವಿದೆ. ರಕ್ತದಲ್ಲಿನ ಯೂರಿಕ್ ಆ್ಯಸಿಡ್ ಮಟ್ಟವು ಹೆಚ್ಚಾಗುವುದರಿಂದ ಜೀವಿತಾವಧಿಯು ಸುಮಾರು 11 ವರ್ಷಗಳವರೆಗೆ ಕಡಿಮೆ ಮಾಡಬಹುದು ಎಂದು ಅನೇಕ ಅಧ್ಯಯನಗಳಿಂದ ತಿಳಿದಿದೆ. ಆದ್ದರಿಂದ ಹೆಚ್ಚಿನ ಯೂರಿಕ್ ಆ್ಯಸಿಡ್ ಹೊಂದಿರುವವರು ಕೆಲವು ಆಹಾರ ಪದಾರ್ಥಗಳನ್ನು ತ್ಯಜಿಸಬೇಕು.