ಕರ್ನಾಟಕ

karnataka

ETV Bharat / health

ಐಐಟಿ ಗುವಾಹಟಿ ಸಂಶೋಧಕರಿಂದ ಹಂದಿ ಜ್ವರದ ವಿರುದ್ಧ ಮೊದಲ ಮರುಸಂಯೋಜಕ ಲಸಿಕೆ ಅಭಿವೃದ್ದಿ - recombinant vaccine for swine fever - RECOMBINANT VACCINE FOR SWINE FEVER

ಭಾರತದಲ್ಲಿ ಈ ಹಂದಿ ಜ್ವರವೂ ಆಗ್ಗಿಂದಾಗಲೇ ಕಂಡು ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಹಾಗೇ ಬಿಹಾರ, ಕೇರಳ, ಪಂಜಾಬ್​, ಹರಿಯಾಣ ಮತ್ತು ಗುಜರಾತ್​ನಲ್ಲಿ ಆಗಾಗ ವರದಿ ಆಗುತ್ತಿರುತ್ತದೆ.

transfer of key technology rollout of Indias first recombinant vaccine for swine fever
transfer of key technology rollout of Indias first recombinant vaccine for swine fever

By ETV Bharat Karnataka Team

Published : Mar 26, 2024, 3:07 PM IST

ನವದೆಹಲಿ: ಐಐಟಿ ಗುವಾಹಟಿ ಸಂಶೋಧಕರು ಹಂದಿ ಮತ್ತು ಕಾಡು ಹಂದಿ ಜ್ವರಕ್ಕೆ ಭಾರತದ ಮೊದಲ ಮರು ಸಂಯೋಜಕ ಲಸಿಕೆಯ ಅಭಿವೃದ್ಧಿ ಪಡಿಸಿದೆ. ಸ್ವೈನ್​ ಫೀವರ್​ (ಹಂದಿ ಜ್ವರ), ಹಂದಿಗಳಲ್ಲಿ ಅತಿ ಹೆಚ್ಚು ಪ್ರಸರಣ ಹೊಂದಿದ್ದು, ಹೆಚ್ಚಿನ ಸಾವಿನ ದರಕ್ಕೆ ಕಾರಣವಾಗುತ್ತದೆ. ಈ ಜ್ವರವೂ ಸದ್ಯ ಮನುಷ್ಯರ ಮೇಲೆ ಯಾವುದೇ ಪರಿಣಾಮ ಹೊಂದಿಲ್ಲ.

ಭಾರತದಲ್ಲಿ ಈ ಹಂದಿ ಜ್ವರವೂ ಆಗ್ಗಿಂದಾಗಲೇ ಕಂಡು ಬರುತ್ತಿದೆ. ಅದರಲ್ಲೂ ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಹಾಗೇ ಬಿಹಾರ, ಕೇರಳ, ಪಂಜಾಬ್​, ಹರಿಯಾಣ ಮತ್ತು ಗುಜರಾತ್​ ಸೇರಿದಂತೆ ಅನೇಕ ಕಡೆ ಕಂಡು ಬರುತ್ತಿದೆ. ಐಐಟಿ - ಜಿ ಪ್ರವರ್ತಕ ಲಸಿಕೆ ತಂತ್ರಜಜ್ಞಾನವನ್ನು ಬಯೋಮೆಡ್​​ಗೆ ಇದನ್ನು ಯಶಸ್ವಿಯಾಗಿ ವರ್ಗಾಯಿಸಿದೆ. ಗುಣಮಟ್ಟದ ಲಸಿಕೆ ಉತ್ಪಾದನೆಯಲ್ಲಿ ಬಯೋಮೆಡ್​​ ಸಂಸ್ಥೆ ಪರಿಣತಿ ಪಡೆದಿದೆ.

ಎಚ್​1ಎನ್​1 ವಿರುದ್ಧವಾಗಿ 2018-19ರಲ್ಲಿ ಐಐಟಿ ಗುವಾಹಟಿಯ ಬಯೋಸೈನ್ಸ್​​​ ಮತ್ತು ಬಯೋ ಇಂಜಿನಿಯರಿಂಗ್​​ ವಿಭಾಗ ಮತ್ತು ಗುವಾಹಟಿಯ ಅಸ್ಸಾಂ ಕೃಷಿ ವಿಶ್ವವಿದ್ಯಾಲಯ ಈ ಲಸಿಕೆ ತಯಾರಿಕೆಯಲ್ಲಿ ಜಂಟಿ ಪ್ರಯತ್ನ ಆರಂಭಿಸಿತು. ಈ ತಂತ್ರಜ್ಞಾನವು ಹಂದಿಗಳು ಮತ್ತು ಕಾಡುಹಂದಿಗಳಲ್ಲಿನ ಹಂದಿ ಜ್ವರದ ವೈರಸ್ ವಿರುದ್ಧ ಮರು ಸಂಯೋಜಕ ವೆಕ್ಟರ್ ಲಸಿಕೆಯ ವಿನ್ಯಾಸ ನಡೆಸಿದೆ.

ಪ್ರಾಣಿ ಮತ್ತು ಮಾನವ ರೋಗವನ್ನು ಗುರಿಯಾಗಿಸಿಕೊಂಡು ಲಸಿಕೆ ಅಭಿವೃದ್ಧಿಯಲ್ಲಿ ರಿವರ್ಸ್​​ ಜೆನೆಟಿಕ್​ ಸಾಮರ್ಥ್ಯದಾಯಕ ಮಾದರಿಯಾಗಿದೆ. ಇನ್​ ಫ್ಲುಯೆಂಜಾ ವಿರುದ್ಧ ರಿವರ್ಸ್​​ ಜೆನೆಟಿಕ್ ಬಳಕೆ ಮಾಡಿ​ ಲಸಿಕೆ ಅಭಿವೃದ್ಧಿ ಮಾಡಲಾಗಿತ್ತು. ಇದೀಗ ಅದೇ ರೀತಿಯಲ್ಲಿ ಪ್ರಾಣಿಗಳ ರೋಗದ ವಿರುದ್ಧವೂ ಇದೇ ತಂತ್ರಜ್ಞಾನ ಬಳಕೆ ಮಾಡಿ ಲಸಿಕೆಯನ್ನು ಅಭಿವೃದ್ಧಿ ಮಾಡಲಾಗಿದೆ. ಈ ಅಧ್ಯಯನವನ್ನು ಪ್ರೊಸೆಸ್​​ ಬಯೋಕೆಮಿಸ್ಟ್ರಿ ಮತ್ತು ಅರ್ಕೈವ್ಸ್​​​ ಆಫ್​​ ವೈರಲಾಜಿ ಎಂಬ ಎರಡು ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

ಈ ಲಸಿಕೆಯಲ್ಲಿ ಸಂಶೋಧಕರು ನ್ಯೂಕ್ಯಾಸೆಲ್​ ಡೀಸಿಸ್​ ವೈರಸ್​ (ಎನ್​ಡಿವಿ) ಬಳಕೆ ಮಾಡಿದ್ದಾರೆ. ಕೋಳಿಗಳಲ್ಲಿನ ಅದರ ರೋಗಕಾರಕತೆಯನ್ನು ಸಾಂಪ್ರದಾಯಿಕವಾಗಿ ಅಧ್ಯಯನ ಮಾಡಲಾಗಿದೆ. ಇವು ಸ್ವೈನ್​ ಫೀವರ್​​ ವೈರಸ್​ನ ಅಗತ್ಯ ಪ್ರೋಟಿನ್​ ಅನ್ನು ಸಾಗಾಣೆ ಮಾಡುತ್ತದೆ. ಈ ಆವಿಷ್ಕಾರದ ಮಾದರಿಗಳು ದೇಹದಲ್ಲಿನ ರೋಗ ನಿರೋಧಕವನ್ನು ಅಭಿವೃದ್ಧಿ ಮಾಡಿ, ಶೀಘ್ರ ಮತ್ತು ವೆಚ್ಚ ಪರಿಣಾಮಕಾರಿಯಾಗಿದೆ.

ಈ ಲಸಿಕೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಸೃಷ್ಟಿಸಿ, ನಿರ್ಮಾಣ ಮಾಡಲಾಗಿದೆ. ಭಾರತದ ಹಂದಿ ಉದ್ಯಮಕ್ಕೆ ಈ ರೋಗವೂ ಹೆಚ್ಚಿನ ಬೆದರಿಕೆಯನ್ನು ಒಡ್ಡುತ್ತಿದ್ದು, ಈ ಸಂಬಂಧ ಯಾವುದೇ ಲಸಿಕೆಗಳು ಭಾರತದಲ್ಲಿ ಲಭ್ಯವಿಲ್ಲ. ಲಸಿಕೆ ತಂತ್ರಜ್ಞಾನವನ್ನು ಪಶು ಲಸಿಕೆ ವಲಯಕ್ಕೆ ವರ್ಗಾಯಿಸುತ್ತಿರುವ ಗಮನಾರ್ಹ ಸಾಧನೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಸದ್ಯ ಈ ಲಸಿಕೆ ಪರೀಕ್ಷಾ ಪ್ರಕ್ರಿಯೆ ಹಂತದಲ್ಲಿದ್ದು, ಲೈಸೆನ್ಸ್​ ವಿಶ್ಲೇಷಣೆ ನಡೆಸಲಾಗುತ್ತಿದೆ ಎಂದು ಐಐಟಿ ಗುವಾಹಟಿ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ:ಆಫ್ರಿಕನ್​ ಹಂದಿ ಜ್ವರ ಹಾವಳಿ: 1 ಸಾವಿರ ಹಂದಿಗಳ ಹತ್ಯೆ.. ಎಲ್ಲೆಡೆ ಮುನ್ನೆಚ್ಚರಿಕೆ!

ABOUT THE AUTHOR

...view details